ದ್ವಿತೀಯ ಪಿಯುಸಿ ಪರೀಕ್ಷೆ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ದ್ವಿತೀಯ ಪಿಯುಸಿ ಪರೀಕ್ಷೆ ಏಳನೇ ದಿನವಾದ ಇಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ ವಿಷಯದ ಪರೀಕ್ಷೆಗಳು ನಡೆದವು.

ಜಯನಗರದ ವಿಜಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ತೆಗೆದುಕೊಂಡಿದ್ದ 304 ವಿದ್ಯಾರ್ಥಿಗಳ ಪೈಕಿ 277 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು 27 ಮಂದಿ ಗೈರು ಹಾಜರಿದ್ದರು.

ಇಂದಿನ ಪರೀಕ್ಷೆ ಬರೆದ ಅರ್ಥಶಾಸ್ತ್ರದ ವಿದ್ಯಾರ್ಥಿಗಳು ನಗುಮೊಗದಿಂದಲೇ ಹೊರಗೆ ಬಂದರಾದರು ಕೆಲವರು ನಿರಾಶೆ ವ್ಯಕ್ತಪಡಿಸಿದ್ದಾರೆ. ನಿರೀಕ್ಷಿಸಿದ ಪ್ರಶ್ನೆಗಳು ಬಾರದ ಕಾರಣ ಹಲವು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಇನ್ನುಳಿದಂತೆ ಇತರರು ಅರ್ಥಶಾಸ್ತ್ರದ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಉತ್ತರಿಸಿರುವುದು ಸಾಮಾನ್ಯವಾಗಿ ಕಂಡು ಬಂತು. ಅನಿರೀಕ್ಷಿತ ಪ್ರಶ್ನೆಗಳು ಬಂದಿದ್ದರು ಸರಳ ಪ್ರಶ್ನೆಗಳೇ ಆದ್ದರಿಂದ ವಿದ್ಯಾರ್ಥಿಗಳು ನಿರಾಯಾಸವಾಗಿ ಉತ್ತರಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ

ವಿಜಯ ಕಾಲೇಜು ಪರೀಕ್ಷಾ ಕೇಂದ್ರದ ಪ್ರಾಂಶುಪಾಲರಾದ ಡಾ.ವಿ.ಶ್ರೀನಿವಾಸನ್ ಮಾತನಾಡಿ " ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಬರೆದಿದ್ದಾರೆ. ಅವರು ಬರೆಯುವುದನ್ನು ಗಮನಿಸಿದರೆ ಇಂದು ಅವರಿಗೆ ಪ್ರಶ್ನೆಪತ್ರಿಕೆ ಸುಲಭ ಇದ್ದಹಾಗಿತ್ತು. ಈ ಬಾರಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ. ನಾವು ವಿದ್ಯಾರ್ಥಿಗಳಿಗೆ ಗಡಿಯಾರ ಕಟ್ಟಿಕೊಂಡು ಕೂಡ ಬರೆಯಲು ಅನುಮತಿ ನೀಡಿಲ್ಲ, ಇಂದಿನ ಪರೀಕ್ಷೆ ಏನೋ ಸುಲಭವಾಗಿದೆ ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ರಾಯಚೂರಿನ ಪರೀಕ್ಷಾ ಅಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂತಹ ಕೃತ್ಯಗಳು ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರನ್ನು ತಂದು ಕೊಡುವುದಲ್ಲದೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸುತ್ತವೆ ಎಂದು ನುಡಿದರು. ನಾಳೆ ಭೌತಶಾಸ್ತ್ರದ ಪರೀಕ್ಷೆ ಇದ್ದು ವಿಜ್ಞಾನ ವಿದ್ಯಾರ್ಥಿಗಳು ನಾಳೆ ಸ್ವಲ್ಪ ಹೆಚ್ಚಿನ ತಯಾರಿ ಮಾಡಿಕೊಂಡು ಬರಬೇಕಾಗುತ್ತೆ " ಎಂದು ಹೇಳಿದರು.

ವಿಜಯ ಕಾಲೇಜಿನ ಪರೀಕ್ಷಾ ಕೇಂದ್ರದ ವಿಶೇಷ ಸ್ಕ್ವಾಡ್ ರಮೇಶ್ ಕೂಡ ಪ್ರಾಂಶುಪಾಲರ ಮಾತುಗಳಂತೆ ನಾಳಿನ ಪರೀಕ್ಷೆ ವಿದ್ಯಾರ್ಥಿಗಳಿಗೆ ಸವಾಲಿನ ಪ್ರಶ್ನೆಪತ್ರಿಕೆಯಾದರು ಅಚ್ಚರಿಯಿಲ್ಲ ಎಂಬ ಪ್ರತಿಕ್ರಿಯೆ ನೀಡಿದರು. ಇಂದಿನ ಪರೀಕ್ಷೆ ಬಗ್ಗೆ ಮಾತನಾಡಿದ ಅವರು ಎಲ್ಲಾ ಕೊಠಡಿಗಳಲ್ಲು ಸಿಸಿಟಿವಿ ಅಳವಡಿಸಿರುವುದರಿಂದ ವಿದ್ಯಾರ್ಥಿಗಳು ಯಾವುದೇ ಅಕ್ರಮಕ್ಕೆ ಪ್ರಯತ್ನಿಸಿಲ್ಲ ಎಂಬ ಮಾಹಿತಿ ನೀಡಿದರು.

ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಭಾಗ-ಎ

ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.

ಭಾಗ-ಬಿ
20 ಅಂಕಗಳ ಈ ಭಾಗವು ಒಟ್ಟು ಹನ್ನೆರಡು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಹತ್ತು ಪ್ರಶ್ನೆಗಳಿಗೆ ನಾಲಕ್ಕು ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.

ಭಾಗ-ಸಿ
40 ಅಂಕಗಳ ಸಿ ಭಾಗವು ಹನ್ನೆರೆಡು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಎಂಟು ಪ್ರಶ್ನೆಗಳಿಗೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಐದು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.

ಭಾಗ-ಡಿ
ಇಲ್ಲಿ ನಾಲ್ಕು ಪ್ರಶ್ನೆಗಳಿದ್ದು ವಿದ್ಯಾರ್ಥಿಯು ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿಯೊಂದಕ್ಕೂ 40 ವಾಕ್ಯಗಳಲ್ಲಿ ಉತ್ತರಿಸಬೇಕಾಗಿದ್ದು ಪ್ರತಿ ಪ್ರಶ್ನೆಯ ಉತ್ತರಕ್ಕೆ ಹತ್ತು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಭಾಗ-ಇ
ಇ ವಿಭಾಗವು ಸಾಮಾನ್ಯ ವಿದ್ಯಾರ್ಥಿಗಳಿಗೆ ಮತ್ತು ದೃಷ್ಟಿ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಹೊಂದಿದೆ. ಮೂರು ಪ್ರಶ್ನೆಗಳನ್ನು ಹೊಂದಿದ್ದು ವಿದ್ಯಾರ್ಥಿಗಳು ಯಾವುದಾದರು ಎರಡು ಕಾರ್ಯಭಾರ ಮತ್ತು ನಿಯೋಜನೆ ಆಧರಿತ ಪ್ರಶ್ನೆಗಳಿಗೆ ಉತ್ತರಿಸಬೇಕು.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

English summary
Karnataka II PUC Economics exam turned out to be a surprise as the students got simple questions but had prepared for the tougher questions with so much strain

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia