ಕನ್ನಡಕ್ಕಾಗಿ ಪ್ರತ್ಯೇಕ ಕೋಶ ರಚಿಸಿದ ಐಐಎಸ್ಸಿ

Posted By:

ದೇಶದ ಅಗ್ರಮಾನ್ಯ ವಿಜ್ಞಾನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ (ಐಐಎಸ್ಸಿ) ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಮುಂದಾಗಿದೆ.

ಐಐಇ ಮತ್ತು ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳ ಪ್ರಮಾಣ ಪತ್ರಕ್ಕೆ ಎಐಸಿಟಿಇ ಗ್ರೀನ್ ಸಿಗ್ನಲ್

ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡ ಭಾಷೆಗೂ ಸ್ಥಾನ ಕೊಡಲು ಮುಂದಾಗಿದ್ದು, ಇದಕ್ಕಾಗಿ ತನ್ನ ಆವರಣದಲ್ಲಿ ತ್ರಿಭಾಷಾ ನೀತಿ ಅನುಷ್ಠಾನಕ್ಕೆ ಪ್ರತ್ಯೇಕ ಕೋಶ ರಚಿಸಿದೆ.

ಐಐಎಸ್ಸಿಯಲ್ಲಿ ಕನ್ನಡ ಭಾಷೆ

ಸಂಸ್ಥೆಯ ವಿಭಾಗ ಮುಖ್ಯಸ್ಥರು ನೌಕರರು ಮತ್ತು ನೌಕರರ ಸಂಘಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಈ ಬಗ್ಗೆ ಸೂಚನಾಪತ್ರವೊಂದನ್ನು ರವಾನಿಸಿ ಈ ಬಗ್ಗೆ ಮಾಹಿತಿ ನೀಡಿದೆ.

ಇತ್ತೀಚಿಗಷ್ಟೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ತಂಡ ಸಂಸ್ಥೆಗೆ ಭೇಟಿ ನೀಡಿತ್ತಲ್ಲದೆ, ಆಡಳಿತ, ವ್ಯವಹಾರದಲ್ಲಿ ಕನ್ನಡ ಬಳಕೆಗೆ ಸೂಚಿಸಿತ್ತು. ಅದರ ಬೆನ್ನಲ್ಲೆ ಸಂಸ್ಥೆಯು ಕೋಶ ರಚಿಸಿದೆ. ಅಲ್ಲದೆ ವೆಬ್ಸೈಟ್ ನಲ್ಲಿ ಕನ್ನಡ ಮಾಹಿತಿ ಅಳವಡಿಸಲು ಕೂಡ ಸಂಸ್ಥೆ ತಯಾರಿ ನಡೆಸಿದೆ.

ಐಐಎಸ್ಸಿ ಸಂಸ್ಥೆಯ ವೆಬ್ಸೈಟ್ ನಲ್ಲಿ ಸದ್ಯ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಮಾಹಿತಿ ಇದೆ. ಮೂರು ತಿಂಗಳಲ್ಲಿ ಕನ್ನಡ ಮಾಹಿತಿ ಅಳವಡಿಸಿಕೊಳ್ಳಲಾಗುವುದು. ವೆಬ್ಸೈಟ್ ಗೆ ಅಗತ್ಯವಿರುವ ಮಾಹಿತಿಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ತರ್ಜುಮೆ ಮಾಡಲು ಎರಡರಿಂದ ಮೂರು ತಿಂಗಳು ಹಿಡಿಯಬಹುದು ಎಂದ ಸಂಸ್ಥೆ ತಿಳಿಸಿದೆ.

ಐಐಎಸ್ಸಿ ಗೆ ದೇಶ, ವಿದೇಶದಿಂದ ಜನ ಕಲಿಕೆಗೆ ಆಗಮಿಸುತ್ತಾರಲ್ಲದೇ ವಿವಿಧೆಡೆಯ ಸಂಶೋಧಕರು ಇಲ್ಲಿದ್ದಾರೆ. ಎಚ್.ಜಿ ಶ್ರೀನಿವಾಸ್ ಪ್ರಸಾದ್ ಎಂಬುವವರು ಇಲ್ಲಿನ ಕನ್ನಡೇತರರಿಗೆ ಕನ್ನಡ ಮಾತನಾಡಲು ಕಲಿಸುವ ತರಬೇತಿ ಹಮ್ಮಿಕೊಳ್ಳುತ್ತಿದ್ದಾರೆ. 12 ವರ್ಷದಿಂದ ಈವರೆಗೆ ಅವರು 1000 ಕ್ಕೂ ಹೆಚ್ಚು ಮಂದಿಗೆ ಕನ್ನಡ ಮಾತನಾಡಲು ಕಲಿಸಿದ್ದಾರೆ. 22-24 ತರಗತಿ ಒಳಗೊಂಡಿರುವ ಮೂರು ತಿಂಗಳ ಕೋರ್ಸ್ ಅನ್ನು ಅವರು ನಡೆಸುತ್ತಿದ್ದಾರೆ.

English summary
In addition to English and Hindi IISCC has created a separate directory for Kannada to implement Kannada Language on its premises

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia