ಸಿಬಿಎಸ್ಇ ಶಾಲೆಗೆ ಪ್ರವೇಶ ಪಡೆಯಲು ಆಧಾರ್ ಕಡ್ಡಾಯ

Posted By:

ಮುಂಬರುವ ವರ್ಷದಿಂದ ಸಿಬಿಎಸ್ಇ ಶಾಲೆಗಳಲ್ಲಿ ಆಧಾರ್ ಇಲ್ಲದಿದ್ದರೆ ಪ್ರವೇಶಾತಿ ದೊರೆಯುವುದಿಲ್ಲ. ಹೊಸದಾಗಿ ಶಾಲೆಗೆ ಪ್ರವೇಶ ಪಡೆಯಬೇಕೆಂದರೆ ಕಡ್ಡಾಯವಾಗಿ ಆಧಾರ್ ಸಲ್ಲಿಸಲೇಬೇಕು.

ಅಜೀಂ ಪ್ರೇಮ್ ಜೀ ಫೌಂಡೇಷನ್: 2018ನೇ ಸಾಲಿನ ಫೆಲೋಶಿಪ್ ಗೆ ಅರ್ಜಿ ಆಹ್ವಾನ

ಕೆಲದಿನಗಳ ಹಿಂದಷ್ಟೆ ಸಿಬಿಎಸ್ಇ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿತ್ತು. ಈಗ ಸಿಬಿಎಸ್ಇಗೆ ಪ್ರವೇಶ ಪಡೆಯಲು ಕೂಡ ಆಧಾರ್ ಕಡ್ಡಾಯವಾಗಿದೆ. ಸಿಬಿಎಸ್ಇಗೆ ಒಳಪಡುವ ಎಲ್ಲಾ ಶಾಲೆಗಳಿಗು ಇದು ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

ಶಾಲೆಗೆ ಸೇರಲು ಆಧಾರ್ ಕಡ್ಡಾಯ

ಆಧಾರ್ ಕಡ್ಡಾಯವಿಲ್ಲದ ಹಲವು ರಾಜ್ಯಗಳಲ್ಲಿ ಬ್ಯಾಂಕ್ ವಿವರವನ್ನು ಕೇಳಲಾಗುತ್ತದೆ. ಆದರೆ ಅದರ ಅವಶ್ಯಕತೆ ಇಲ್ಲ. ಆಧಾರ್ ಒಂದಿದ್ದಾರೆ ಸಾಕು ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ. ಅಲ್ಲದೆ ಆಧಾರ್ ಲಿಂಕ್ ಮಾಡುವುದರಿಂದ ಫೋನ್ ವಿವರ ಮತ್ತು ಬ್ಯಾಂಕ್ ವಿವರಗಳನ್ನು ನೀಡುವಂತಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಇದನ್ನು ಗಮನಿಸಿ: ಯುಜಿಸಿ ಮಾನ್ಯತೆಯಿಂದ ಹೊರಗುಳಿದ ಬೆಂಗಳೂರು ವಿವಿಯ ಶೇ.80 ಕಾಲೇಜುಗಳು

ಮಕ್ಕಳಿಗೆ ಆಧಾರ್ ಬದಲಾಗಿ ಪ್ರತ್ಯೇಕ ಗುರುತಿನ ನಂಬರ್ ನೀಡಿ ಅದರಲ್ಲೇ ಎಲ್ಲಾ ವಿವರಗಳು ಇರುವಂತೆ ಮಾಡಬೇಕು ಎಂದು ಅವರು ಹೇಳಿದರು.

ಸಿಬಿಎಸ್ಇ ಶಾಲೆ ದಾಖಲಾತಿಗೆ ಪೋಷಕರ ಆದಾಯ ದಾಖಲೆ ಬೇಕಿಲ್ಲ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ.

ಪರೀಕ್ಷೆಗೆ ಆಧಾರ್

9 ಮತ್ತು 11ನೇ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳ ಹೆಸರನ್ನು ಅಗತ್ಯ ದಾಖಲೆಗಳೊಂದಿಗೆ ಸಿಬಿಎಸ್ಇ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಈಗಾಗಲೇ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.

ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು ಒಂದೊಮ್ಮೆ ಆಧಾರ್ ಇಲ್ಲದೇ ಇದ್ದಲ್ಲಿ ಆಧಾರ್ ಎನ್ರೋಲ್ಮೆಂಟ್ ಸಂಖ್ಯೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಯಾವ ಸಂಯೋಜನೆಯಲ್ಲಿ ಓದುತ್ತಿದ್ದೇನೆಂದು ಕೂಡ ನೋಂದಾಯಿಸಲು ಸೂಚಿಸಲಾಗಿದೆ.

English summary
The Central Board of Secondary Education (CBSE) has made Aadhaar mandatory for all new enrolments from next academic year.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia