ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನೀಟ್-2017 ಪ್ರವೇಶ ಪ್ರಕ್ರಿಯೆ ಪ್ರಾರಂಭ

Posted By:

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೇ 7 ರಂದು ನಡೆಯಲಿವೆ. ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ )ಯು ಈ ಪರೀಕ್ಷೆಯನ್ನು ಆಯೋಜಿಸಲಿದ್ದು ಈ ಬಾರಿ ದೇಶಾದ್ಯಂತ ಸುಮಾರು 10 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಕೂರುವ ಸಾಧ್ಯತೆ ಇದೆ.

ಮೇ ತಿಂಗಳಿನಲ್ಲಿ ನಡೆಯುವ ಪರೀಕ್ಷೆ

ದೇಶದ 80 ನಗರಗಳ 1500 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು ಮಾರ್ಚ್-1ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಮೇ 7 ಕ್ಕೆ 25 ವರ್ಷ ಮೀರದ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿದ್ದು, ಮೀಸಲು ಸೌಲಭ್ಯ ಪಡೆದ ವಿದ್ಯಾರ್ಥಿಗಳಿಗೆ ಐದು ವರ್ಷ ವಿನಾಯಿತಿ ನೀಡಲಾಗಿದೆ.

'ನೀಟ್ 'ಎಂದರೆ

ನೀಟ್ ಎಂದರೆ ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರನ್ಸ್ ಟೆಸ್ಟ್ (National Eligibility and Entrance Test). ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ )ಯು ಈ ಪರೀಕ್ಷೆಯನ್ನು ಆಯೋಜಿಸಲಿದ್ದು, ಯಾವುದೇ ಸರ್ಕಾರದ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಯಾವುದೇ ವೈದ್ಯಕೀಯ ಪದವಿ ಕೋರ್ಸ್ (ಎಂಬಿಬಿಎಸ್ / ದಂತ ಕೋರ್ಸ್ (BDS) ಅಥವಾ ಸ್ನಾತಕೋತ್ತರ ಕೋರ್ಸ್ (ಎಮ್ಡಿ / ಎಂಎಸ್) ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. 85% ಸೀಟುಗಳು ರಾಜ್ಯ ಕೋಟಾದಲ್ಲಿ ಹಾಗು 15 % ಸೀಟುಗಳು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ(NEET) ಮೂಲಕ ಭರ್ತಿ ಮಾಡಲಾಗುವುದು

ನೀಟ್ ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಅರ್ಹತೆ

1. ನೀಟ್ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ಭೌತಶಾಸ್ತ್ರ(Physics), ರಸಾಯನಶಾಸ್ತ್ರ(Chemistry) ಮತ್ತು ಇಂಗ್ಲೀಷ್(English), ಜೀವಶಾಸ್ತ್ರವನ್ನು(Biology) / ಜೈವಿಕ ತಂತ್ರಜ್ಞಾನ(Biotechnology) ವಿಷಯಗಳಲ್ಲಿ 10 + 2 ಅಥವಾ ಅದರ ಸಮಾನ ಪರೀಕ್ಷೆ ಪಾಸು ಮಾಡಿರಬೇಕು. ಇಲ್ಲವಾದಲ್ಲಿ B.Sc ಪರೀಕ್ಷೆಯನ್ನು ಭಾರತೀಯ ವಿಶ್ವವಿದ್ಯಾಲಯದ ಮೂಲಕ ರಸಾಯನ ಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಷಯಗಳಲ್ಲಿ ಪಾಸು ಮಾಡಿರಬೇಕು.

2. NEET ಪರೀಕ್ಷೆ ತೆಗೆದುಕೊಳ್ಳಲು ಕನಿಷ್ಠ ಶೇಕಡಾವಾರು - ಸಾಮಾನ್ಯ ವರ್ಗ(GM) ಕನಿಷ್ಠ - 50% ಹಾಗು ಎಸ್ಸಿ / ಎಸ್ಟಿ / ಒಬಿಸಿಗೆ(SC /ST /OBC) - 40% , ಸಾಮಾನ್ಯ ದೈಹಿಕ ಅಂಗವಿಕಲತೆ(GM PH) ಇರುವವರಿಗೆ 45% ಮತ್ತು ಎಸ್ಸಿ / ಎಸ್ಟಿ / ಒಬಿಸಿ(SC /ST /OBC PH) ದೈಹಿಕ ಅಂಗವಿಕಲತೆ ಇರುವವರಿಗೆ 40% ಇರಬೇಕು.

3. NEET 2017 ಪರೀಕ್ಷೆ -ಗಣಿತ ವಿಷಯದಲ್ಲಿ ಪಡೆದ ಅಂಕಗಳನ್ನು MBBS / BDS ಕೋರ್ಸುಗಳಿಗೆ ಪರಿಗಣಿಸಲಾಗುವುದಿಲ್ಲ.

4. 2017 ರಲ್ಲಿ ಪರೀಕ್ಷೆಗೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮಾತ್ರ ಅರ್ಹರು. ಕಳೆದ ವರ್ಷ ಪರೀಕ್ಷೆ ತೆಗೆದುಕೊಂಡವರನ್ನು ಪರಿಗಣಿಸಲಾಗುವುದಿಲ್ಲ.

5. ಅಭ್ಯರ್ಥಿಯು ಡಿಸೆಂಬರ್ 31, 2016 ಕ್ಕೆ 17 ವರ್ಷಕ್ಕೆ ಪೂರ್ಣಗೊಳಿಸಿರಬೇಕು.

6. NEET 2017 ಪರೀಕ್ಷೆ -ಅಭ್ಯರ್ಥಿ ಭಾರತೀಯ ನಾಗರಿಕನಾಗಿರಬೇಕು.

7. ಗರಿಷ್ಠ ವಯೋಮಿತಿ 25 ವರ್ಷ (ಎಸ್ಸಿ / ಎಸ್ಟಿ / ಒಬಿಸಿ 5 ವರ್ಷಗಳ ಸಡಿಲ ಹಾಗು ಪ್ರವೇಶ ಪಡೆಯುವ ವರ್ಷದ ಡಿಸೆಂಬರ್ 31 ರ ಒಳಗೆ ಅನ್ವಯ )

ಕನ್ನಡದಲ್ಲಿ ನೀಟ್ ಪರೀಕ್ಷೆ

ದೇಶಾದ್ಯಂತ 10 ವಿವಿಧ ಭಾಷೆಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದ್ದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ.

WHAT OTHERS ARE READING
English summary
National Eligibility Entrance Test (NEET) is the national level examination conducted by the Central Board of Secondary Education (CBSE)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia