ನಿರುದ್ಯೋಗಿ ಯುವಕರಿಗೆ ಕೆನರಾ ಬ್ಯಾಂಕ್ ಪ್ರಾಯೋಜಿತ ಕರಕುಶಲ ತರಬೇತಿ

Posted By:

ಕೆನರಾ ಬ್ಯಾಂಕ್ ಪ್ರಾಯೋಜಿತ ಕರಕುಶಲ ತರಬೇತಿ ಸಂಸ್ಥೆ ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ (ಟೆರ್ರಾಕೋಟ) ವಿಭಾಗಗಳಲ್ಲಿ ಉಚಿತ ತರಬೇತಿಗಾಗಿ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ವಿಭಾಗದ ತರಬೇತಿ ಅವಧಿಯು 18 ತಿಂಗಳಾಗಿದ್ದು, ಕುಂಭ ಕಲೆಯ ತರಬೇತಿಯು 6 ತಿಂಗಳ ಅವಧಿಯದ್ದಾಗಿರುತ್ತದೆ.

ವಿದ್ಯಾರ್ಹತೆ: ಕನಿಷ್ಠ 7ನೇ ತರಗತಿ ಉತ್ತೀರ್ಣ,

ವಯೋಮಿತಿ: 18ರಿಂದ 35 ವರ್ಷದವರಾಗಿರಬೇಕು.

ಕೆನರಾ ಬ್ಯಾಂಕ್ ಪ್ರಾಯೋಜಿತ ಕರಕುಶಲ ತರಬೇತಿ

ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ, ತರಬೇತಿಗೆ ಬೇಕಾದ ಕಚ್ಚಾ ಸಾಮಗ್ರಿ, ತರಬೇತಿ ಪ್ರವಾಸ, ನುರಿತ ಶಿಕ್ಷಕರಿಂದ ತರಬೇತಿಗಳನ್ನು ನೀಡಲಾಗುವುದು. ಗ್ರಾಮೀಣ, ಬಡ ಮತ್ತು ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳಿಗೆ ಪ್ರಧಾನ್ಯತೆ ನೀಡಲಾಗುವುದು. [ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ]

ಸಲ್ಲಿಸಬೇಕಾದ ದಾಖಲೆಗಳು

ಈ ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳು ಸಂದರ್ಶನದ ವೇಳೆ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸತಕ್ಕದ್ದು.

  • ಶಿಕ್ಷಣ ಪ್ರಮಾಣ ಪತ್ರ/ಅಂಕಪಟ್ಟಿ (ಸ್ಕೂಲ್ ಸರ್ಟಿಫಿಕೇಟ್)
  • ಆಧಾರ್ ಕಾರ್ಡ್/ರೇಷನ್ ಕಾರ್ಡ್/ವೋಟರ್ ಐಡಿ
  • ಇತ್ತೀಚಿನ ಭಾವಚಿತ್ರ
  • ವಾಸ ಸ್ಥಳ ದೃಢೀಕರಣ ಪತ್ರ

ಮೇ 31 ರೊಳಗೆ ಬಿಡದಿ ಹೋಬಳಿಯ ಜೋಗರದೊಡ್ಡಿಯಲ್ಲಿನ ಕೆನರಾ ಬ್ಯಾಂಕ್ ನಲ್ಲಿ ನೋಂದಾಯಿಸಿಕೊಳ್ಳ ಸೂಚಿಸಿದೆ. ಆಸಕ್ತ ಯುವಕರು ಪೋಷಕರೊಡನೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

ತರಬೇತಿ ಪಡೆದ ಅಭ್ಯರ್ಥಿಗಳು ನಂತರದ ದಿನಗಳಲ್ಲಿ ಸ್ವಂತ ಉದ್ಯೋಗ ಆರಂಭಿಸಲು ಕೆನರಾ ಬ್ಯಾಂಕ್ ಮೂಲಕ ಸರ್ಕಾರದ ಯೋಜನೆಗಳ ಮೂಲಕ ಸಾಲ ಮಂಜೂರು ಮಾಡುವ ವ್ಯವಸ್ಥೆ ಕೂಡ ಇರಲಿದೆ.

ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ

ನಿರ್ದೇಶಕರು,
ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆ,
ಜೋಗರದುಡ್ಡಿ, ಬಿಡದಿ ಕೈಗಾರಿಕಾ ಪ್ರದೇಶ,
ಬಿಡದಿ, ರಾಮನಗರ- 562109.
ಮೊ. 9900158885.

ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲುಕೆತ್ತನೆ, ಲೋಹ, ಶಿಲ್ಪ ಮತ್ತು ಕುಂಭಕಲೆ ವಿಭಾಗಗಳಲ್ಲಿ ಉಚಿತವಾಗಿ ತರಬೇತಿಯನ್ನು 1994ರಿಂದ ನೀಡುತ್ತಾ ಬಂದಿದೆ. ಈ ಸಂಸ್ಥೆ ಇದುವರೆಗೆ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಲ್ಪಾಕಲಾ ಶಿಕ್ಷಣವನ್ನು ನೀಡಿದೆ. ಇದರಲ್ಲಿ ಶೇ.92 ರಷ್ಟು ವಿದ್ಯಾರ್ಥಿಗಳು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

English summary
K.P.J. Prabhu institute for handicrafts training, Bidadi, an institute sponsored by Canara Bank will offer free training in handicrafts to persons in 18 to 35 years age group.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia