ಸಿಇಟಿ 2017: ಮೊದಲ ದಿನ ಸಂಭ್ರಮಿಸಿದ ವಿದ್ಯಾರ್ಥಿಗಳು

ಇಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಆರಂಭವಾಗಿವೆ. ಮೊದಲ ದಿನವಾದ ಇಂದು ಜೀವಶಾಸ್ತ್ರ ಮತ್ತು ಗಣಿತದ ಪರೀಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳಿಗೆ ಮೊದಲ ದಿನ ನಡೆದ ಎರಡೂ ಪತ್ರಿಕೆಗಳು ಸಾಕಷ್ಟು ಖುಷಿ ನೀಡಿದೆ.

ಬೆಳಿಗ್ಗೆ 10:30 ಕ್ಕೆ ಪರೀಕ್ಷೆ ಆರಂಭವಾಗಿದ್ದು ನಿಗದಿತ ಪರೀಕ್ಷಾ ಕೇಂದ್ರದ ಬಳಿ ಬಿಗಿ ಭದ್ರತೆ ನೀಡಲಾಗಿತ್ತು. ಮುನ್ಸೂಚನೆಯಂತೆ ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವುದಕ್ಕೂ ಮುಂಚಿತವಾಗಿ ಪರೀಕ್ಷಾ ಕೇಂದ್ರದ ಬಳಿ ಹಾಜರಿದ್ದು ಸೂಕ್ತ ಸಮಯಕ್ಕೆ ಕೊಠಡಿಗಳನ್ನು ಪ್ರವೇಶಿಸಿದರು.

ಬೆಳಗ್ಗೆ ನಡೆದ ಜೀವಶಾಸ್ತ್ರದ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಇದ್ದ ಪರೀಕ್ಷಾ ಭಯವನ್ನು ದೂರ ಮಾಡಿದೆ. ಪರೀಕ್ಷಾ ಕೊಠಡಿಯಿಂದ ಹೊರ ಬಂದ ಪ್ರತಿ ವಿದ್ಯಾರ್ಥಿಯು ಪರೀಕ್ಷೆ ಸುಲಭವಿತ್ತು ಎಂದು ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು, ಮಧ್ಯಾಹ್ನ ನಡೆದ ಗಣಿತದ ಪರೀಕ್ಷೆ ಕೂಡ ವಿದ್ಯಾರ್ಥಿಗಳಿಂದ ಮೆಚ್ಚಗೆ ಗಳಿಸಿದೆ.

ಸಿಇಟಿ ಮೊದಲ ದಿನ

 

ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ವಿಕಾಸ್ ಮಾತನಾಡಿ "ಸಿಇಟಿಗಾಗಿ ನಾವು ಸಾಕಷ್ಟು ತಯಾರಿ ನಡೆಸಿದ್ದೆವು, ಸಿಇಟಿಗೂ ಮುನ್ನ ಜೆಇಇ ಪರೀಕ್ಷೆಗಳನ್ನು ನಾವು ಬರೆದಿದ್ದವು ಹಾಗಾಗಿ ಸಿಇಟಿ ಸುಲಭ ಎನಿಸಿತು. ಇದೇ ರೀತಿ ನಾಳಿನ ಪತ್ರಿಕೆಗಳು ಇದ್ದರೆ ಉತ್ತಮ ರ್ಯಾಂಕಿಂಗ್ ನಿರೀಕ್ಷಿಸಬಹುದು" ಎಂದು ಹೇಳಿದರು. [ಸಿಇಟಿ ವೇಳಾಪಟ್ಟಿ]

ಕನ್ನಡದ ಪ್ರಶ್ನೆಗಳು

ಈ ಬಾರಿಯ ಸಿಇಟಿ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಕನ್ನಡದ ಪ್ರಶ್ನೆಗಳ ಕಡೆ ಹೆಚ್ಚು ವಿದ್ಯಾರ್ಥಿಗಳು ಗಮನ ನೀಡದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಕೆಲವೇ ಕೆಲವು ವಿದ್ಯಾರ್ಥಿಗಳು ಕನ್ನಡ ಪ್ರಶ್ನೆಗಳ ಸಹಾಯ ಪಡೆದರೆ ಬಹುತೇಕರು ಇಂಗ್ಲಿಷ್ ಪ್ರಶ್ನೆಗಳನ್ನೇ ಓದಿ ಉತ್ತರಿಸಿದ್ದಾರೆ.

ವಿದ್ಯಾರ್ಥಿ ರಾಜೀವ್ ಮಾತನಾಡಿ "ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಿದ್ದರೂ ನಾವು ಇಂಗ್ಲಿಷ್ ಪ್ರಶ್ನಗಳನ್ನೆ ಓದಿಕೊಂಡಿದ್ದೆವು. ಏಕೆಂದರೆ ನಾವು ಅಭ್ಯಾಸ ಮಾಡಿದ್ದೆಲ್ಲ ಇಂಗ್ಲಿಷ್ ಸಾಮಾಗ್ರಿಗಳನ್ನಿಟ್ಟುಕೊಂಡು, ಹಾಗಾಗಿ ಕನ್ನಡದ ಪ್ರಶ್ನೆಗಳ ಕಡೆ ಅಷ್ಟಾಗಿ ಗಮನ ಹರಿಸಲಾಗಲಿಲ್ಲ. ಅದೂ ಅಲ್ಲದೇ ಇಂಗ್ಲಿಷ್ ಪ್ರಶ್ನೆಯೇ ಅಂತಿಮ ಎನ್ನುವುದನ್ನು ಮೊದಲೇ ತಿಳಿಸಲಾಗಿದೆ ಇದರಿಂದಾಗಿ ನಾವು ಮೊದಲ ಆದ್ಯತೆ ಇಂಗ್ಲಿಷ್ ಪ್ರಶ್ನೆಗಳಿಗೆ ನೀಡಿದ್ದೇವೆ" ಎಂದು ಹೇಳಿದರು.

60 ಪ್ರಶ್ನೆಗಳ ಪತ್ರಿಕೆಗೆ 80 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು ಇದರಲ್ಲಿ ಉತ್ತರಿಸಲು 70 ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಆರಂಭದ ಹತ್ತು ನಿಮಿಷವನ್ನು ಒಎಂಆರ್ ಪತ್ರಿಕೆಯಲ್ಲಿ ವಿದ್ಯಾರ್ಥಿಗಳ ವಿವರನ್ನು ತುಂಬಲು ನೀಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
On the first day of cet 2017 students enjoyed both the papers. Today biology and mathematics papers made students fearless
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X