Engineering In 8 Regional Languages: ನಿಮಗೀಗ ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡುವ ಅವಕಾಶ

ಕನ್ನಡ ಸೇರಿದಂತೆ ಇನ್ನೂ 7 ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಕಲಿಕೆಗೆ ಅವಕಾಶ

ಇಂಗ್ಲೀಷ್ ಎಂದರೆ ಕಬ್ಬಿಣದ ಕಡಲೆ ಎನ್ನುವ ಅದೆಷ್ಟೋ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಲಿಕೆಯಿಂದ ದೂರ ಉಳಿದರು. ಆದರೆ ಇದೀಗ ನಿಮಗಾಗಿ ಸಿಹಿಸುದ್ದಿಯೊಂದಿಗೆ.

ಇಂಗ್ಲೀಷ್ ನಲ್ಲಿ ಇಂಜಿನಿಯರಿಂಗ್ ಕೋರ್ಸ್ ಕಲಿಕೆ ಕಷ್ಟ ಎಂದು ಯಾರೆಲ್ಲಾ ಹಿಂದೆ ಉಳಿದಿದ್ದೀರೋ ಅಂತಹ ವಿದ್ಯಾರ್ಥಿಗಳು ಈಗ ಕನ್ನಡ ಸೇರಿದಂತೆ ಒಟ್ಟು 8 ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಮಾಡಬಹುದು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯು ಪ್ರಸಕ್ತ ಸಾಲಿನಿಂದ ಮರಾಟಿ, ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಕಲಿಕೆಗೆ ಅವಕಾಶ ನೀಡಿದೆ.

ಎಐಸಿಟಿಇ ಯ ಈ ನಡೆಯಿಂದಾಗಿ ಇಂಗ್ಲೀಷ್ ನಲ್ಲಿ ಕಲಿಕೆ ಕಷ್ಟ ಎಂದು ಇಂಜಿನಿಯರಿಂಗ್ ಕಲಿಕೆಯೆಡೆಗಿನ ಕನಸಿನಿಂದ ದೂರ ಉಳಿದ ಅದೆಷ್ಟೋ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ತಮ್ಮ ಕನಸನ್ನು ಈಡೇರಿಸಲು ಸಹಾಯವಾಗಲಿದೆ.

ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನು ತಮ್ಮ ಮಾತೃಭಾಷೆಯಲ್ಲಿ ಹೆಚ್ಚು ಅಧ್ಯಯನ ಮಾಡಲು ಸಹಕರಿಸಬೇಕೆಂದು ನಮ್ಮ ನಡೆಯಾಗಿತ್ತು ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ತ್ರಬುದ್ದೆ ಹೇಳಿದ್ದಾರೆ. ಈವರೆಗೂ ದೇಶದೆಲ್ಲೆಡೆಯಿಂದ ೫೦೦ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಯುಜಿ ಕೋರ್ಸ್ ಅನ್ನು ೧೧ಕ್ಕೂ ಹೆಚ್ಚು ಭಾಷೆಗಳಲ್ಲಿ ಅಧ್ಯಯನ ಮಾಡುವ ಅವಕಾಶ ಕಲ್ಪಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ನ ಪರಿಕರಗಳನ್ನು ನೀಡಲಾಗುತ್ತದೆ. ಸ್ವಯಂ ಮತ್ತು ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ ಪೋರ್ಟಲ್ ಗಳ ಅಡಿಯಲ್ಲಿ ಕಲಿಸಿದ ಕೋರ್ಸ್ ಗಳನ್ನು ಅನುವಾದಿಸಲಾಗುತ್ತದೆ ಎಂದು ಎಐಸಿಟಿಇ ಅಧ್ಯಕ್ಷರು ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
AICTE allowed colleges to offer engineering degree in eight regional Indian languages of kannadda, hindi, bengali, telugu, tamil, gujarat and malayalam languages.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X