ಕನ್ನಡ ಭಾಷೆ ಕಲಿಸಲು ಮೀನಾ-ಮೇಷ ಎಣಿಸುತ್ತಿರುವ ಸಿಬಿಎಸ್ಇ

ರಾಜ್ಯದ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬಹುದು ಹೊರತು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ಸಿಬಿಎಸ್‌ಇ ಶಾಲೆಗಳ ಆಡಳಿತ ಮಂಡಳಿ ಸಂಘ ತಿಳಿಸಿದೆ.

ರಾಜ್ಯದ ಎಲ್ಲ ಶಾಲೆಗಳಲ್ಲೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಸಿಬಿಎಸ್ಇ ಆಕ್ಷೇಪ ವ್ಯಕ್ತ ಪಡಿಸಿದೆ.

ರಾಜ್ಯದ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬಹುದು ಹೊರತು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ಸಿಬಿಎಸ್‌ಇ ಶಾಲೆಗಳ ಆಡಳಿತ ಮಂಡಳಿ ಸಂಘ ತಿಳಿಸಿದೆ.

ಸಿಬಿಎಸ್ಇ  ಕನ್ನಡ ಭಾಷೆ ಗೊಂದಲ

ಸಿಬಿಎಸ್‌ಇ ಶಾಲೆಗಳಲ್ಲಿ ಇಂಗ್ಲಿಷ್ ಪ್ರಥಮ ಮತ್ತು ಹಿಂದಿ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಕೇಂದ್ರ ಸರ್ಕಾರ ಇದೇ ವರ್ಷದಲ್ಲಿ ಕಾನೂನು ರೂಪಿಸಿದೆ. ಹಾಗಾದರೆ ಅದನ್ನು ಪಾಲಿಸಬೇಕೆ ಅಥವಾ ರಾಜ್ಯ ಸರ್ಕಾರದ ಕಾನೂನು ಪಾಲಿಸಬೇಕೆ ಎಂಬ ಗೊಂದಲವೂ ಉಂಟಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ಶ್ರೀನಿವಾಸನ್ ತಿಳಿಸಿದ್ದಾರೆ.

ಇದನ್ನು ಗಮನಿಸಿ: ಒಂದರಿಂದ ಹತ್ತನೇ ತರಗತಿವರೆಗೂ ಕಡ್ಡಾಯ ಕನ್ನಡಇದನ್ನು ಗಮನಿಸಿ: ಒಂದರಿಂದ ಹತ್ತನೇ ತರಗತಿವರೆಗೂ ಕಡ್ಡಾಯ ಕನ್ನಡ

'ಕನ್ನಡವನ್ನು ಕಡ್ಡಾಯ ಮಾಡುವುದರಿಂದ ಆಗುವ ತೊಡಕುಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೂ ಮನವಿ ಸಲ್ಲಿಸುತ್ತೇವೆ. ಅವರ ಮುಂದಿನ ನಿರ್ಧಾರ ಗಮನಿಸಿ, ಅದನ್ನು ಪಾಲಿಸುತ್ತೇವೆ' ಎಂದು ಅವರು ಹೇಳಿದ್ದಾರೆ.

'ಕರ್ನಾಟಕದಲ್ಲಿ ಇರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂಬುದರಲ್ಲಿ ಯಾವುದೇ ತಕಾರರು ಇಲ್ಲ. ಬಹುತೇಕ ಶಾಲೆಗಳು ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಕಲಿಸುತ್ತಿವೆ. 9 ಮತ್ತು 10ನೇ ತರಗತಿಗೆ ಬೋರ್ಡ್‌ ಪರೀಕ್ಷೆಗಳು ನಡೆಯುತ್ತವೆ. ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಿದರೆ ಬೋರ್ಡ್‌ ಪರೀಕ್ಷೆ ಮಾಡಲು ಅವಕಾಶ ಇಲ್ಲ. ಈ ಸಂಬಂಧ ಸಿಬಿಎಸ್‌ಇ ಮಂಡಳಿಯೂ ಸೂಕ್ತ ತೀರ್ಮಾನ ತೆಗೆದುಕೊಂಡು ನಮಗೆ ಸೂಚನೆಗಳನ್ನು ನೀಡಬೇಕು' ಎಂದು ಅವರು ಹೇಳಿದ್ದಾರೆ.

ಪ್ರಥಮ ಭಾಷೆ ಇಂಗ್ಲಿಷ್ ಮತ್ತು ಎರಡನೇ ಭಾಷೆಯಾಗಿ ವಿದೇಶಿ ಭಾಷೆಗಳನ್ನು ಕಲಿಯಲು ಹೆಚ್ಚಿನ ಮಕ್ಕಳು, ಪೋಷಕರು ಆಸಕ್ತಿ ವ್ಯಕ್ತಪಡಿಸುತ್ತಾರೆ. ಇದರಿಂದ ಅವರ ಭವಿಷ್ಯಕ್ಕೂ ಅನುಕೂಲವಾಗುತ್ತದೆ. ಹಾಗೆ ನೋಡಿದರೆ ಹಿಂದಿಯನ್ನು ದ್ವಿತೀಯ ಭಾಷೆ ಮಾಡಿರುವುದೂ ಸಮಜಂಸವಲ್ಲ. ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸುವುದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಶ್ರೀನಿವಾಸನ್ ಮನವಿ ಮಾಡಿದರು.

For Quick Alerts
ALLOW NOTIFICATIONS  
For Daily Alerts

English summary
The CBSE School of Administration has said Kannada can be taught as one language and can not be compulsory as first or secondary language.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X