ಆನ್‌ಲೈನ್‌ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್‌ಗಳ ಶಿಕ್ಷಣಕ್ಕೆ ಅನುಮತಿ

ದೇಶದ ಶೇ 15ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್‌ಗಳ ಶಿಕ್ಷಣ ನೀಡಲು ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಆನ್ಲೈನ್ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತಾಂತ್ರಿಕೇತರ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ಪೂರೈಸಲು ಚಿಂತನೆ ನಡೆಸಿದೆ.

ಶಿಕ್ಷಣ ಕಿರಣ: ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ ಸರ್ಕಾರ ಯಶಸ್ವಿಶಿಕ್ಷಣ ಕಿರಣ: ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ ಸರ್ಕಾರ ಯಶಸ್ವಿ

ಇತ್ತೀಚೆಗಷ್ಟೇ 'ಸ್ವಯಂ' ಯೋಜನೆ ಮೂಲಕ ದೇಶದ ಶೇ 20ರಷ್ಟು ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣವನ್ನು ಆನ್‌ಲೈನ್‌ ನಲ್ಲಿ ನೀಡಲು ಚಾಲನೆ ನೀಡಲಾಗಿತ್ತು. ಈಗ ಹೊಸದಾಗಿ 'ಸ್ವಯಂ'ಗಿಂತಲೂ ಭಿನ್ನವಾಗಿ ಮತ್ತು ಪರಿಣಾಮಕಾರಿಯಾದ ಶಿಕ್ಷಣ ನೀಡಬಲ್ಲ ಯೋಜನೆನ್ನು ರೂಪಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಯುಪಿಎಸ್ಸಿ:ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ನೇಮಕಾತಿಯುಪಿಎಸ್ಸಿ:ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ನೇಮಕಾತಿ

 ಆನ್‌ಲೈನ್‌ ಮೂಲಕ ಉನ್ನತ ಶಿಕ್ಷಣ

ಮಂಗಳವಾರ ನಡೆದ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ-(ಸಿಎಬಿಇ) ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು 'ದೇಶದ ಶೇ 15ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್‌ಗಳ ಶಿಕ್ಷಣ ನೀಡಲು ಅನುಮತಿ ನೀಡಲಾಗುತ್ತದೆ' ಎಂದು ಹೇಳಿದರು.

ಪ್ರಸ್ತುತ ದೇಶದಲ್ಲಿ 864 ವಿಶ್ವವಿದ್ಯಾಲಯಗಳು, 40000 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ, ಶೇಕಡಾ 25 ರಷ್ಟು ಮಂದಿ ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಭಾರತದಲ್ಲಿ 14 ರಿಂದ 18 ವರ್ಷದ ಶೇಕಡಾ 73 ರಷ್ಟು ಸ್ಮಾರ್ಟ್ ಫೋನ್ ಬಳಸುತ್ತಾರೆ. ಕೂತ ಕಡೆಯೇ ಶಿಕ್ಷಣ ಪಡೆಯಬಹುದಾಗಿದ್ದು, ಆನ್ಲೈನ್ ಶಿಕ್ಷಣಕ್ಕೆ ಬೇಡಿಕೆ ಕೂಡ ಹೆಚ್ಚಿದೆ.

ಅಲ್ಲದೆ ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಸೂಚ್ಯಂಕವನ್ನು (ಜಿಇಆರ್) ಶೇ 25.2ರಿಂದ 2020ರಷ್ಟರಲ್ಲಿ ಶೇ 30ರವರೆಗೆ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸ್ವಯಂ'ಗಿಂತಲೂ ಭಿನ್ನವಾದ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಿದ್ದು, ಇದರಲ್ಲಿ ತಾಂತ್ರಿಕೇತರ ಕೋರ್ಸ್‌ಗಳನ್ನು ಸಂಪೂರ್ಣವಾಗಿ (ಶೇ 100) ಆನ್‌ಲೈನ್‌ನಲ್ಲೇ ಪೂರೈಸಲು ಅವಕಾಶ ಇರಲಿದೆ. ಈ ಸಂಬಂಧ ಅಗತ್ಯ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಶೀಘ್ರವೇ ಅವು ಅಂತಿಮಗೊಳ್ಳಲಿವೆ. ಎಲ್ಲಾ ರಾಜ್ಯಗಳಲ್ಲಿ ಕಾಲೇಜುಗಳನ್ನು ಎರಡು ಪಾಳಿಗಳಲ್ಲಿ ನಡೆಸುವ ಬಗ್ಗೆ ಚಿಂತನೆ ನಡೆಯುತ್ತಿದೆ' ' ಎಂದು ಜಾವಡೇಕರ್ ವಿವರಿಸಿದರು.

ಯೋಜನೆಯ ವಿಶೇಷತೆ

ನೂತನ ಯೋಜನೆಯಂತೆ ತಾಂತ್ರಿಕೇತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿದ್ದು, ನ್ಯಾಕ್‌ನಿಂದ ಎ+, ಎ++ ಕ್ರಮಾಂಕ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗಷ್ಟೇ ಆನ್‌ಲೈನ್‌ ಕೋರ್ಸ್‌ ನೀಡಲು ಅವಕಾಶವಿರಲಿದೆ.

ದೋಷವಿಲ್ಲದ ಮತ್ತು ವಿದ್ಯಾರ್ಥಿಗಳ ದಕ್ಷತೆಯನ್ನು ಕಾಯ್ದುಕೊಳ್ಳುವಂತಹ ಪಠ್ಯಕ್ರಮ ಹಾಗೂ ಬೋಧನಾಕ್ರಮವನ್ನು ರೂಪಿಸಲು ಕೇಂದ್ರ ಸರ್ಕಾರವೇ ಮಾರ್ಗಸೂಚಿ ಸಿದ್ಧಪಡಿಸಲಿದೆ. ಆನ್‌ಲೈನ್‌ ಕೋರ್ಸ್‌, ತರಗತಿಗಳನ್ನು ನಡೆಸಲು ಶಿಕ್ಷಣ ಸಂಸ್ಥೆಗಳು ಸಿಬ್ಬಂದಿಗಾಗಿ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ ಅಲ್ಲದೆ ಪ್ರತಿ ಸೆಮಿಸ್ಟರ್‌ನ ಅಂತ್ಯದಲ್ಲೂ ಸ್ಪರ್ಧಾತ್ಮಕವಾಗಿ ಪರೀಕ್ಷೆ ನಡೆಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
India will allow nearly 15% of universities to offer online degrees allowing students and executives to learn anywhere, anytime.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X