Kannada Rajyotsava : ರಾಜ್ಯೋತ್ಸವದ ಅಂಗವಾಗಿ ಒಂದು ವಾರ ಮಾತಾಡ್ ಮಾತಾಡ್ ಕನ್ನಡ ಅಭಿಯಾನ

ಕನ್ನಡ ರಾಜ್ಯೋತ್ವದ ಅಂಗವಾಗಿ ಕನ್ನಡ ಅಭಿಯಾನ ಘೋಷಣೆ : ಸಚಿವ ಸುನೀಲ್ ಕುಮಾರ್

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಒಂದು ವಾರದ ಕನ್ನಡ ಅಭಿಯಾನವನ್ನು ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಮಂಗಳವಾರ ಘೋಷಿಸಿದ್ದಾರೆ.

ಕನ್ನಡಕಾಗಿ ನಾವು (ಕನ್ನಡಕ್ಕಾಗಿ ನಾವು) ಎಂಬ ಶೀರ್ಷಿಕೆ ಅಡಿಯಲ್ಲಿ ಅಭಿಯಾನವನ್ನು ಅಕ್ಟೋಬರ್ 24 ರಿಂದ 30 ರವರೆಗೆ ನಡೆಸಲಾಗುತ್ತಿದೆ. ಈ ಮೂಲಕ ಒಂದು ವಾರಗಳ ಕಾಲ "ಕನ್ನಡ ವಾತಾವರಣ" ಸೃಷ್ಟಿಸುವ ಗುರಿಯನ್ನು ಹೊಂದಿದೆ.

"ಮಾತಾಡು ಮಾತಾಡು ಕನ್ನಡ" ಎನ್ನುವ ಅಭಿಯಾನದಡಿ ಅಕ್ಟೋಬರ್ 28 ರಂದು ಕರ್ನಾಟಕದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರು ಕನ್ನಡ ಹಾಡುಗಳನ್ನು ಹಾಡುವುದನ್ನು ನೋಡಬಹುದು. ಇದರಲ್ಲಿ ಐಎಎಸ್, ಐಪಿಎಸ್ ಮತ್ತು ಯುಪಿಎಸ್‌ಸಿ ಅಧಿಕಾರಿಗಳು ಕೂಡ ಹಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಲೋಗೋ ಮತ್ತು ಕ್ಯಾಚ್‌ಲೈನ್ (ಮಾತಾಡ್ ಕನ್ನಡ) ದೊಂದಿಗೆ ನಡೆಯುವ ಈ ಅಭಿಯಾನವು ಕನ್ನಡಿಗರಲ್ಲದವರಿಗೆ ಕನ್ನಡ ಕಲಿಸಲು ಮತ್ತು ಐಟಿ/ಬಿಟಿ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಕಚೇರಿಯಲ್ಲಿ ಕನ್ನಡ ಭಾಷೆ ಬಳಸಲು ಪ್ರೋತ್ಸಾಹಿಸುವ ಪ್ರಯತ್ನವಿದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಳಕೆಯನ್ನು ಉತ್ತೇಜಿಸುವುದು ಮತ್ತು ಕನ್ನಡದ ಪ್ರಸಿದ್ಧ ಬರಹಗಾರರ ಕೃತಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಈ ಅಭಿಯಾನದ ಗುರಿಯಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಮತ್ತು ಕನ್ನಡದ ಮಹತ್ವವನ್ನು ಬಿಂಬಿಸುವ ನಾಟಕ ಪ್ರದರ್ಶನಗಳು, ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ 'ಕನ್ನಡ ಸಾಂಸ್ಕೃತಿಕ ಉತ್ಸವ'ವನ್ನು ಆಯೋಜಿಸಲು ಯೋಜಿಸಿದೆ. ಬೆಂಗಳೂರು ನಗರದ ಎಲ್ಲಾ ವಾರ್ಡ್‌ಗಳಲ್ಲಿ, ಐಟಿ/ಬಿಟಿ ಸಂಸ್ಥೆಗಳ ಆವರಣದಲ್ಲಿ ಮತ್ತು ಕಾರ್ಖಾನೆಗಳು, ಮೆಟ್ರೋ ನಿಲ್ದಾಣಗಳು ಹಾಗೂ ವಿಧಾನಸೌಧದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತಿದೆ.

ಅಕ್ಟೋಬರ್ 29 ರಿಂದ 31 ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈವೆಂಟ್ ನಡೆಯಲಿದೆ. ಈವೆಂಟ್ ನಲ್ಲಿ ಪುಸ್ತಕ ಪ್ರದರ್ಶನ, ಜನಾಂಗೀಯ ಉಡುಗೆ ಪ್ರದರ್ಶನ ,ಆಹಾರ, ಕಲೆ ಮತ್ತು ಶಿಲ್ಪ ಮೇಳಗಳನ್ನು ಹೊಂದಿರುತ್ತದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಒಳಗೊಂಡಿರುತ್ತದೆ.

"ಕನ್ನಡ ರಾಜ್ಯೋತ್ಸವವು ಕೇವಲ ನವೆಂಬರ್ 1 ರಂದು ಮಾತ್ರ ಆಚರಿಸುವಂತದ್ದಲ್ಲ. ನಾವು ಭಾಷೆಯನ್ನು ಆಚರಿಸಬೇಕು ಮತ್ತು ದೈನಂದಿನ ಜೀವನದಲ್ಲಿ ಇತರ ಭಾಷೆಗಳ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಕನ್ನಡವನ್ನು ಹೆಚ್ಚಾಗಿ ಬಳಸಬೇಕು ಎಂದು ಸಚಿವರು ಮಾತನಾಡಿದ್ದಾರೆ.

ಕನ್ನಡ ಮಾತನಾಡುವ ಸ್ಪರ್ಧೆ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂಗ್ಲಿಷ್ ಅಥವಾ ಇತರ ಭಾಷೆಗಳ ಪದಗಳನ್ನು ಬಳಸದೆಯೇ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ನಾಲ್ಕು ನಿಮಿಷಗಳ ಸೆಲ್ಫಿ ವೀಡಿಯೋ ಅನ್ನು ಕಳುಹಿಸಬೇಕು. ಜಿಲ್ಲಾ ಮಟ್ಟದಲ್ಲಿ ವಿಜೇತರು ₹ 5,000 (ಪ್ರಥಮ ಬಹುಮಾನ), ₹ 3,000 (ಎರಡನೇ ಬಹುಮಾನ) ಮತ್ತು ₹ 2,000 ನಗದು ಬಹುಮಾನಗಳನ್ನು ಪಡೆಯುತ್ತಾರೆ.

ರಾಜ್ಯಮಟ್ಟದ ಸ್ಪರ್ಧೆಗೆ ಜಿಲ್ಲಾಮಟ್ಟದ ವಿಜೇತರನ್ನು ಆಯ್ಕೆ ಮಾಡಲಾಗುವುದು. ಅಲ್ಲಿ ಪ್ರಥಮ ವಿಜೇತರಿಗೆ 50,000/-ರೂ, ದ್ವಿತೀಯ ವಿಜೇತರಿಗೆ ₹ 30,000/-ರೂ ಮತ್ತು ತೃತೀಯ ವಿಜೇತರಿಗೆ 20,000/-ರೂ ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಅಕ್ಟೋಬರ್ 28 ವಿಡಿಯೋ ರೆಕಾರ್ಡಿಂಗ್ ಸ್ವೀಕರಿಸಲು ಕೊನೆಯ ದಿನಾಂಕವಾಗಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ ಜನರು ಭಾಗವಹಿಸಲು ಅರ್ಹರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ 14 ದೇಶಗಳು ಕೈಜೋಡಿಸಿವೆ. ಹೆಚ್ಚಿನ ವಿವರಗಳನ್ನು ಇಲಾಖೆಯ ವೆಬ್‌ಸೈಟ್‌ ಗೆ ಭೇಟಿ ನೀಡಿ ಪಡೆಯಬಹುದು.

For Quick Alerts
ALLOW NOTIFICATIONS  
For Daily Alerts

English summary
Kannada and Culture Minister Sunil Kumar announced a week-long Kannada campaign to celebrate the language ahead of Kannada Rajyotsava on November 1.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X