ಎಸ್ ಎಸ್ ಎಲ್ ಸಿ ಪರೀಕ್ಷೆ: ಗಣಿತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ಪ್ರತಿ ಬಾರಿ ಗಣಿತದ ಪರೀಕ್ಷೆ ಎಂದರೆ ಅದು ಕಬ್ಬಿಣದ ಕಡಲೆ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ ಆ ಮಾತು ಸುಳ್ಳಾಗಿದೆ.

ಈ ಸಾಲಿನ ಎಸ್ ಎಸ್ ಎಲ್ ಸಿ ಯ ಗಣಿತ ಪರೀಕ್ಷೆಯನ್ನು ವಿದ್ಯಾರ್ಥಿಗಳು ನಿರಾಯಾಸವಾಗಿ ಬರೆದಿದ್ದು ಗಣಿತ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೂರನೇ ದಿನವಾದ ಇಂದು ಗಣಿತದ ಪರೀಕ್ಷೆ ನಡೆದಿದೆ. ಜಯನಗರದ ವಿಜಯ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಸುಲಭವಿತ್ತು ಎಂದು ಹೇಳಿದ್ದಾರೆ.

ಗಣಿತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

"ಇಂದಿನ ಪರೀಕ್ಷೆ ಸುಲಭವಾಗಿದ್ದು, ಇದರಿಂದ ನಮಗೆ ಖುಷಿಯಾಗಿದೆ. ಆರಂಭದಲ್ಲಿ ಕೆಲ ಪ್ರಶ್ನೆಗಳು ಕಾಡಿತಾದರು ಎಲ್ಲಾ ವಿಭಾಗಗಳಲ್ಲು ಉತ್ತಮ ಅಂಕಗಳನ್ನು ಗಳಿಸುವ ವಿಶ್ವಾಸವಿದೆ." ಎನ್ನುವುದು ವಿದ್ಯಾರ್ಥಿ ಸಯ್ಯದ್ ಮಾತು.

ಮತ್ತೋರ್ವ ವಿದ್ಯಾರ್ಥಿ ಮಾತನಾಡಿ "ಪ್ರಶ್ನೆಪತ್ರಿಕೆ ನಮ್ಮ ನಿರೀಕ್ಷೆಗಿಂತ ಸುಲಭವಾಗಿತ್ತು, ಗಣಿತದ ಪರೀಕ್ಷೆ ಬಗ್ಗೆ ಹಲವು ಸ್ನೇಹಿತರು ಹೆದರಿಸಿದ್ದರು, ಆದರೆ ಇಂದಿನ ಪತ್ರಿಕೆ ನೋಡಿದ ಮೇಲೆ ನಮಗೆ ತುಂಬಾ ಸಂತೋಷವಾಗಿದೆ. ಟ್ರಿಗ್ನೋಮೆಟ್ರಿ ಮೇಲೆ ಕೇಳಲಾದ ಪ್ರಶ್ನೆಗಳು ಸ್ವಲ್ಪ ಗೊಂದಲ ಉಂಟು ಮಾಡಿದವು, ಉಳಿದಂತೆ ಪತ್ರಿಕೆ ತುಂಬ ಸರಳವಾಗಿತ್ತು." ಎಂದು ಹೇಳಿದರು.

ಗಣಿತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

80 ಅಂಕಗಳ ಗಣಿತ ಪ್ರಶ್ನೆಪತ್ರಿಕೆಯು 40 ಪ್ರಶ್ನೆಗಳನ್ನು ಹೊಂದಿದ್ದು ಉತ್ತರಿಸಲು ಮೂರು ಗಂಟೆಯ ಕಾಲಾವಕಾಶ ನೀಡಲಾಗಿರುತ್ತದೆ.

ಮೊದಲ ವಿಭಾಗವು ಬಹು ಆಯ್ಕೆಯ ಪ್ರಶ್ನೆಗಳಿಂದ ಕೂಡಿದ್ದು ವಿದ್ಯಾರ್ಥಿಯು ಸರಿಯಾದ ಉತ್ತರವನ್ನು ಆಯ್ಕೆ ಮಾಡಬೇಕು. ಮೊದಲ ವಿಭಾಗದಲ್ಲಿ ಒಟ್ಟು ಎಂಟು ಪ್ರಶ್ನೆಗಳನ್ನು ಕೇಳಿದ್ದು ಪ್ರತಿ ಪ್ರಶ್ನೆಯು ಉತ್ತರಕ್ಕೆ ಒಂದು ಅಂಕವನ್ನು ನಿಗದಿಪಡಿಸಲಾಗಿರುತ್ತದೆ.

ಎರಡನೇ ವಿಭಾಗವು ಒಂದು ಅಂಕದ ಪ್ರಶ್ನೆಗಳನ್ನು ಹೊಂದಿದ್ದು ಒಟ್ಟು ಆರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಇಲ್ಲಿ ಯಾವುದೇ ಆಯ್ಕೆಗೆ ಅವಕಾಶವಿರುವುದಿಲ್ಲ.

ಮೂರನೇ ವಿಭಾಗವು ಎರಡು ಅಂಕಗಳ ಪ್ರಶ್ನೆಗಳನ್ನು ಹೊಂದಿರುತ್ತದೆ. ಈ ವಿಭಾಗದಲ್ಲಿ ಹದಿನಾರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಈ ವಿಭಾಗದಿಂದ ಒಟ್ಟು 32 ಅಂಕಗಳನ್ನು ಪಡೆಯಬಹುದಾಗಿದೆ.

ನಾಲ್ಕನೇ ವಿಭಾಗದಲ್ಲಿ ಮೂರು ಅಂಕಗಳ ಆರು ಪ್ರಶ್ನೆಗಳನ್ನು ಕೇಳಲಾಗಿದ್ದು, ಇದು ಒಟ್ಟು ಹದಿನೆಂಟು ಅಂಕಗಳನ್ನು ಒಳಗೊಂಡಿರುತ್ತದೆ.

ಐದನೇ ಹಾಗೂ ಕೊನೆಯ ವಿಭಾಗವು ನಾಲ್ಕು ಅಂಕದ ನಾಲ್ಕು ಪ್ರಶ್ನೆಗಳನ್ನು ಒಳಗೊಂಡಿದ್ದು ಒಟ್ಟು ಹದಿನಾರು ಅಂಕಗಳನ್ನು ಪಡೆಯಬಹುದಾಗಿದೆ.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ

English summary
On the third day of sslc examination students answered mathematics with easy

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia