ದೇಶದಲ್ಲಿ ಹೆಚ್ಚಿರುವ ಐಎಎಸ್, ಐಪಿಎಸ್ ಅಧಿಕಾರಿಗಳ ಕೊರತೆ

Posted By:

ವಿಶ್ವಗುರು ಆಗಬೇಕೆಂದು ಹಲವು ಬದಲಾವಣೆಗಳೊಂದಿಗೆ ಸಾಗುತ್ತಿರುವ ಭಾರತದ ಆಢಳಿತ ವ್ಯವಸ್ಥೆಯಲ್ಲಿ ಆಢಳಿತಾಧಿಕಾರಿಗಳ ಸಂಖ್ಯೆಯೇ ಇಳಿಮುಖ ಕಂಡಿದೆ. ಪ್ರಸ್ತುತ 1400 ಕ್ಕೂ ಹೆಚ್ಚಿನ ಐಎಎಸ್ ಮತ್ತು 900 ಕ್ಕೂ ಅಧಿಕ ಐಪಿಎಸ್ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.

ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವರಾದ ಜಿತೇಂದ್ರ ಸಿಂಗ್ ಲೋಕ ಸಭೆಯಲ್ಲಿ ದೇಶದಲ್ಲಿ ಅವಶ್ಯವಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಂಖ್ಯೆಗಳನ್ನು ನೀಡಿದ್ದಾರೆ.

ಸದ್ಯ 6396 ಐಎಎಸ್ ಹುದ್ದೆಗಳ ಪೈಕಿ ಕೇವಲ 4926 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು 1400 ಕ್ಕೂ ಹೆಚ್ಚು ಐಎಎಸ್ ಮತ್ತು 900 ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳ ಕೊರತೆ ಇದೆ ಎಂದು ಸಚಿವರು ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಐಪಿಎಸ್ ಅಧಿಕಾರಿಗಳ ಸಂಖ್ಯೆ ಕ್ಷೀಣಿಸಿದ್ದು .ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಂತೆ 980 ಐಪಿಎಸ್ ಅಧಿಕಾರಿಗಳನ್ನು ನೇಮಕಮಾಡಿಕೊಳ್ಳಲು ಯೋಜನೆ ನಡೆಸಲಾಗಿದೆ.

ಐಎಎಸ್, ಐಪಿಎಸ್ ಅಧಿಕಾರಿಗಳ ಕೊರತೆ

ಖಾಲಿ ಇರುವ ಸ್ಥಳಗಳು

ಬಿಹಾರ: 128
ಉತ್ತರ ಪ್ರದೇಶ: 117
ಪಶ್ಚಿಮ ಬಂಗಾಳ: 101

ಐಪಿಎಸ್ ಹುದ್ದೆಗಳು : 908

ಉಪ -ವಿಭಾಗ
ಉತ್ತರ ಪ್ರದೇಶ-114
ಪಶ್ಚಿಮ ಬಂಗಾಳ-88
ಒರಿಸ್ಸಾ-79
ಕರ್ನಾಟಕ-72
ಬಿಹಾರದಲ್ಲಿ ಐಪಿಎಸ್ ಗಾಗಿ 231 ಹುದ್ದೆಗಳ ಪೈಕಿ 43 ಹುದ್ದೆಗಳು ಖಾಲಿ ಇವೆ. ಇದರ ಜೊತೆಯಲ್ಲಿ ಐಎಫ್ಎಸ್ ಹುದ್ದೆಗಳು ಕೂಡ ಖಾಲಿ ಇದೆ.

ಐಎಫ್ಎಸ್ ಹುದ್ದೆಗಳು

ಐಪಿಎಸ್ ಐಎಎಸ್ ಹುದ್ದೆಗಳ ರೀತಿ ಐಎಫ್ಎಸ್ ಹುದ್ದೆ ಕೂಡ ಹಿಂದೆಯೇ ಉಳಿದಿದೆ. ಇದುವರೆಗೂ 3157 ಐಎಫ್ಎಸ್ ಹುದ್ದೆಗಳಲ್ಲಿ ಒಟ್ಟು 2597 ಹುದ್ದೆಗಳನ್ನು ನೇಮಕಮಾಡಿಕೊಳ್ಳಲಾಗಿದ್ದು ಇನ್ನು 560 ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯವಾರು ಖಾಲಿ ಇರುವ ಹುದ್ದೆಗಳು

ಮಹಾರಾಷ್ಟ್ರ : 46
ಮಧ್ಯಪ್ರದೇಶ, ತಮಿಳುನಾಡು, ಒರಿಸ್ಸಾದಲ್ಲಿ ತಲಾ 45 ಹುದ್ದೆಗಳು ಖಾಲಿ ಇವೆ.

ಕಳೆದ ನಾಲಕ್ಕು ವರ್ಷಗಳಲ್ಲಿ ಐಎಫ್ಎಸ್ ಅಧಿಕಾರಿಗಳ ನೇಮಕಾತಿಯಲ್ಲಿ ಸರ್ಕಾರವು ಹೆಚ್ಚಿನ ಒಲವು ತೋರಿದ್ದು ನೇಮಕಾತಿ ಸಂಖ್ಯೆಯನ್ನು 180 ಕ್ಕೆ ಏರಿಸಲಾಗಿದೆ.

ಕೇಂದ್ರ ಸಚಿವರ ಪ್ರಕಾರ 2009 ರಿಂದ 2015 ರವರೆಗೂ ಐಎಫಎಸ್ ನಲ್ಲಿ 110 ಮತ್ತು ಐಪಿಎಸ್ ನಲ್ಲಿ 150 ಹುದ್ದೆಗಳನ್ನು ಹೆಚ್ಚಿಸಲಾಗಿದೆ. ಮತ್ತು ಅಧಿಕಾರಿಗಳ ನೇಮಕಾತಿ ಮತ್ತು ಬಡ್ತಿ ವಿಚಾರದಲ್ಲು ಅನೇಕ ನೂತನ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರೀಕ ಸೇವಾ ಅಧಿಕಾರಿಗಳ ಕೊರತೆ ಇರುವುದನ್ನು ಗಮನಿಸಿದ ಸದನವು ಶೀಘ್ರದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚಿಸಿದೆ.

ಕೇಂದ್ರಕ್ಕೆ ಅಪಾಯ

ದೇಶದ ನಾಗರೀಕ ಸೇವಾ ವಲಯದಲ್ಲಿ ಇಷ್ಟು ಪ್ರಮಾಣದ ಹುದ್ದೆಗಳು ಖಾಲಿ ಇರುವುದು ಅಪಾಯದ ಸಂಗತಿ, ಶೀಘ್ರದಲ್ಲಿ ಇವುಗಳನ್ನು ಭರ್ತಿ ಮಾಡದೇ ಹೋದಲ್ಲಿ ಮುಂದೆ ಸಾಕಷ್ಟು ತೊಂದರೆಗಳು ಸಂಭವಿಸಬಹುದು ಎಂದು ಸಮಿತಿ ತಿಳಿಸಿದೆ. ಒಂದು ವೇಳೆ ಈ ಹುದ್ದೆಗಳು ಭರ್ತಿ ಆಗದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗಿದೆ.

ಇದನ್ನು ಗಮನಿಸಿ: ಯುಪಿಎಸ್‌ಸಿ ಐಎಫ್‌ಎಸ್ ಪರೀಕ್ಷೆ ಫಲಿತಾಂಶ ಪ್ರಕಟ

English summary
India is facing a deficit of IPS and IAS officers, according to the recent statement of the Union Minister of State for Personnel, Public Grievances and Pensions, Jitendra Singh in Lok Sabha

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia