ಆಯುಷ್ ಕೋರ್ಸಿಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಕಡ್ಡಾಯ

ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಅಧ್ಯಯನಕ್ಕೆ ಸೀಟು ಪಡೆಯಬೇಕಾದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆಯುವುದು ಇನ್ನುಮುಂದೆ ಕಡ್ಡಾಯ.

ಸಿಬಿಎಸ್ಸಿ 2017 ನೇ ಸಾಲಿನ ಆಯುಷ್ ಕೋರ್ಸ್ ಗೆ ನೀಟ್ ಕಡ್ಡಾಯ ಎನ್ನುವುದನ್ನು ನೀಟ್ ಅಧಿಸೂಚನೆಯಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲ ಆದರೆ ಕೇಂದ್ರ ಭಾರತೀಯ ವೈದ್ಯ ಪದ್ಧತಿ ಪರಿಷತ್ (ಸಿಸಿಐಎಮ್ ) ರಾಜ್ಯದ ಆಯುಷ್ ಇಲಾಖೆಯೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದೆ.

ಆಯುಷ್ ಕೋರ್ಸಿಗೂ ನೀಟ್ ಕಡ್ಡಾಯ

ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2017 ನೇ ಸಾಲಿನ ಸಿಇಟಿಗೆ ಅರ್ಜಿ ಆಹ್ವಾನಿಸಿದ್ದು, ಮೇ 02 ರಂದು ಪರೀಕ್ಷೆ ನಡೆಸಲಿದ್ದು ಆಯುಷ್ ಕೋರ್ಸ್ ಗೆ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಲು ನಿರ್ಧರಿಸಿದೆ.

 

ಮ್ಯಾನೇಜ್ಮೆಂಟ್ -ಎನ್ ಆರ್ ಐ 

ಮೆರಿಟ್ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್ ಮೂಲಕವೇ ಆಯುಷ್ ಸೀಟು ಭರ್ತಿ ಮಾಡಲಾಗುವುದು. ಇದರಿಂದ ಖಾಸಗಿಯವರು ನಡೆಸುವ ಪರೀಕ್ಷೆ ರದ್ದುಗೊಳ್ಳಲಿದೆ. ಸರ್ಕಾರ ಈ ನಿರ್ಧಾರವನ್ನು ಅನುಸರಿಸಬೇಕು. ನೀಟ್ ಬರುವುದರಿಂದ ಮ್ಯಾನೇಜ್ಮೆಂಟ್, ಎನ್ ಆರ್ ಐ ಕೋಟ ಸೀಟು ರದ್ದುಗೊಳ್ಳಲಿವೆ ಎಂದು ಸ್ಪಷ್ಟ ಪಡಿಸಿದೆ.

ಸೀಟು ವಿಳಂಬವಿಲ್ಲ

ಆಯುಷ್ ಇಲಾಖೆ ಅಧೀನದಲ್ಲಿ ರಾಜ್ಯದಲ್ಲಿ 68 ಪದವಿ ಕಾಲೇಜುಗಳಿವೆ. ಈ ಪೈಕಿ 6 ಸರ್ಕಾರಿ ಕಾಲೇಜು, 5 ಅನುದಾನಿತ ಹಾಗೂ 57 ಖಾಸಗಿ ಕಾಲೇಜುಗಳಿವೆ. ಕಳೆದ ವರ್ಷದ ಮಾಹಿತಿ ಪ್ರಕಾರ ಸುಮಾರು 3800 ಸೀಟುಗಳಿದ್ದವು ಅದರಲ್ಲಿ 1261 ಸೀಟುಗಳು ಕೆಇಎ ಗೆ ಸೇರಿದ್ದಾಗಿತ್ತು. ಪ್ರತಿ ವರ್ಷ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳ ಭರ್ತಿಗೆ ಎರಡು ಬಾರಿ ಕೌನ್ಸೆಲಿಂಗ್ ನಡೆದ ನಂತರವಷ್ಟೇ ಆಯುಷ್ ಸೀಟುಗಳು ಕೆಇಎ ಸೇರುತಿತ್ತು. ಆಯುಷ್ ಸೇರಬಯಸುವ ವಿದ್ಯಾರ್ಥಿಗಳು ಅನ್ಯ ಕೋರ್ಸುಗಳಿಗೆ ಪ್ರವೇಶ ಪಡೆಯುವುದು ಅನಿವಾರ್ಯವಾಗಿತ್ತು.

ಕನ್ನಡದ್ಲಲಿ ಆಯುಷ್ ?

ನೀಟ್ ಪರೀಕ್ಷೆಯಂತೆಯೇ ಆಯುಷ್ ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ತರಬೇಕೇ ಎನ್ನುವುದು ಇನ್ನು ತಿಳಿದಿಲ್ಲ. ಇದಕ್ಕಾಗಿ ಸಿಬಿಎಸ್ಇ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕಿದೆ.

ಆಯುಷ್ ಅಡಿಯಲ್ಲಿ ಬರುವ ಕೋರ್ಸುಗಳು

ಯೋಗ

ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ.

ಯೂನಾನಿ

ಯೂನಾನಿ ವೈದ್ಯಕೀಯ ಪದ್ಧತಿಯು ಭಾರತದಲ್ಲಿ ಸುದೀರ್ಘವಾದ ಹಾಗೂ ಪರಿಣಾಮಕಾರಿಯಾದ ದಾಖಲೆಯನ್ನು ಹೊಂದಿದೆ.

ಪ್ರಕೃತಿ ಚಿಕಿತ್ಸೆ

ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಅಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇಟ್ಟುಕೊಂಡು, ರಚಿಸುವ ಪದ್ಧತಿಯೇ ಪ್ರಕೃತಿ ಚಿಕಿತ್ಸೆ.

ಆಯುರ್ವೇದ

ಆಯುರ್ವೇದವು ಭಾರತ ಉಪಖಂಡದ ಅತಿ ಪುರಾತನ ವೈದ್ಯಕೀಯ ಪದ್ಧತಿಯಾಗಿದೆ.

ಸಿದ್ಧ

ಸಿದ್ಧ ವೈದ್ಯಕೀಯ ಪದ್ಧತಿಯು ಭಾರತದ ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಗಳಲ್ಲಿ ಒಂದು.

ಹೋಮಿಯೋಪತಿ

ಆಯುರ್ವೇದದಂತೆ ಇದು ಕೂಡ ಒಂದು ವೈದ್ಯಕೀಯ ಪದ್ಧತಿಯಾಗಿದ್ದು, ಸಾಧಾರಣವಾಗಿ ವಿಶ್ವದ ಎಲ್ಲೆಡೆಗಳಲ್ಲೂ ಆಚರಣೆಯಲ್ಲಿದೆ.

ಆಯುಷ್ ಬಗ್ಗೆ ತಿಳಿಯಲು ಈ ಲಿಂಕ್ ನೋಡಿ http://ayush.gov.in/

ಇದನ್ನು ಗಮನಿಸಿ :ಕೆಸಿಇಟಿ ಪರೀಕ್ಷಾ ವಿಧಾನ, ವೇಳಾಪಟ್ಟಿ ಮತ್ತು ಪಠ್ಯಕ್ರಮ

For Quick Alerts
ALLOW NOTIFICATIONS  
For Daily Alerts

    English summary
    National Eligibility Cum Entrance Test (NEET) will now apply to Ayush courses as well.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more