ಎಸ್ ಎಸ್ ಎಲ್ ಸಿ ಪರೀಕ್ಷೆ: ಇಂಗ್ಲಿಷ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ಇಂದು ದ್ವಿತೀಯ ಭಾಷೆ ಪರೀಕ್ಷೆಗಳು ನಡೆದಿದ್ದು ವಿದ್ಯಾರ್ಥಿಗಳು ನಿರಾಯಸವಾಗಿ ಪರೀಕ್ಷೆ ಬರೆದಿದ್ದಾರೆ. ಜಯನಗರದ ವಿಜಯ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ 350 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರಿಂದಲು ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದಿದೆ.

ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸುಲಭದ ಪತ್ರಿಕೆಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಖುಷಿಯಿಂದ ಪರೀಕ್ಷೆ ಬರೆದಿದ್ದಾರೆ.

ನೇರ ಪ್ರಶ್ನೆಗಳಿದ್ದ ಇಂಗ್ಲಿಷ್ ಪತ್ರಿಕೆಗೆ ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸಿದ್ದಾರೆ. ನಿಗದಿತ ಸಮಯಕ್ಕೂ ಮುಂಚಿತವಾಗಿ ಉತ್ತರಗಳನ್ನು ಬರೆದಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.

ಇಂಗ್ಲಿಷ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿಜಯ ಶಾಲೆಯ ವಿದ್ಯಾರ್ಥಿನಿ ಪ್ರಿಯಾ ಮಾತನಾಡಿ "ಇಂಗ್ಲಿಷ್ ಪರೀಕ್ಷೆಯು ಸುಲಭವಾಗಿದ್ದು, ಹೆಚ್ಚಿನ ಅಂಕಗಳನ್ನು ನಿರೀಕ್ಷಿಸಬಹುದಾಗಿದೆ. ಎಲ್ಲಾ ಪ್ರಶ್ನೆಗಳು ಸಹ ಸರಳವಾಗಿದ್ದು ಯಾವುದೇ ವಿಭಾಗದಲ್ಲೂ ತೊಂದರೆಯಾಗಲಿಲ್ಲ" ಎಂದು ಹೇಳಿದರು.

ಇಂಗ್ಲಿಷ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

80 ಅಂಕಗಳ ಇಂಗ್ಲಿಷ್ ಪತ್ರಿಕೆಯು ಒಟ್ಟು 45 ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರಶ್ನೆಪತ್ರಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಉತ್ತರಿಸಲು ಮೂರು ಗಂಟೆಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ.

ಎ-ವಿಭಾಗ

ಪ್ರಶ್ನೆಪತ್ರಿಕೆಯ ಮೊದಲ ವಿಭಾಗದಲ್ಲಿ 30 ಪ್ರಶ್ನೆಗಳಿದ್ದು ಗದ್ಯ ಮತ್ತು ಪದ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿದೆ. ವಿದ್ಯಾರ್ಥಿಯು ಈ ವಿಭಾಗದಲ್ಲಿ ಒಟ್ಟ 48 ಅಂಕಗಳನ್ನು ಗಳಿಸಬಹುದಾಗಿದೆ.

ಬಿ-ವಿಭಾಗ

ಎರಡನೇ ವಿಭಾಗದಲ್ಲಿ ವಿದ್ಯಾರ್ಥಿಯ ಬರವಣಿಗೆ ಸಾಮರ್ಥ್ಯವನ್ನು ಮತ್ತು ಗದ್ಯವನ್ನು ಅರ್ಥೈಸಿಕೊಳ್ಳುವ ಪ್ರಶ್ನೆಗಳನ್ನು ಕೇಳಲಾಗಿದೆ. ಈ ವಿಭಾಗವು 16 ಅಂಕಗಳದ್ದಾಗಿರುತ್ತದೆ.

ಸಿ-ವಿಭಾಗ

ಪ್ರಶ್ನೆಪತ್ರಿಕೆಯ ಕೊನೆಯ ವಿಭಾಗವು ವ್ಯಾಕರಣಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಂದ ಕೂಡಿದೆ. ಇಲ್ಲಿ ಸೂಚನೆಗೆ ತಕ್ಕಂತೆ ಕೇಳಿರುವ ಪ್ರಶ್ನೆಗಳಿಗೆ ವಿದ್ಯಾರ್ಥಿಯು ಉತ್ತರಿಸಬೇಕಾಗಿದ್ದು, ಒಟ್ಟು ಹದಿನಾರು ಅಂಕಗಳನ್ನು ನಿಗದಿಪಡಿಸಲಾಗಿದೆ.

ಇದನ್ನು ಗಮನಿಸಿ: ಗಣಿತ ಪ್ರಶ್ನೆಪತ್ರಿಕೆ ವಿಶ್ಲೇಷಣೆ, ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ

English summary
English language paper went well as it was very easy and straight forward questions were asked and the students were able to finish the paper within the allotted time.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia