ಸರ್ಕಾರಿ ಕಾಲೇಜುಗಳ ಎಂಬಿಎ, ಎಂಸಿಎ ಶುಲ್ಕ ಪರಿಷ್ಕರಣೆ

ಎಂಬಿಎ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರಕಾರವು ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ನಿಗದಿಪಡಿಸಿರುವ ವಾರ್ಷಿಕ 20 ಸಾವಿರ ರೂ.ಶುಲ್ಕವನ್ನೇ 2017-18 ನೇ ಸಾಲಿಗೂ ಮುಂದುವರೆಸಲಾಗಿದೆ.

ಸರಕಾರಿ ಕಾಲೇಜುಗಳಲ್ಲಿನ ಎಂಬಿಎ, ಎಂಸಿಎ ಸೇರಿದಂತೆ ಹಲವು ಕೋರ್ಸುಗಳ ಶುಲ್ಕವನ್ನು ಉನ್ನತ ಶಿಕ್ಷಣ ಇಲಾಖೆ ಪರಿಷ್ಕರಿಸಿದೆ.

2017-18 ನೇ ಸಾಲಿನಲ್ಲಿ ಕೆಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಿರುವ ಎಂಬಿಎ ಹಾಗೂ ಎಂಸಿಎ ಸೇರಿದಂತೆ ನಾನಾ ಸ್ನಾತಕೋತ್ತರ ಕೋರ್ಸುಗಳ ಶುಲ್ಕ ಪರಿಷ್ಕರಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಎಂಬಿಎ, ಎಂಸಿಎ ಶುಲ್ಕ ಪರಿಷ್ಕರಣೆ

ಎಂಬಿಎ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವಿದ್ಯಾರ್ಥಿಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸರಕಾರವು ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ನಿಗದಿಪಡಿಸಿರುವ ವಾರ್ಷಿಕ 20 ಸಾವಿರ ರೂ.ಶುಲ್ಕವನ್ನೇ 2017-18 ನೇ ಸಾಲಿಗೂ ಮುಂದುವರೆಸಲಾಗಿದೆ.

ಎಂಬಿಎ ಹೊರತುಪಡಿಸಿ ಇತರೆ ಸ್ನಾತಕೋತ್ತರ ಕೋರ್ಸುಗಳ ಶುಲ್ಕ ವಿವರ
ಅರ್ಜಿ ಶುಲ್ಕ30
ಪ್ರವೇಶ ಶುಲ್ಕ100
ಪಾಠ ಶುಲ್ಕ1000
ಪ್ರಯೋಗಾಲಯ ಶುಲ್ಕ300
ವೈದ್ಯಕೀಯ ತಪಾಸಣಾ ಶುಲ್ಕ30
ವರ್ಗಾವಣೆ ಶುಲ್ಕ50
ವಿದ್ಯಾಭ್ಯಾಸ ಪ್ರಮಾಣ ಪತ್ರ ಶುಲ್ಕ20
ವಾಚನಾಲಯ ಶುಲ್ಕ100
ಕ್ರೀಡಾ ಶುಲ್ಕ100
ಗ್ರಂಥಾಲಯ ಶುಲ್ಕ (ಬೈಂಡಿಂಗ್ ಸೇರಿ)100
ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ1000

ಸಾರ್ವಜನಿಕ ಶಿಕ್ಷಣ ಇಲಾಖೆಯು ನಿಗದಿ ಪಡಿಸಿದಂತೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಅಧ್ಯಾಪಕರ ಸಹಾಯ ನಿಧಿ ಪಡೆಯಲಾಗುತ್ತದೆ. ಆಯಾ ವಿವಿಗಳು ನಿಗಿದಪಡಿಸಿದಂತೆ ಪ್ರವೇಶ ಶುಲ್ಕ, ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಇನ್ನಿತರೆ ವಿವಿ ಶುಲ್ಕ ಪಡೆಯುವಂತೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎನ್ ವೀರಬ್ರಹ್ಮಾಚಾರಿ ಆದೇಶದಲ್ಲಿ ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Department of higher education has published the revised fee structure of MBA , MCA and other post graduation courses of all govt colleges.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X