2019-20ನೇ ಸಾಲಿನ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

2019-20ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್.ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ 2ಎ,2ಬಿ,3ಎ,3ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 15-10-2019ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಡಿ ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

ಅರ್ಹತೆಗಳು :

* ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್.ಡಿ ಮಾಡುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಪದವಿ /ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.70% ಅಂಕಗಳು ಅಥವಾ ಸಮಾನವಾದ ಗ್ರೇಡ್ ಪಡೆದಿರಬೇಕು.

* ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಪಿಹೆಚ್‌.ಡಿ ಮಾಡುವ ಅಭ್ಯರ್ಥಿಗಳು ಸರಿಯಾಗಿ 27 ವರ್ಷ ವಯೋಮಿತಿಯೊಳಗಿರಬೇಕು ಹಾಗೂ ಸ್ನಾತಕೋತ್ತರ ಪದವಿ ಮಾಡುವ ಅಭ್ಯರ್ಥಿಗಳು 25 ವರ್ಷದ ವಯೋಮಿತಿಯೊಳಗಿರಬೇಕು.

* ಅರ್ಜಿದಾರರ ಹಾಗೂ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.6.00 ಲಕ್ಷ ಮಿತಿಯೊಳಗಿರಬೇಕು.

* G-MAT, TOEFL, GRE,IELTS,SAT ಐದರಲ್ಲಿ ಯಾವುದಾದರೂ ಒಂದು ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ತೇರ್ಗಡೆಯಾಗಿರಬೇಕು.

* 2019-20ನೇ ಸಾಲಿಗೆ ಸಂಬಂಧಿಸಿದಂತೆ ಅಭ್ಯರ್ಥಿಯು Top One Thousand Global University Ranking ಹೊಂದಿರುವ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರಬೇಕು.

* ಭಾರತದ ಪ್ರಜೆಯಾಗಿದ್ದು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

* ಒಂದು ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಧನಸಹಾಯ ನೀಡಲಾಗುವುದು.

* ಧನಸಹಾಯದ ಮೊತ್ತ ವಾರ್ಷಿಕವಾಗಿ ಗರಿಷ್ಠ ರೂ.10.00 ಲಕ್ಷ ಅಥವಾ ವಾಸ್ತವ ವೆಚ್ಚ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಲಾಗುವುದು.

ಆಯ್ಕೆ ವಿಧಾನ :

ಆಯ್ಕೆಯು ಮೂರು ಹಂತಗಳಲ್ಲಿ ನಡೆಯುವುದು.

1. ಹಂತದಲ್ಲಿ ವಿದ್ಯಾರ್ಥಿಯಿಂದ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಕೆ.

2. ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಮೂಲ ದಾಖಲಾತಿಗಳ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆ.

3. ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂದರ್ಶನ

ಧನಸಹಾಯ ಪಾವತಿ ವಿಧಾನ :-

* ಆಯ್ಕೆಯಾದ ವಿದ್ಯಾರ್ಥಿಯು ಮೊದಲನೇ ವರ್ಷದ ಧನಸಹಾಯವವನ್ನು ಪಡೆಯಲು ವಿಸಾ ಪಾಸ್ ಪೋರ್ಟ್ ಪ್ರತಿ ಮತ್ತು ಸಂಬಂಧಿತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

* ಎರಡು / ಮೂರನೇ ವರ್ಷದ ಧನ ಸಹಾಯವನ್ನು ನಿಯಮಾನುಸಾರ ಪಡೆಯಲು ಸಂಬಂಧಿತ ವಿಶ್ವವಿದ್ಯಾಲಯಗಳಿಂದ ಪ್ರಗತಿ ವರದಿ ಸಲ್ಲಿಸುವುದು.

* ಅಂತಿಮ ವರ್ಷದ ವ್ಯಾಸಂಗದ ಅವಧಿಯು 6 ತಿಂಗಳಿಗಿಂತ ಕಡಿಮೆ ಇದ್ದರೆ ಶೇ.50 ರಷ್ಟು ಮೊತ್ತವನ್ನು ಆ ವರ್ಷಕ್ಕೆ ನೀಡಲಾಗುವುದು.

ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-10-2019ರ ಸಂಜೆ 5:00ಗಂಟೆ
ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ http://backwardclasses.kar.nic.in/BCWDEngHome.aspx ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Department of backward classes welfare 2019-20 invited applications for D devaraj arasu foreign studies scholarship.Candidates can apply before 15th october 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X