ಇನ್ನುಮುಂದೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ದೂರ ಶಿಕ್ಷಣ ಸುಲಭ

Posted By:

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಇನ್ನುಮುಂದೆ ಯಾವುದೆ ಅಡೆತಡೆ ಇಲ್ಲದೆ ದೂರ ಶಿಕ್ಷಣ ಮೂಲಕ ತಮ್ಮ ಉನ್ನತ ವ್ಯಾಸಂಗ ಪಡೆಯಬಹುದಾಗಿದೆ.

ದೂರ ಶಿಕ್ಷಣ ಮೂಲಕ ಉನ್ನತ ಶಿಕ್ಷಣ ಪಡೆಯಲು ರಜೆಗಾಗಿ ಕಾಯಬೇಕಿತ್ತು, ರಜೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಿತ್ತು. ಆದರೆ ಇನ್ನುಮುಂದೆ ಅನುಮತಿಯೇ ಇಲ್ಲದೆ ತಮ್ಮ ಉನ್ನತ ವ್ಯಾಸಂಗವನ್ನು ಪಡೆಯಬಹುದಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ದೂರ ಶಿಕ್ಷಣ ಸುಲಭ

ಸರ್ಕಾರಿ ಆದೇಶ

ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4 ಎಸ್ಆರ್ಸಿ 73 ದಿ.05-02-1973 ರಲ್ಲಿ "The Government servents prosecuting studies without attending colleges or institutions and appearing for examination as external students for which no permission is necessary" ಎಂದಿದ್ದು, ಅದರಂತೆ ಶಿಕ್ಷಕರ ಅಧಿಕೃತ ಕರ್ತವ್ಯಕ್ಕೆ ಧಕ್ಕೆಯಾಗದಂತೆ  ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಬಾಹ್ಯವಾಗಿ/ ಅಂಚೆ ಮತ್ತು ತೆರಪಿನ ಮೂಲಕ ಬಿಎ, ಬಿಇಡಿ ಮತ್ತಿತರ ಉನ್ನತ ವ್ಯಾಸಂಗ ಪಡೆಯಲು ಇಲಾಖಾ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಲಾಗಿದೆ.

ಈ ರೀತಿ ಬಾಹ್ಯ/ಅಂಚೆ ತೆರಪಿನ ವ್ಯಾಸಂಗ ಮಾಡಲು ಇಚ್ಚಿಸಿರುವ ಶಿಕ್ಷಕರು ಕಾಂಟ್ಯಾಕ್ಟ್ ಪ್ರೋಗ್ರಾಮ್, ಪರೀಕ್ಷೆ ಇತ್ಯಾದಿ ಕಾರಣಗಳನ್ನು ನೀಡಿ ರಜಾ ಮಂಜೂರಾತಿಗೆ ಕೋರಿಕೆ ಸಲ್ಲಿಸಿದಾಗ ಸಕ್ಷಮ ಪ್ರಾಧಿಕಾರಿಗಳು ಅಂತಹ ಮನವಿಗಳನ್ನು ಪರಿಶೀಲಿಸಿ ಸಂದರ್ಭಾನುಸಾರ ಶಾಲಾ ಕೆಲಸಕ್ಕೆ ಧಕ್ಕೆಯಾಗದಂತೆ ರಜೆಯನ್ನು ಮಂಜೂರು ಮಾಡುವ ಹಕ್ಕುಳ್ಳವರಾಗಿರುತ್ತಾರೆ.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸರ್ಕಾರದಿಂದ ಅಂಗೀಕೃತವಾಗಿರುವ ವಿಶ್ವವಿದ್ಯಾಲಯದಿಂದ ಬಾಹ್ಯವಾಗಿ/ ಅಂಚೆ ತೆರಪಿನ ಉನ್ನತ ವ್ಯಾಸಂಗ ಮಾಡಲು ಯಾವುದೇ ನಿರ್ಭಂದ ಇರುವುದಿಲ್ಲ. ಅಂತೆಯೇ ಸರ್ಕಾರದಿಂದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಾಹ್ಯವಾಗಿ/ ಅಂಚೆ ತೆರಪಿನ ಉನ್ನತ ವ್ಯಾಸಂಗ ಮಾಡಿದ ಬಗ್ಗೆ ಶಿಕ್ಷಕರು ಸಲ್ಲಿಸುವ ಪ್ರಮಾಣಪತ್ರದ ನೈಜತೆಯನ್ನು ಖಾತರಿಪಡಿಸಿಕೊಂಡ ನಂತರ ಸೇವಾ ಪುಸ್ತಕದಲ್ಲಿ ಅಂತಹ ಉನ್ನತ ವ್ಯಾಸಂಗ ಹೊಂದಿದ ವಿವರಗಳನ್ನು ನಮೂದಿಸಲು ಹಾಗೂ ಸರ್ಕಾರದಿಂದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಉನ್ನತ ವ್ಯಾಸಂಗ ಪಡೆದಿರುವುದನ್ನು ಖಾತರಿಪಡಿಸಿಕೊಂಡು ನಂತರ ಖಾಯಂ ಪೂರ್ವ ಸೇವಾವಧಿ ಪೂರೈಸಿದಲ್ಲಿ ನಿಯಮಾನುಸಾರ ಜೇಷ್ಠತಾ ಪಟ್ಟಿಗೆ / ಬಡ್ತಿಗೆ ಪರಿಗಣಿಸಬಹುದಾಗಿದೆ.

ಇದನ್ನು ಗಮನಿಸಿ: ದೂರ ಶಿಕ್ಷಣದ ಮೂಲಕ ಎಂಬಿಎ

English summary
The Government servents prosecuting studies without attending colleges or institutions and appearing for examination as external students for which no permission is necessary

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia