ಇಂದಿನಿಂದ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ

Posted By:

ವೃತ್ತಿಪರ ಕೋರ್ಸ್‌ಗಳಿಗೆ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಕೌನ್ಸೆಲಿಂಗ್‌ ಪ್ರಕ್ರಿಯೆಯು ಇಂದಿನಿಂದ ಆರಂಭವಾಗಿದೆ. [ಸಿಇಟಿ 2017 ಫಲಿತಾಂಶ]

ಜೂನ್ 5ರಿಂದ 21ರವರೆಗೆ ದಾಖಲಾತಿ ಪರಿಶೀಲನೆ ಕಾರ್ಯ ನಡೆಯಲಿದ್ದು, ಎಲ್ಲಾ ಕೋರ್ಸುಗಳಿಗೂ ಒಂದೇ ಬಾರಿ ದಾಖಲೆಗಳ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದಾಹರಣೆಗೆ: ಎಂಜಿನಿಯರಿಂಗ್‌ ಹಾಗೂ ಬಿ-ಫಾರ್ಮಾ, ಫಾರ್ಮಾ-ಡಿ ಅಥವಾ ಭಾರತೀಯ ವೈದ್ಯ ಪದ್ಧತಿ ಮತ್ತು ಬಿಎಸ್ಸಿ ಕೃಷಿ ಹೀಗೆ ಯಾವುದೇ ಕೋರ್ಸ್‌ಗೆ ಪ್ರವೇಶ ಪಡೆದರೂ ಒಂದೇ ಬಾರಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.

2017-18ನೇ ಸಾಲಿಗೆ ಲಭ್ಯ ಇರುವ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳು ಮತ್ತು ಶುಲ್ಕ ಎಷ್ಟು ಎಂಬುದು ಇನ್ನೂ ಅಂತಿಮವಾಗಿಲ್ಲ. ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಮಧ್ಯೆ ಚರ್ಚೆ ನಡೆಯುತ್ತದೆ. ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾದ ನಂತರ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಇಂದಿನಿಂದ ಸಿಇಟಿ ಕೌನ್ಸೆಲಿಂಗ್

ಸೀಟು ಹಂಚಿಕೆ ಕೌನ್ಸೆಲಿಂಗ್ ನಡೆಸುವ ಕೋರ್ಸ್‌ಗಳು

 • ಎಂಜಿನಿಯರಿಂಗ್ (ಬಿ.ಇ/ ಬಿ.ಟೆಕ್)
 • ಆರ್ಕಿಟೆಕ್ಚರ್
 • ಬಿ.ಎಸ್ಸಿ (ಕೃಷಿ)
 • ಪಶು ವೈದ್ಯ ವಿಜ್ಞಾನ
 • ಬಿ-ಫಾರ್ಮಾ
 • ಫಾರ್ಮಾ-ಡಿ

ಬೇಕಾಗಿರುವ ದಾಖಲೆಗಳು

 • ಸಾಮಾನ್ಯ ಪ್ರವೇಶ ಪರೀಕ್ಷೆ-2017ಕ್ಕೆ ಭರ್ತಿ ಮಾಡಿ ಸಲ್ಲಿಸಿರುವ ಅರ್ಜಿಯ ಪ್ರತಿ
 • ಶುಲ್ಕ ಪಾವತಿಸಿರುವ ಚಲನ್‌ನ ಮೂಲ ಪ್ರತಿ
 • ಸಿಇಟಿ ಪ್ರವೇಶ ಪತ್ರ
 • ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಅಂಕಪಟ್ಟಿ
 • ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಅಥವಾ ಸಾರ್ವಜನಿಕ ಶಿಕ್ಷಣ ಜಿಲ್ಲಾ ಉಪನಿರ್ದೇಶಕರಿಂದ ಸಹಿ ಮಾಡಿದ ವ್ಯಾಸಂಗ ಪ್ರಮಾಣ ಪತ್ರ
 • ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರ

ನೀಟ್‌ ಬರೆದವರಿಗೂ ಅವಕಾಶ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ 'ನೀಟ್‌' ಮಾತ್ರ ಬರೆದ ವಿದ್ಯಾರ್ಥಿಗಳು ಸಿಇಟಿ-2017ರಲ್ಲೂ ನೋಂದಣಿ ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್‌ ಕಲ್ಪಿಸಲಾಗಿದೆ. ಈ ಮೂಲಕ ಇದೇ 8ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನೀಟ್‌ ಮತ್ತು ಸಿಇಟಿ ಎರಡೂ ಬರೆದ ವಿದ್ಯಾರ್ಥಿಗಳು ನೀಟ್‌ ನೋಂದಣಿ ಸಂಖ್ಯೆ ಹಾಗೂ ಪ್ರವೇಶ ಪತ್ರದ ಸಂಖ್ಯೆಯನ್ನು ದಾಖಲಿಸಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

English summary
Karnataka Examinations Authority has announced the schedule for Karnatake CET 2017 counselling.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia