ಐಬಿಪಿಎಸ್ ಪಿಒ ಪ್ರೆಲಿಮ್ಸ್ ಪರೀಕ್ಷೆ 2018 ರ ಪ್ರವೇಶ ಪತ್ರ ರಿಲೀಸ್

ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಅಥವಾ ರೋಲ್ ನಂಬರ್ ಹಾಕಿ ಅದಕ್ಕೆ ಪಾಸ್‌ವರ್ಡ್ ಆಗಿ ಜನ್ಮ ದಿನಾಂಕವನ್ನ ನಮೂದಿಸಿ ಲಾಗಿನ್ ಆಗಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್ ಪಿಒ ಪ್ರೆಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರ ಇದೀಗ ರಿಲೀಸ್ ಆಗಿದೆ. ಯಾರೆಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಿರೋ ಅವರೆಲ್ಲಾ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್ ಪಿಒ ಪ್ರೆಲಿಮ್ಸ್ ಪರೀಕ್ಷೆ 2018 ರ ಪ್ರವೇಶ ಪತ್ರ ರಿಲೀಸ್

ಐಬಿಪಿಎಸ್ ಪಿಒ ಪ್ರೆಲಿಮ್ಸ್ ಪರೀಕ್ಷೆಯು ಅಕ್ಟೋಬರ್ 13, 14,20 ಮತ್ತು 21 ರಂದು ನಡೆಯಲಿದೆ. ನವಂಬರೊಳಗೆ ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಪಿಒ/ಎಂಟಿ ನೇಮಕಾತಿಗೆ ಸಂಬಂಧಪಟ್ಟಂತೆ ಪ್ರೀ-ಎಕ್ಸಾಂ ಟ್ರೈನಿಂಗ್ ಕಾಲ್ ಲೆಟರ್ ರಿಲೀಸ್ ಆಗಿದೆ. ಅಕ್ಟೋಬರ್ 1 ರಿಂದ ಅಕ್ಟೋಬರ್ 7, 2018 ರವರೆಗೆ ಟ್ರೈನಿಂಗ್ ನಡೆಯಲಿದೆ.

ಪ್ರಿಲಿಮಿನರಿ ಪರೀಕ್ಷೆಯ ಬಳಿಕ ಐಬಿಪಿಎಸ್ ಪಿಒ ಪ್ರಮುಖ ನೇಮಕಾತಿ ಪ್ರಕ್ರಿಯೆಗೆ ಅಭ್ಯರ್ಥಿಗಳನ್ನ ಹೆಚ್ಚು ಅಂಕದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಹಾಗೂ ನೇಮಕಾತಿ ಪ್ರಕಟಣೆ ಹೊರಡಿಸಿರುವಂತೆ ಸುಮಾರು 4102 ಹುದ್ದೆಗಳಿಗೆ ಅಭ್ಯರ್ಥಿಗಳನ್ನ ನೇಮಕ ಮಾಡಲಾಗುತ್ತದೆ. ಹಾಗಾಗಿ ಪರೀಕ್ಷೆಗೆ ಇನ್ನೇನೋ ಕೆಲವೇ ದಿನಗಳು ಬಾಕಿ ಇದ್ದು, ಅಭ್ಯರ್ಥಿಗಳು ಈ ಕೂಡಲೇ ಸ್ಟಡಿ ಮಾಡಲು ಪ್ರಾರಂಭಿಸಿ.

ಇದೀಗ ಐಬಿಪಿಎಸ್ ಪಿಒ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್ ಮಾಡಿಕೊಳ್ಳುವಾಗ ಅಭ್ಯರ್ಥಿಗಳಿಗೆ ಸರ್ವರ್ ಸಮಸ್ಯೆ ಎದುರಾಗಬಹುದು. ಕಾರಣ ಎಲ್ಲಾ ಅಭ್ಯರ್ಥಿಗಳು ಇದೀಗ ಒಂದೆ ಟೈಂ ಲಾಗಿನ್ ಆಗುವುದರಿಂದ ವೆಬ್‌ಸೈಟ್ ನಿಧಾನಗತಿಯಲ್ಲಿ ಕಾರ್ಯ ಚಲಿಸಬಹುದು. ಇಲ್ಲ ಹ್ಯಾಂಗ್ ಆಗುವ ಸಂಭವ ಕೂಡಾ ಇರುತ್ತದೆ. ಹಾಗಾಗಿ ಸದ್ಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಸಾಧ್ಯವಾಗದೇ ಇರುವ ಅಭ್ಯರ್ಥಿಗಳು ಸ್ವಲ್ಪ ಹೊತ್ತಿನ ಬಳಿಕ ಎಲ್ಲಾ ಫ್ರೀ ಆದ ಮೇಲೆ ಲಾಗಿನ್ ಆಗಿ ಡೌನ್‌ಲೋಡ್ ಮಾಡಿಕೊಳ್ಳುವುದು ಒಳಿತು.

ಇನ್ನು ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಅಥವಾ ರೋಲ್ ನಂಬರ್ ಹಾಕಿ ಅದಕ್ಕೆ ಪಾಸ್‌ವರ್ಡ್ ಆಗಿ ಜನ್ಮ ದಿನಾಂಕವನ್ನ ನಮೂದಿಸಿ ಲಾಗಿನ್ ಆಗಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗೂ ಡೌನ್‌ಲೋಡ್ ಮಾಡಲು ಫಾಲೋ ಮಾಡಬೇಕಾದ ಸುಲಭ ಸ್ಟೆಪ್ ಗಳನ್ನ ಕೆಳಗೆ ನೀಡಲಾಗಿದೆ. ಅಭ್ಯರ್ಥಿಗಳು ಆ ಸ್ಟೆಪ್ಸ್ ಫಾಲೋ ಮಾಡಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಪರೀಕ್ಷೆಯಲ್ಲಿ ಯಾರು ಪಾಸಾಗುತ್ತಾರೋ ಆ ಅಭ್ಯರ್ಥಿಗಳು, ನವಂಬರ್ ನಲ್ಲಿ ನಡೆಯುವ ಪ್ರಮುಖ ಪರೀಕ್ಷೆಗೆ ಅರ್ಹರಾಗುತ್ತಾರೆ. 2019ರ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸಂದರ್ಶನ ನಡೆಯುವ ಸಾಧ್ಯತೆ ಇದೆ. ಹಾಗೂ ನೇಮಕಾತಿಯ ಪ್ರಕ್ರಿಯೆಯು ಎಪ್ರಿಲ್ 2019 ರೊಳಗೆ ಕಂಪ್ಲೀಟ್ ಆಗಿ ಮುಗಿಯಲಿದೆ.

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಯಾರೆಲ್ಲಾ ಅಭ್ಯರ್ಥಿಗಳು ಐಬಿಪಿಎಸ್ ಪಿಒ ಪರೀಕ್ಷೆಗೆ ಹಾಜರಾಗಲಿದ್ದಿರೋ ಅವರೆಲ್ಲಾ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

{photo-feature}

  • ಸ್ಟೆಪ್ 10: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

Also Read: ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕೇಳಬಹುದಾದ ಟ್ರಿಕ್ಕಿ ಪ್ರಶ್ನೆಗಳು ಇವು

More News  

For Quick Alerts
ALLOW NOTIFICATIONS  
For Daily Alerts

English summary
IBPS PO admit card/call letter is an important document required to appear for the IBPS exam. The admit card will be released on the official website of IBPS. Admit cards are available to download online and will not be sent through post/ email to the applicants.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+