ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ 2017-18ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಅರ್ಹತೆಗಳನ್ನು ಹೊ೦ದಿರಬೇಕು.

ವೃತ್ತಿಪರ ಶಿಕ್ಷಣ ಪಡೆಯುವವರಿಗಾಗಿ ಆರ್ಥಿಕವಾಗಿ ಸಹಾಯವಾಗಲೆಂದು ಟ್ರಸ್ಟ್ ಮೂಲಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಹತೆ

 • ವಿದ್ಯಾರ್ಥಿಯು ಕರ್ನಾಟಕದವರಾಗಿರಬೇಕು.
 • ವಿದ್ಯಾರ್ಥಿಯ ಪೋಷಕರ ಕುಟು೦ಬದ ಒಟ್ಟು ವಾರ್ಷಿಕ ಆದಾಯ (100000) ಒ೦ದು ಲಕ್ಷ ರೂಪಾಯಿಯ ಒಳಗಿರಬೇಕು.
 • ವಿದ್ಯಾರ್ಥಿಯು ಕರ್ನಾಟಕದ ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿ೦ದ ಮಾನ್ಯತೆ ಪಡೆದ ಕೋರ್ಸುಗಳಲ್ಲಿ ಪೂರ್ಣಪ್ರಮಾಣದ ಅವಧಿಯಲ್ಲಿ ಅಭ್ಯಾಸ ಮಾಡುತ್ತಿರಬೇಕು.
 • ಅರೆಕಾಲಿಕ (Correspondence) ಕೋರ್ಸ್ ಓದುತ್ತಿರವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ.
 • ವಿದ್ಯಾರ್ಥಿಯು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು ಮತ್ತು ವಿದ್ಯಾರ್ಥಿಯು ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದಾದರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿರಬೇಕು.

ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವಿದ್ಯಾರ್ಥಿವೇತನ

ಮೆರಿಟ್ ಆಧರಿಸಿ ವಿದ್ಯಾರ್ಥಿ ವೇತನ

ವಿದ್ಯಾರ್ಥಿವೇತನ ನೀಡಲು ಕಟ್ ಆಫ್ ಅಂಗಳನ್ನು ನಿಗಧಿಪಡಿಸಿದ್ದು, ಶೇಕಡವಾರು ಅಂಕಗಳಿಗೆ ಸಂಬಂಧಿಸಿದಂತೆ ವಿವಿಧ ಕೋರ್ಸುಗಳ ಮಾಹಿತಿಯು ಈ ಕೆಳಗಿನಂತಿದೆ.

 
ಕೋರ್ಸ್ ಕಟ್ ಆಫ್
ಪಿಯುಸಿ, ಎಂಬಿಬಿಎಸ್ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90 ಅಥವಾ ಹೆಚ್ಚಿನ ಅಂಕಗಳಿಸಿರಬೇಕು.
ಡಿಪ್ಲೊಮಾ, ಬಿ.ಎಸ್ಸಿ, ಬಿ.ಕಾಂ, ಬಿ.ಇ, ಬಿವಿಎಸ್ಸಿವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.85 ಅಥವಾ ಹೆಚ್ಚಿನ ಅಂಕಗಳಿಸಿರಬೇಕು.
 ಬಿಸಿಎ, ಬಿಬಿಎಂ/ಬಿಬಿಎ, ಬಿಎ, ಬಿಡಿಎಸ್,ಬಿ.ಫಾರ್ಮ, ಎಂ.ಎಸ್ಸಿ, ಎಂ.ಎ, ಎಂ.ಕಾಂ, ಬಿ.ಎಡ್ವಿದ್ಯಾರ್ಥಿಯು ಪಿಯುಸಿಯಲ್ಲಿ ಶೇ.80 ಅಥವಾ ಹೆಚ್ಚಿನ ಅಂಕಗಳಿಸಿರಬೇಕು.
ಸಿಎ,ಎಂಸಿಎ, ಎಂಬಿಎ, ಎಂ.ಎಡ್, ಎಂ.ಫಿಲ್, ಎಂ.ಟೆಕ್ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.75 ಅಥವಾ ಹೆಚ್ಚಿನ ಅಂಕಗಳಿಸಿರಬೇಕು.

ಅರ್ಜಿ ಸಲ್ಲಿಸುವಿಕೆ

 • ಅರ್ಜಿ ಸಲ್ಲಿಸುವವರು www.ssjanakalyantrust.org ವೆಬ್ಸೈಟ್ ಗೆ ಭೇಟಿ ನೀಡಿ.
 • ನೀಡಿರುವ ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
 • ಅಪ್ಲೈ 'ಆನ್-ಲೈನ್' ಲಿಂಕ್ ಮೇಲೆ ಕ್ಲಿಕ್ ಮಾಡಿ.
 • ಅಂಕಪಟ್ಟಿಗಳ ವಿವರ ಸೇರಿದಂತೆ ಆಧಾರ್ ಮತ್ತು ಬ್ಯಾಂಕ್ ಖಾತೆ ನಂಬರ್ ಮೂಲಕ ಅರ್ಜಿಗಳನ್ನು ಸಂಪೂರ್ಣವಾಗಿ ತಪ್ಪಿಲ್ಲದಂತೆ ತುಂಬಿ.
 • ಅರ್ಜಿ ತುಂಬಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ, ಪಿಡಿಎಫ್ ರೂಪದ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
 • ಪ್ರಿಂಟ್ ತೆಗೆದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ, ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಟ್ರಸ್ಟ್ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ತಲುಪಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2017

ಅರ್ಜಿ ತಲುಪಿಸಬೇಕಾದ ವಿಳಾಸ

The Secretary
Dr. Shamanur Shivashankarappa Janakalyan Trust
C/o. R L Law College,
Behind Bapuji Educational Association Head office
P J Extension, Davangere-577002, Karnataka. INDIA

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನು ಗಮನಿಸಿ ವಿಜ್ಞಾನದ ವಿದ್ಯಾರ್ಥಿನಿಯರಿಗಾಗಿ ಎಲ್ ಓರಿಯಲ್ ಸ್ಕಾಲರ್ಷಿಪ್

For Quick Alerts
ALLOW NOTIFICATIONS  
For Daily Alerts

  English summary
  The Trust's Scholarship Program is currently focused on assisting students for their professional courses in Engineering, Technology, Management, Law, Nursing, Medicine and Dental sciences. Scholarship is award to students who have excelled in their academics and wish to continue studies further.

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more