ವೈದ್ಯಕೀಯ ಸೀಟು ಹಂಚಿಕೆ ಫಲಿತಾಂಶ ದಿನಾಂಕ ಮುಂದೂಡಿದ ಕೆಇಎ

Posted By:

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಬೇಕಿದ್ದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಕೌನ್ಸಲಿಂಗ್ ನಲ್ಲಿ ಸಾಗರೋತ್ತರ ಭಾರತೀಯ ಪ್ರಜೆಗಳನ್ನು (ಒಸಿಐ) ಅನಿವಾಸಿ ಭಾರತೀಯ ಪ್ರಜೆಗಳಾಗಿ ಪರಿಗಣಿಸಬಹುದು. ಆದರೆ ಅವರನ್ನು ಸರ್ಕಾರಿ ಕೋಟಾದಡಿ ಸೀಟುಗಳಿಗೆ ಪರಿಗಣಿಸಬಾರದು ಎಂದು ಹೈಕೋರ್ಟ್ ಬುಧವಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವೈದ್ಯಕೀಯ ಸೀಟು ಹಂಚಿಕೆ ಫಲಿತಾಂಶ ದಿನಾಂಕ ಮುಂದಕ್ಕೆ

ಈ ಆದೇಶದಂತೆ ಒಸಿಐ ಅಭ್ಯರ್ಥಿಗಳಿಗೂ ಜು.28.ರ ಸಂಜೆ 7 ಗಂಟೆವರೆಗೂ ಕೌನ್ಸೆಲಿಂಗ್ ನಲ್ಲಿ ಇಚ್ಛೆಪಟ್ಟ ಕೋರ್ಸ್ ಕಾಲೇಜು ಆಯ್ಕೆ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.

ಹೀಗಾಗಿ ಜು.26 ರ ಸಂಜೆ 4ಕ್ಕೆ ಪ್ರಕಟಿಸಬೇಕಿದ್ದ ಮೊದಲ ಸುತ್ತಿನ ವೈದ್ಯ, ದಂತ ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಫಲಿತಾಂಶ ಜು 29 ರ ಬೆಳಗ್ಗೆ 10 ಕ್ಕೆ ಪ್ರಕಟವಾಗಲಿದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಎಂಜಿನಿಯರಿಂಗ್ ಕೌನ್ಸಲಿಂಗ್

ನಾಳೆಯಿಂದ ದ್ವಿತಿಇಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸ್ ಆದವರ ದಾಖಲೆ ಪರಿಶೀಲನೆ ನಡೆಯಲಿದ್ದು, ಆಗಸ್ಟ್ 01 ರಂದು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪ್ರಾಧಿಕಾರವು ತಿಳಿಸಿದೆ.

English summary
Karnataka examination authority has postponed the result of medical and dental seats as per the decision of High court of Karnataka.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia