ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳ ಲೆಕ್ಕಾ ಪಕ್ಕಾ!

Posted By:

ದ್ವಿತೀಯ ಪಿಯುಸಿ ಪರೀಕ್ಷೆಯ ನಾಲ್ಕನೇ ದಿನವಾದ ಇಂದು ಲೆಕ್ಕಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯದ ಪರೀಕ್ಷೆಗಳು ನಡೆದವು. ಜಯನಗರದ ಎನ್ ಎಂ ಕೆ ಆರ್ ವಿ ಪರೀಕ್ಷಾ ಕೇಂದ್ರದಲ್ಲಿ  668 ಕಾಮರ್ಸ್ ವಿದ್ಯಾರ್ಥಿಗಳು ಲೆಕ್ಕಶಾಸ್ತ್ರದ ಪರೀಕ್ಷೆಗೆ ಹಾಜರಾಗಿದ್ದರು.

ಹೋಳಿ ಹಬ್ಬದ ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಈ ಬಾರಿಯ ಲೆಕ್ಕಶಾಸ್ತ್ರದ ಪ್ರಶ್ನೆಪತ್ರಿಕೆ ಮತ್ತಷ್ಟು ಖುಷಿ ನೀಡಿದೆ.

ಪ್ರಶ್ನೆ ಪತ್ರಿಕೆ ಹಿಡಿದು ಸಂಭ್ರಮಿಸಿದ ವಿದ್ಯಾರ್ಥಿಗಳು

ಪ್ರಶ್ನೆಪತ್ರಿಕೆ ಹೇಗಿತ್ತು ಎಂದು ಯಾವ ವಿದ್ಯಾರ್ಥಿಯನ್ನು ಕೇಳಿದರು 'ಇಟ್ಸ್ ಈಸಿ' ಎನ್ನೋ ಒಂದೇ ಉತ್ತರ. ಇಂದಿನ ಲೆಕ್ಕಶಾಸ್ತ್ರದ ಪರೀಕ್ಷೆ ಕುರಿತು ಜೈನ್ ಕಾಲೇಜು ವಿದ್ಯಾರ್ಥಿ ಅಮಿತ್ ರನ್ನು ಮಾತಾನಾಡಿಸಿದಾಗ " ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾದಾಗಿನಿಂದಲು ಎಲ್ಲಾ ಪರೀಕ್ಷೆಗಳು ಸುಲಭವಾಗಿದೆ ಎನ್ನೋ ಮಾಹಿತಿ ಇತ್ತು, ಇವತ್ತು ಲೆಕ್ಕಶಾಸ್ತ್ರದ ಪತ್ರಿಕೆ ನೋಡಿದ ಮೇಲೆ ನನಗೂ ಹಾಗೇ ಅನಿಸಿದೆ. ನಾವು ಏನನ್ನು ಊಹಿಸಿದ್ದೆವೋ ಅದಕ್ಕಿಂದ ಸುಲಭವಾದ ಪ್ರಶ್ನೆಗಳನ್ನೇ ಕೇಳಿದ್ದಾರೆ, ಅದರಲ್ಲೂ ಹದಿನಾಲ್ಕು ಅಂಕಗಳ 'ಪಾರ್ಟ್-ಸಿ' ತುಂಬಾನೆ ಖುಷಿ ನೀಡಿದೆ." ಎಂದು ಹೇಳಿದರು.

ದ್ವಿತೀಯ ಪಿಯುಸಿ ಪರೀಕ್ಷೆ ನಾಲ್ಕನೇ ದಿನ

ಪೋಷಕರ ನುಡಿ

ಎನ್ ಎಂ ಕೆ ಆರ್ ವಿ ಕಾಲೇಜಿನ ಪರೀಕ್ಷಾ ಕೇಂದ್ರದ ಬಳಿ ಎಂದಿನಂತೆ ವಿದ್ಯಾರ್ಥಿಗಳ ಪೋಷಕರು ಮಕ್ಕಳು ಪರೀಕ್ಷೆ ಬರೆದು ಬರುವುದನ್ನೇ ಕಾಯುತ್ತಿದ್ದರು. ಅವರಲ್ಲಿ ಒಬ್ಬರಾದ ಕೃಷ್ಣ ರವರು ಮಾತನಾಡಿ " ನಾವು ಮಕ್ಕಳಿಗೆ ಯಾವುದೇ ಒತ್ತಡವನ್ನು ಹೇರಿಲ್ಲ. ಎಷ್ಟೋ ಮನೆಗಳಲ್ಲಿ ಪರೀಕ್ಷೆ ಹತ್ತರವಾದಂತೆ ವಿದ್ಯಾರ್ಥಿಗಳ ಮನೆಗಳಲ್ಲಿ ಸಾಕಷ್ಟು ಒತ್ತಡವನ್ನು ಹೇರುತ್ತಾರೆ. ಟಿ.ವಿ ಕನೆಕ್ಷನ್ ತೆಗೆಸುತ್ತಾರೆ. ಹೊರಗಡೆ ಹೋಗಲು ಬಿಡುವುದಿಲ್ಲ, ಯಾವಾಗಲು ಓದುವುದರ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ, ಆದರೆ ನಾವು ನಮ್ಮ ಮನೆಗಳಲ್ಲಿ ಮಕ್ಕಳಿಗೆ ಯಾವುದೇ ಒತ್ತಡ ನೀಡಿಲ್ಲ. ನಮ್ಮ ಮನೆಯಲ್ಲಿ ನಮ್ಮ ಮಗ ಪ್ರತಿ ದಿನ ಓದಲು ಒಂದಿಷ್ಟು ಸಮಯವನ್ನು ಮೀಸಲಿರಿಸಿ ಮಿಕ್ಕ ಸಮಯದಲ್ಲಿ ನಮ್ಮ ಜೊತೆ ಟಿ.ವಿ ನೋಡುತ್ತಾರೆ, ಎಲ್ಲರಂತೆ ಎಂಜಾಯ್ ಮಾಡುತ್ತಾರೆ, ಇದರಿಂದ ಅವರು ಸದಾ ಲವಲವಿಕೆಯಿಂದಿರುತ್ತಾರೆ ಓದಿದ್ದು ಕೂಡ ಅವರಿಗೆ ಸುಲಭವಾಗಿ ಅರ್ಥವಾಗುತ್ತೆ." ಎಂದು ಹೇಳಿದರು.

ಲೆಕ್ಕಾಶಾಸ್ತ್ರ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

ನೂರು ಅಂಕಗಳ ಪ್ರಶ್ನೆಪತ್ರಿಕೆಯು 4 ಬಿಭಾಗಗಳನ್ನು ಹೊಂದಿದ್ದು, ಒಟ್ಟು 27 ಪ್ರಶ್ನೆಗಳನ್ನು ಒಳಗೊಂಡಿದೆ. ಉತ್ತರಿಸಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ.
ವಿಭಾಗ-ಎ
ಮೊದಲ ವಿಭಾಗದಲ್ಲಿ ಒಟ್ಟು ಹತ್ತು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಯು ಯಾವುದಾದರು ಏಳು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ 2 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
ವಿಭಾಗ-ಬಿ
20 ಅಂಕಗಳ ಎರಡನೇ ವಿಭಾಗದಲ್ಲಿ ಒಟ್ಟು ಏಳು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ವಿದ್ಯಾರ್ಥಿಯು ಯಾವುದಾದರು ನಾಲ್ಕು ಪ್ರಶ್ನೆಗಳಿಗೆ ಮಾತ್ರ ಸರಿಯಾಗಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ 5 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
ವಿಭಾಗ-ಸಿ
ಮೂರನೇ ವಿಭಾಗವು ಅತ್ಯಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ವಿಭಾಗವಾಗಿದೆ. ಈ ವಿಭಾಗದಲ್ಲಿ ಪ್ರತಿ ಪ್ರಶ್ನೆಗೂ ಹದಿನಾಲ್ಕು ಅಂಕಗಳನ್ನು ನಿಗದಿಪಡಿಸಲಾಗಿಸದ್ದು ಒಟ್ಟು ಏಳು ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿದ್ಯಾರ್ಥಿಯು ಏಳರಲ್ಲಿ ನಾಲ್ಕು ಪ್ರಶ್ನಗಳಿಗೆ ಉತ್ತರಿಸಬೇಕಾಗಿದ್ದು, ಈ ವಿಭಾಗವು ಒಟ್ಟು 56 ಅಂಕಗಳನ್ನು ಒಳಗೊಂಡಿರುತ್ತದೆ.
ವಿಭಾಗ-ಡಿ
ನಾಲ್ಕನೇ ಮತ್ತು ಕೊನೆಯ ವಿಭಾಗ ಇದಾಗಿದ್ದು ಒಟ್ಟು ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ಪ್ರತಿ ಪ್ರಶ್ನೆಯ ಸರಿ ಉತ್ತರಕ್ಕೆ ಐದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ವಿದ್ಯಾರ್ಥಿಯು ಯಾವುದಾದರು ಎರಡಕ್ಕೆ ಸರಿ ಉತ್ತರ ನೀಡಬೇಕು.

ಪರೀಕ್ಷೆ ನಂತರ ಹೋಳಿಯಲ್ಲಿ ಮಿಂದ ವಿದ್ಯಾರ್ಥಿಗಳು

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡದ ನಡುವೆಯು ಹೋಳಿ ಸಂಭ್ರಮಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ನಂತರ ಒಬ್ಬರಿಗೊಬ್ಬರು ಹೋಳಿ ಶುಭಾಶಯ ಕೋರುತ್ತ ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಪರೀಕ್ಷೆ ಸುಲಭವಾಗಿದ್ದ ಕಾರಣ ವಿದ್ಯಾರ್ಥಿಗಳು ಹೋಳಿಯನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಿದರು.

ಇದನ್ನು ಗಮನಿಸಿ:2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

English summary
On fourth day of puc examination students enjoyed accountancy question paper

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia