ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಮೂರೂ ವಿಷಯಗಳು

Posted By:

ದ್ವಿತೀಯ ಪಿಯುಸಿ ಪರೀಕ್ಷೆಯ ಮೂರನೇ ದಿನವಾದ ಇಂದು ಮೂರು ವಿಷಯಗಳ ಪರೀಕ್ಷೆ ನಡೆದಿವೆ. ಲಾಜಿಕ್ (ತರ್ಕಶಾಸ್ತ್ರ), ಶಿಕ್ಷಣ ಮತ್ತು ಬೆಸಿಕ್ ಮ್ಯಾಥ್ಸ್ ಪತ್ರಿಕೆಗೆ ಇಂದು ವಿದ್ಯಾರ್ಥಿಗಳು ಉತ್ತರಿಸಿದ್ದಾರೆ.

ಕಲಾ ವಿಭಾಗದ ವಿದ್ಯಾರ್ಥಿಗಳು ಎರಡು ಲಾಜಿಕ್ ಮತ್ತು ಶಿಕ್ಷಣ ಪತ್ರಿಕೆಗೆ ಉತ್ತರಿಸಿದರೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಬೇಸಿಕ್ ಮ್ಯಾಥ್ಸ್ ಪ್ರಶ್ನೆಪತ್ರಿಕೆಗೆ ಉತ್ತರಿಸಿದರು.

ಇಂದು ಮೂರೂ ವಿಷಯಗಳು

ಪರೀಕ್ಷೆ ಮುಗಿಸಿ ಹೊರಬಂದ ಕಲಾ ವಿಭಾಗದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ತುಂಬಿತ್ತು. ವಿದ್ಯಾರ್ಥಿಗಳೇ ಹೇಳುವಂತೆ ಸಾಮಾನ್ಯವಾಗಿ ಎಲ್ಲರು ಸುಲಭವಾಗಿ ಉತ್ತರಿಸಬಹುದಾದಂತ ಪ್ರಶ್ನೆಗಳು ಬಂದಿದ್ದು, ಪ್ರತಿಯೊಬ್ಬರು ಉತ್ತಮ ಅಂಕಗಳಿಸಬಹುದಾಗಿದೆ.
ಬೇಸಿಕ್ ಮ್ಯಾಥ್ಸ್ ಪ್ರಶ್ನೆಪತ್ರಿಕೆಗೆ ಉತ್ತರಿಸಿದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೂಡ ಮಂದಹಾಸ ಬೀರಿರುವುದು ಪರೀಕ್ಷೆ ಸುಗುಮವಾಗಿ ನಡೆದಿರುವುದನ್ನು ತಿಳಿಸುತಿತ್ತು.

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊಸ ನಿಯಮಗಳನ್ನು ಜಾರಿ ಮಾಡಿರುವುದರಿಂದ ಎಲ್ಲಿಯೂ ಗೊಂದಲಗಳು ಉದ್ಭವವಾಗಿಲ್ಲ. ಸೂಕ್ತ ಭದ್ರತೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಪರೀಕ್ಷೆ ಸುಗಮವಾಗಿ ನಡೆಯುವಂತೆ ಮಾಡಿವೆ. ಅಲ್ಲದೇ ಪರೀಕ್ಷಾ ಸಮಯ ಕೂಡ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ನಿರಾಯಾಸವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುವಪುವಂತಾಗಿದೆ.

ಇದನ್ನು ಗಮನಿಸಿ:ದ್ವಿತೀಯ ಪಿಯುಸಿ ಎಲೆಕ್ಟ್ರಾನಿಕ್ಸ್ ಪ್ರಶ್ನೆಪತ್ರಿಕೆ ಪರ್ವಾಗಿಲ್ಲ!

English summary
On the third day of Karrnataka PU examination students attended three subjects

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia