ದ್ವಿತೀಯ ಪಿಯುಸಿ ಎಲೆಕ್ಟ್ರಾನಿಕ್ಸ್ ಪ್ರಶ್ನೆಪತ್ರಿಕೆ ಪರ್ವಾಗಿಲ್ಲ!

Posted By:

ಪಿಯುಸಿ ಪರೀಕ್ಷೆಯ ಎರಡನೇ ದಿನದ ಎಲೆಕ್ಟ್ರಾನಿಕ್ಸ್ ಪತ್ರಿಕೆ ವಿಷಯದಲ್ಲೂ ಕಂಪ್ಯೂಟರ್ ಸೈನ್ಸ್ ಗೆ ಸಿಕ್ಕಹಾಗೆ ಪರ್ವಾಗಿಲ್ಲ ಎನ್ನುವ ಉತ್ತರ ಸಿಕ್ಕಿದೆ.

ಜಯನಗರದ ವಿಜಯ ಕಾಲೇಜು ಪರೀಕ್ಷಾ ಕೆಂದ್ರದಲ್ಲಿ ಒಟ್ಟು 56 ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್ ಪರೀಕ್ಷೆ ಬರೆದಿದ್ದು ಪ್ರಶ್ನೆ ಪತ್ರಿಕೆ ನಿರೀಕ್ಷೆಗೆ ತಕ್ಕಹಾಗೆ ಇರಲಿಲ್ಲ ಎನ್ನುವ ಪ್ರತಿಕ್ರಿಯೆ ನೀಡಿದ್ದಾರೆ.

ಜೆಕೆವಿ ಕಾಲೇಜು ವಿದ್ಯಾರ್ಥಿ ಸುಮನ್ ರನ್ನು ಮಾತನಾಡಿಸಿದಾಗ " ಪ್ರಶ್ನೆ ಪತ್ರಿಕೆ ಅಷ್ಟೇನು ಕಷ್ಟವಿರಲಿಲ್ಲ. ಆದರೆ ಚೆನ್ನಾಗಿ ಓದಿದ್ದರೇ ಇನ್ನು ಉತ್ತಮವಾಗಿ ಬರಿಯಬಹುದಿತ್ತು. ಆದರೆ ನಾನು ಬರೆದಿರುವುದು ನನಗೆ ಸಮಾಧಾನ ನೀಡಿದೆ" ಎನ್ನುತ್ತಾರೆ.

ಎಲೆಕ್ಟ್ರಾನಿಕ್ಸ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಮೇಲ್ವಿಚಾರಕರ ಮಾತು

ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಶಿಕ್ಷಕಿ ಸೌಭ್ಯಾಗ್ಯ ಮಾತಿನಂತೆ "ವಿಜ್ಞಾನ ವಿಷಯಗಳಲ್ಲಿ ಫಿಸಿಕ್ಸ್, ಮ್ಯಾಥ್ಸ್ ಕಷ್ಟ ಇರುತ್ತದೆ. ಆದರೆ ಎಲೆಕ್ಟ್ರಾನಿಕ್ಸ್ ಪತ್ರಿಕೆ ಅವುಗಳಿಗೆ ಹೋಲಿಸಿದರೆ ಸುಲಭವಾಗಿರುತ್ತದೆ. ಯಾರು ಚೆನ್ನಾಗಿ ಓದಿರುತ್ತಾರೋ ಅವರಿಗೆ ಈ ಪತ್ರಿಕೆಯು ಸುಲಭ ಮತ್ತು ಹೆಚ್ಚು ಅಂಕಗಳನ್ನು ಗಳಿಸಬಹುದು."

ಎಲೆಕ್ಟ್ರಾನಿಕ್ಸ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಎಪತ್ತು ಅಂಕಗಳ ಎಲೆಕ್ಟ್ರಾನಿಕ್ಸ್ ಪತ್ರಿಕೆಯು ಎ,ಬಿ,ಸಿ ಮತ್ತು ಡಿ ಎಂಬ ನಾಲ್ಕು ಭಾಗಗಳಲ್ಲಿ ಒಟ್ಟು 37 ಪ್ರಶ್ನೆಗಳನ್ನು ಒಳಗೊಂಡಿದೆ.
ಭಾಗ-ಎ
ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ಯಾವುದೇ ಆಯ್ಕೆಗಳು ಇರುವುದಿಲ್ಲ. ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಉತ್ತರಿಸಬೇಕಾಗುತ್ತದೆ ಮತ್ತು ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
ಭಾಗ-ಬಿ
ಇಲ್ಲಿ ಒಟ್ಟು 8 (ಎಂಟು) ಪ್ರಶ್ನೆಗಳು ಇದ್ದು ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ. ಬಿಭಾಗವು ಒಟ್ಟು ಹತ್ತು ಅಂಕಗಳನ್ನೊಳಗೊಂಡಿರುತ್ತದೆ.
ಭಾಗ-ಸಿ
ಬಿ ಭಾಗದಂತೆ ಸಿ ಭಾಗವು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಐದು ಪ್ರಶ್ನೆಗಳಿಗೆ ಉತ್ತರಿಸಬೇಕು . ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಮೂರು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ. ಈ ವಿಭಾಗದಲ್ಲಿ ಹದಿನೈದು ಅಂಕಗಳಿರುತ್ತದೆ.

ಭಾಗ-ಡಿ

ಡಿ ಭಾಗದಲ್ಲಿ ಎರಡು ವಿಭಾಗಗಳಿದ್ದು ಮೊದಲ ವಿಭಾಗದಲ್ಲಿ ಐದು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಯು ಯಾವುದಾದರು ಮೂರಕ್ಕೆ ಉತ್ತರಿಸಬೇಕು. ಪ್ರತಿಪ್ರಶ್ನೆಗೂ ಮೂರು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಇನ್ನು ಎರಡನೇ ವಿಭಾಗದಲ್ಲಿ ಆರು ಪ್ರಶ್ನೆಗಳನ್ನು ಕೇಳಿ ನಾಲ್ಕಕ್ಕೆ ಉತ್ತರಿಸಲು ಸೂಚಿಸಲಾಗಿರುತ್ತದೆ. ಪ್ರತಿ ಪ್ರಶ್ನೆಯ ಸರಿ ಉತ್ತರಕ್ಕೆ ಐದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಎರಡೂ ವಿಭಾಗದಿಂದ ಒಟ್ಟು ಹನ್ನೊಂದು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಈ ಭಾಗವು ಒಟ್ಟು 35 ಅಂಕಗಳನ್ನು ಒಳಗೊಂಡಿರುತ್ತದೆ.

ಇದನ್ನು ಗಮನಿಸಿ:

English summary
The second day of the exam for the Karnataka II PUC exams got over today with the science students giving their Electronics exams

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia