ಒನ್ ಇಂಡಿಯಾಗೆ ಮಾಧ್ಯಮ ವಿದ್ಯಾರ್ಥಿಗಳ ಮೀಡಿಯಾ ವಿಸಿಟ್

Posted By:

ಮಾಧ್ಯಮ ಕ್ಷೇತ್ರದಲ್ಲಿ ಇಂದಿನ ಬೆಳವಣಿಗೆ ಮತ್ತು ನವಮಾಧ್ಯಮದ ಕಾರ್ಯವೈಖರಿ ಬಗ್ಗೆ ತಿಳಿಯಲು ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಒನ್ ಇಂಡಿಯಾ ವೆಬ್ ಪೋರ್ಟಲ್ ಗೆ ಭೇಟಿ ನೀಡಿದರು.

ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಮಾಧ್ಯಮ ಸಂದರ್ಶನ ಇದಾಗಿದ್ದು, ಗುಲಬರ್ಗಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ (ಸ್ನಾತಕೋತ್ತರ) ಉಪನ್ಯಾಸಕರಾದ ಡಾ.ಕೆ.ಎಂ ಕುಮಾರಸ್ವಾಮಿ ಮತ್ತು ಚಂದ್ರಲೇಖಾ ಜೆ.ಎಸ್ ರವರೊಂದಿಗೆ ಅಂತಿಮ ವರ್ಷದ 19 ವಿದ್ಯಾರ್ಥಿಗಳು ಸೇರಿ ಒಟ್ಟು 21 ಮಂದಿ ಒನ್ ಇಂಡಿಯಾ.ಕಾಂ ಸಂಸ್ಥೆಗೆ ಭೇಟಿ ನೀಡಿ ಕನ್ನಡ ವಿಭಾಗದ ಸಂಪಾದಕರ ಜೊತೆ ಅನೇಕ ಮಾಹಿತಿ ವಿನಿಮಯ ಮಾಡಿಕೊಂಡರು.

ವಿದ್ಯಾರ್ಥಿಗಳ ಮೀಡಿಯಾ ವಿಸಿಟ್

ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಸಂಪಾದಕರಾದ ಎಸ್.ಕೆ ಶಾಮಸುಂದರ ಒನ್ ಇಂಡಿಯಾ.ಕಾಂ ಸಂಸ್ಥೆ ಆರಂಭವಾದಗಿನಿಂದ ಇಲ್ಲಿಯವರೆಗೂ ಯಾವ ರೀತಿ ಬೆಳೆದು ಬಂದಿದೆ ಎಂಬುದನ್ನು ವಿವರಿಸುತ್ತಾ ಅತ್ಯಂತ ವೇಗವಾಗಿ ಸಾಗುತ್ತಿರುವ ಸಮಾಜದಲ್ಲಿ ನವಮಾಧ್ಯಮದ ಮಹತ್ವವನ್ನು ತಿಳಿಸುವುದರ ಜೊತೆಗೆ ತಮ್ಮ ಮಾಧ್ಯಮದ ಅನುಭವವನ್ನು ಹಂಚಿಕೊಂಡರು.

ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ಸಂಪಾದಕರು ಸುದ್ದಿಸಂಸ್ಥೆಗೆ ಸುದ್ದಿಗಳು ಎಲ್ಲಿಂದ ಬರುತ್ತವೆ, ಸುದ್ದಿಗಳನ್ನು ಯಾವ ರೀತಿ ಬರೆಯಬೇಕು, ಯಾವ ಸುದ್ದಿಗಳಿಗೆ ಮಹತ್ವ ನೀಡಬೇಕು ಎಂದು ಹೇಳುತ್ತ 'ಪ್ಯೂರ್ ಇಂಟರ್ನೆಟ್ ಮತ್ತು ಡಿಪೆಂಡೆನ್ಸಿ ಆನ್ ಇಂಟರ್ನೆಟ್' ಕುರಿತು ವಿದ್ಯಾರ್ಥಿಗಳಿಗೆ ಆನ್ಲೈನ್ ಜರ್ನಲಿಸಂನ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಮೀಡಿಯಾ ವಿಸಿಟ್

ಒನ್ ಇಂಡಿಯಾ.ಕಾಂ ನ ಸಹ ಸಂಪಾದಕರಾದ ಪ್ರಸಾದ್ ನಾಯ್ಕ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಬರವಣಿಗೆಯನ್ನು ಉತ್ತಮ ಪಡಿಸಿಕೊಳ್ಳುವುದು ಹೇಗೆ ಮತ್ತು ಆನ್ಲೈನ್ ಮೀಡಿಯಾಗೆ ಯಾವ ರೀತಿ ಬರೆಯಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕ್ರೀಡಾ ವಿಭಾಗದ ಅಪ್ರಮೇಯ ಕೂಡ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಆಧುನಿಕ ಮಾಧ್ಯಮದ ವಿಚಾರಗಳನ್ನು ತಿಳಿಸಿದರು.

ಇದನ್ನು ಗಮನಿಸಿ: ಕರ್ನಾಟಕ ಕೇಂದ್ರೀಯ ವಿ.ವಿ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

ಒನ್ ಇಂಡಿಯಾ

ಒನ್ ಇಂಡಿಯಾ.ಕಾಂ ಭಾರತದ ಮುಂಚೂಣಿಯಲ್ಲಿರುವ ಆನ್ ಲೈನ್ ವೆಬ್ ಪೋರ್ಟಲ್ ಆಗಿದೆ. ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿ., ಸಂಸ್ಥೆ ಒಡೆತನದಲ್ಲಿರುವ ಈ ವೆಬ್ ಪೋರ್ಟಲ್ ಸುದ್ದಿ ವಿಶ್ಲೇಷಣೆ, ಕ್ರೀಡೆ, ಶಿಕ್ಷಣ, ಮನರಂಜನೆ, ವಿಡಿಯೋ ಹಾಗೂ ವರ್ಗೀಕೃತ ಜಾಹೀರಾತು ನೀಡುತ್ತದೆ.

ಒನ್ ಇಂಡಿಯಾ ಭಾರತದ ಹಲವು ಭಾಷೆಗಳಲ್ಲಿ ವೆಬ್ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಒನ್ ಇಂಡಿಯಾ ಹಿಂದಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ (ಒನ್ ಇಂಡಿಯಾ ಕನ್ನಡ,ಒನ್ ಇಂಡಿಯಾ ತಮಿಳು,ಒನ್ ಇಂಡಿಯಾ ತೆಲುಗು,ಒನ್ ಇಂಡಿಯಾ ಮಲೆಯಾಳಂ) ಸೇರಿವೆ.

ಹೆಚ್ಚಿನ ಮಾಹಿತಿಗಾಗಿ ಒನ್ ಇಂಡಿಯಾ ವೆಬ್ಸೈಟ್ ಗಮನಿಸಿ www.oneindia.com

English summary
students from Gulbarga university visited oneindia webportal as media visit

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia