ಸಿಇಟಿ 2017 : ಇದೇ ತಿಂಗಳಲ್ಲಿ ಫಲಿತಾಂಶ ಪ್ರಕಟ?

Posted By:

ರಾಜ್ಯದ ಸಿಇಟಿ ಪರೀಕ್ಷೆಗಳು ಸುಗಮವಾಗಿ ನಡೆದಿದ್ದು ಇದೇ ತಿಂಗಳ ಅಂತ್ಯಕ್ಕೆ ಫಲಿತಾಂಶಗಳು ಹೊರಬೀಳುವ ಸಾಧ್ಯತೆ ಇದೆ.

ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಿನ್ನೆಗೆ ಮುಗಿದಿದ್ದು, ಮೂರನೇ ದಿನವಾದ ಇಂದು ಗಡಿನಾಡು ಮತ್ತು ಹೊರರಾಜ್ಯದ ವಿದ್ಯಾರ್ಥಿಗಳಿಗೆ 50 ಅಂಕಗಳ ಕನ್ನಡ ಭಾಷಾ ಪರೀಕ್ಷೆಗಳು ಮಾತ್ರ ನಡೆಯಲಿವೆ. [ಸಿಇಟಿ 2017: ಎರಡನೇ ದಿನ ಮಂಕಾದ ವಿದ್ಯಾರ್ಥಿಗಳು]

ಇಂದು ನಡೆಯುವ ಕನ್ನಡ ಭಾಷೆ ಪರೀಕ್ಷೆಯು ಕೇವಲ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದು ಸುಮಾರು 1800 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಮೇ ಅಂತ್ಯಕ್ಕೆ ಸಿಇಟಿ ಫಲಿತಾಂಶ ಪ್ರಕಟ

ಎರಡನೇ ದಿನ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಯಲ್ಲಿ ಶೇ.97 ರಷ್ಟು ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, ಪರೀಕ್ಷೆಯು ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆದಿದೆ.

ರಾಜ್ಯಾದ್ಯಂತ ಪರೀಕ್ಷೆಯನ್ನು ಒಟ್ಟು 404 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 1,85,411 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಸಿದ್ದರು.

ಫಲಿತಾಂಶ

ಇದೆ ತಿಂಗಳ ಮೂರನೇ ವಾರ ಇಲ್ಲ ತಿಂಗಳ ಅಂತ್ಯದೊಳಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ದ್ವಿತೀಯ ಪಿಯು ಫಲಿತಾಂಶ, ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿ ಫಲಿತಾಂಶಗಳು ಪ್ರಕಟ ಆದ ನಂತರ ಸಿಇಟಿ ಫಲಿತಾಂಶ ನೀಡಲಾಗುತ್ತದೆ. ಬಹುತೇಕ ಮೇ ಅಂತ್ಯದಲ್ಲಿ ಫಲಿತಾಂಶ ನೀಡಬಹುದು' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

English summary
Karnataka common entrance test (CET) results will be announced by the 4th week of May 2017

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia