ಅಜೀಂ ಪ್ರೇಮ್ ಜೀ ಫೌಂಡೇಷನ್: 2018ನೇ ಸಾಲಿನ ಫೆಲೋಶಿಪ್ ಗೆ ಅರ್ಜಿ ಆಹ್ವಾನ

Posted By:

ಅಜೀಮ್ ಪ್ರೇಮ್ ಜೀ ಫೌಂಡೇಷನ್ ನ ವಾರ್ಷಿಕ ಫೆಲೋಶಿಪ್-2018 ಕ್ಕೆ ಅರ್ಹ ಅಭ್ಯರ್ಥಿಗಳಲಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಕ್ಷಣದ ಗುಣಮಟ್ಟ ಮತ್ತು ಸಮಾನತೆಗೆ ಕೊಡುಗೆ ನೀಡುವ ಆಸಕ್ತಿಯೊಂದಿಗೆ ಯಾವುದೇ ಕ್ಷೇತ್ರದಲ್ಲಿ 3 ರಿಂದ 10 ವರ್ಷ ಕೆಲಸ್ ಮಾಡಿದ ಅನುಭವವಿದ್ದು, ಯಾವುದೇ ವಿಷಯದಲ್ಲಿ ಪೂರ್ಣವಧಿ ಸ್ನಾತಕೋತ್ತರ ಪದವಿ ಅಥವಾ 4 ವರ್ಷ ವೃತ್ತಿಪರ ಪದವಿ ಪಡೆದವರು ಈ ಕಾರ್ಯಕ್ರಮದಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಕೂಡ ವಿದ್ಯಾರ್ಥಿವೇತನ ನೀಡಬಹುದು ಅಥವಾ ಪಡೆಯಬಹುದು

ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಅತ್ಯಗತ್ಯ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಭಾಷೆಗಳ ಪರಿಚಯ ಕೂಡ ಮುಖ್ಯ.

ಅಜೀಂ ಪ್ರೇಮ್ ಜೀ ಫೌಂಡೇಷನ್ ಫೆಲೋಶಿಪ್

ಈ ಶಿಷ್ಯವೇತನವು ಎರಡು ವರ್ಷ ಅವಧಿಯದಾಗಿದ್ದು, ಈ ಅವಧಿಯಲ್ಲಿ ವೇತನ ಪಡೆಯುವ ಅಭ್ಯರ್ಥಿಯು ಮೊದಲ ವರ್ಷ ಬೋಧನೆ ಅನುಭವ, ಶಾಲೆ ಪರಿಸರ ನಿರ್ಮಾಣ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದನ್ನು ಕಲಿಯಬೇಕಾಗುತ್ತದೆ. ಎರಡನೇ ವರ್ಷ ಫೌಂಡೇಶನ್ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳ ಆಯ್ದ ಶೈಕ್ಷಣಿಕ ಬ್ಲಾಕ್ ಗಳಲ್ಲಿ ಅಭ್ಯರ್ಥಿಗಳು ಕೆಲಸ ನಿರ್ವಹಿಸಬೇಕಾಗುತ್ತದೆ.

ಮಾಸಿಕ ಶಿಷ್ಯವೇತನ: ರೂ.30000/-

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-10-2017
ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 11-12-2017 ರಿಂದ 15-12-2017 ರವರೆಗು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸತಕ್ಕದ್ದು. ನಿಮ್ಮ ಸ್ವವಿರದ ಜೊತೆಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡತಕ್ಕದ್ದು.

ಅರ್ಜಿ ಸಲ್ಲಿಕೆ ವೇಳೆ ನಿಮಗೆ ಶಿಷ್ಯವೇತನ ಏತಕ್ಕಾಗಿ ಬೇಕು ಮತ್ತು ಶಿಕ್ಷಣದ ಕ್ಷೇತ್ರದ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಬರೆಯಬೇಕು.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Azim Premji Foundation
# 134, Doddakannelli
Next to Wipro Corporate Office
Sarjapur Road
Bangalore - 560 035
Karnataka, India

ಸಹಾಯವಾಣಿ-18002740101

ಅಜೀಂ ಪ್ರೇಮ್ ಜೀ ಫೌಂಡೇಷನ್

2001ರಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಷನ್ ಟ್ರಸ್ಟ್ ಸ್ಥಾಪಿಸಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈವರೆಗೆ ಸುಮಾರು 25 ಸಾವಿರ ಶಾಲೆಗಳೊಂದಿಗೆ ಟ್ರಸ್ಟ್ ನಿಕಟ ಸಂಪರ್ಕ ಹೊಂದಿದ್ದು, ಮೂರುವರೆ ಲಕ್ಷ ವಿದ್ಯಾರ್ಥಿಗಳು ಕಂಪನಿಯ ಶಿಕ್ಷಣ ಮತ್ತು ಧನ ಸಹಾಯ ಪಡೆದುಕೊಂಡಿದ್ದಾರೆ. ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ www.azimpremjifoundation.org ಗಮನಿಸಿl

ಇದನ್ನು ಗಮನಿಸಿ: ಟಾಟಾ ಟ್ರಸ್ಟ್ಸ್ ವೊಕೇಷನಲ್ ಸ್ಕಾಲರ್ಶಿಪ್ 2017-18

English summary
Azim Premji Foundation fellowship 2018, The applications for the Fellowship Programme are now open. Only online applications will be accepted.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia