ಕುವೆಂಪು ದೂರ ಶಿಕ್ಷಣ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟ

Posted By:

ಕುವೆಂಪು ದೂರ ಶಿಕ್ಷಣ ವಿಶ್ವವಿದ್ಯಾಲಯದ ವಿವಿಧ ಪದವಿ ಮತ್ತು ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೊಮಾ ಪದವಿ ಪರೀಕ್ಷೆಗಳ ಫಲಿತಾಂಶಗಳನ್ನು ವಿವಿಯ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಸೆಮಿಸ್ಟರ್ ಸ್ಕೀಮ್ ಮತ್ತು ಆ್ಯನುಯಲ್ ಸ್ಕೀಮ್ ಎರಡು ಪರೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಕೆಳಕಂಡ ವಿಷಯಗಳ ಫಲಿತಾಂಶಗಳು ಪ್ರಕಟಗೊಂಡಿವೆ

 • ಎಂ.ಎಸ್.ಕೌನ್ಸೆಲಿಂಗ್ ಅಂಡ್ ಸೈಕೋಥೆರಾಪಿ (ಪ್ರಥಮ ವರ್ಷ, ದ್ವಿತೀಯ ವರ್ಷ)
 • ಎಂ.ಎ ಸೈಕಾಲಜಿ ಇನ್ ಚೈಲ್ಡ್ ಮೆಂಟಲ್ ಹೆಲ್ತ್ (ಪ್ರಥಮ ವರ್ಷ, ದ್ವಿತೀಯ ವರ್ಷ)
 • ಎಂ.ಎ ಸೋಷಿಯಾಲಜಿ (ದ್ವಿತೀಯ ವರ್ಷ, ಆ್ಯನುಯಲ್ ಸ್ಕೀಮ್)
 • ಬಿ.ಎ (ಪ್ರಥಮ, ದ್ವಿತೀಯ, ಆ್ಯನುಯಲ್ ಸ್ಕೀಮ್)
 • ಎಂ.ಎ ಹಿಸ್ಟರಿ ಅಂಡ್ ಆರ್ಕಿಯಾಲಜಿ (ದ್ವಿತೀಯ ವರ್ಷ, ಆ್ಯನುಯಲ್ ಸ್ಕೀಮ್)
 • ಪಿಜಿ ಡಿಪ್ಲೊಮಾ ಪ್ರೊಫೆಷನಲ್ ಕೌನ್ಸಿಲಿಂಗ್ ಅಂಡ್ ಸೈಕೋಥೆರಾಪಿ (ದ್ವಿತೀಯ ವರ್ಷ)
 • ಪಿಜಿ ಡಿಪ್ಲೊಮಾ ಗೈಡೆನ್ಸ್ ಅಂಡ್ ಕೌನ್ಸಲಿಂಗ್ (ದ್ವಿತೀಯ ವರ್ಷ)
 • ಪಿಜಿ ಡಿಪ್ಲೊಮಾ ಇನ್ ಟ್ರಾನ್ಸ್ಲೇಷನ್ ಸ್ಟಡೀಸ್ (ದ್ವಿತೀಯ ವರ್ಷ)

ಇದರ ಜೊತೆಗೆ ವಿಜ್ಞಾನ, ಕಲಾ ಮತ್ತು ವಾಣಿಜ್ಯದ ವಿಷಯಗಳ ಪದವಿ ಪರೀಕ್ಷೆಗಳ ಫಲಿತಾಂಶವು ಪ್ರಕಟವಾಗಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಫಲಿತಾಂಶ ಪ್ರಕಟ

ಫಲಿತಾಂಶ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

 • ಕುವೆಂಪು ವಿವಿಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
 • ದೂರ ಶಿಕ್ಷಣ ಆಯ್ಕೆ ಮಾಡಿಕೊಳ್ಳಿ
 • ದೂರ ಶಿಕ್ಷಣ ಪೇಜ್ ನಲ್ಲಿ ರಿಸಲ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ
 • ರಿಸಲ್ಟ್ ಪುಟ ತೆರೆದುಕೊಳ್ಳುವುದು, ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಪರೀಕ್ಷಾ ಸ್ಕೀಮ್ ನಮೂದಿಸಿ
 • ರಿಸಲ್ಟ್ ಶೀಟ್ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಶಿವಮೊಗ್ಗದ ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಕುವೆಂಪು ವಿವಿಯು 2003 ರಿಂದ ದೂರ ಶಿಕ್ಷಣ ಸೇವೆಯನ್ನು ನೀಡುತ್ತಾ ಬಂದಿದೆ. ಪದವಿ, ಸ್ನಾತಕ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳಲ್ಲಿ ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ.

ಕುವೆಂಪುರವರ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದ್ದು, ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ www.kuvempu.ac.in ಗಮನಿಸಿ

ಇದನ್ನು ಗಮನಿಸಿ: ಕೆ-ಸೆಟ್ ಪರೀಕ್ಷೆ ಫಲಿತಾಂಶ ಪ್ರಕಟ

English summary
kuvempu university distance education results are out. candidates can download at official website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia