Language Learning Training : ಭಾಷಾ ತರಬೇತಿ ಕಾರ್ಯಗಾರಕ್ಕೆ ಕನ್ನಡ ಭಾಷೆ ಸೇರ್ಪಡೆಗೆ ಆದೇಶ

ಭಾಷಾ ತರಬೇತಿ ಕಾರ್ಯಗಾರಕ್ಕೆ ಕನ್ನಡ ಸೇರ್ಪಡೆ

ಲೋಕಸಭೆ ಸಚಿವಾಲಯದ ಭಾಷಾ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಸೇರ್ಪಡೆ ಮಾಡದಿರುವ ಕಾರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಸೇರ್ಪಡಿಸಲು ಆದೇಶ ಹೊರಡಿಸಲಾಗಿದೆ.

 

ಜೂನ್ 22 ರಿಂದ ದೆಹಲಿಯಲ್ಲಿ ಹಮ್ಮಿಕೊಂಡಿರುವ ಪ್ರೈಡ್ ಕಲಿಕಾ ಕಾರ್ಯಗಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಈ ಕಾರ್ಯಗಾರದಲ್ಲಿ ತೆಲುಗು, ತಮಿಳು, ಮರಾಠಿ, ಬಂಗಾಳ ಬಾಷೆಗಳನ್ನು ಸೇರಿಸಲಾಗಿತ್ತು. ಆದರೆ ಈ ತರಬೇತಿಯಲ್ಲಿ ಕನ್ನಡ ಭಾಷೆಯನ್ನು ಲೋಕಸಭೆ ಸಚಿವಾಲಯವು ಸೇರ್ಪಡೆ ಮಾಡಿರಲಿಲ್ಲ.

ಈ ಕುರಿತು ಎಲ್ಲೆಡೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿತ್ತು. ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಅದಲ್ಲದೆಯೂ ಜಿ.ಸಿ ಚಂದ್ರಶೇಖರ್ ಅವರು ಉಪರಾಷ್ಟ್ರಪತಿಗೆ ಈ ಕುರಿತು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಇದೀಗ ಕನ್ನಡವನ್ನು ಸೇರ್ಪಡೆ ಮಾಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
finally kannada language added to training in language learning.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X