ಸಿಬಿಎಸ್ಇ: ಹನ್ನೆರಡನೇ ತರಗತಿಗೆ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ರದ್ದು

Posted By:

ಮಾಡರೇಷನ್ ಪಾಲಿಸಿ ಮೂಲಕ ನೀಡುತ್ತಿದ್ದ ಗ್ರೇಸ್ ಮಾರ್ಕ್ಸ್ ಗಳಿಗೆ ಸಿಬಿಎಸ್ಇ ಬ್ರೇಕ್ ಹಾಕಿದೆ. ಹೆಚ್ಚಿನ ಕಟ್ ಆಫ್ ಅಂಕಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್  ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿಯಾದ ಅಂಕಗಳನ್ನು ಪರೀಕ್ಷೆಗಳಲ್ಲಿ ನೀಡಬೇಕು ಮತ್ತು ಕಷ್ಟದ ಪರೀಕ್ಷೆ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನೀಡಲಾಗುತ್ತಿದ್ದ ಗ್ರೇಸ್ ಮಾರ್ಕ್ಸ್ ತೆಗೆದುಹಾಕಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು.

ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳಲ್ಲಿ ಭಾರೀ ಏರಿಳಿತವಾಗುವುದರಿಂದ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ತೆಗೆದುಹಾಕಬೇಕೆಂದು ಸಿಬಿಎಸ್ಇ ಕಳೆದ ಡಿಸೆಂಬರ್ ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿತ್ತು.

ಗ್ರೇಸ್ ಮಾರ್ಕ್ಸ್ ರದ್ದು

ಪರೀಕ್ಷೆ ಕಷ್ಟವಿತ್ತು ಎಂದು ಗ್ರೇಸ್ ಅಂಕಗಳನ್ನು ನೀಡಿದರೆ ಚೆನ್ನಾಗಿ ಪರೀಕ್ಷೆ ಬರೆದವರಿಗೆ ಇನ್ನೂ ಹೆಚ್ಚು ಅಂಕ ಸಿಗುತ್ತದೆ. ಪರೀಕ್ಷೆ ಚೆನ್ನಾಗಿ ಬರೆಯದಿದ್ದವರಿಗೆ ಕಡಿಮೆ ಅಂಕ ಬರುತ್ತದೆ. ಕಟ್ ಆಫ್ ಮಾರ್ಕ್ಸ್ ವಿಷಯ ಬಂದಾಗ ಕಡಿಮೆ ಅಂಕ ಸಿಕ್ಕಿದವರೆಗೆ ಮುಂದೆ ಕಾಲೇಜಿನಲ್ಲಿ ಸೀಟು ಸಿಗಲು ತೊಂದರೆಯಾಗುತ್ತದೆ.

ಗ್ರೇಸ್ ಮಾರ್ಕ್ಸ್ ವಿವರ

ಕಠಿಣ ಪ್ರಶ್ನೆಗಳಿದ್ದ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕೆಲವೇ ಅಂಕಗಳಿಂದ ಪಾಸಾಗುವಂತಿದ್ದರೆ ಅಂತಹ ವಿದ್ಯಾರ್ಥಿಗೆ ಸಾಮಾನ್ಯವಾಗಿ ಗರಿಷ್ಠ ಶೇ. 15ರಷ್ಟು ಹೆಚ್ಚುವರಿ ಅಂಕವನ್ನು ಗ್ರೇಸ್ ಅಂಕವನ್ನಾಗಿ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಕಾಲೇಜುಗಳೂ ಅನಿವಾರ್ಯವಾಗಿ ಕಟಾಫ್ ಅಂಕಗಳನ್ನು ನಿಗದಿ ಮಾಡುತ್ತಿದ್ದವು. ಇದರಿಂದ ಸಿಬಿಎಸ್​ಇ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳು 12ನೇ ತರಗತಿ ನಂತರ ಪದವಿ ಕಾಲೇಜಿಗಳ ಪ್ರವೇಶಾತಿ ಸಂಬಂಧ ಗ್ರೇಸ್ ಅಂಕಗಳಿಂದಾಗಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿತ್ತು ಅದಕ್ಕೆಲ್ಲ ಪರಿಹಾರವೆಂಬಂತೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ವಿದ್ಯಾರ್ಥಿಗೆ ಇನ್ನು ಸ್ವಲ್ಪ ಅಂಕ ಸಿಕ್ಕಿದರೆ ತೇರ್ಗಡೆ ಹೊಂದಲು ಸಾಧ್ಯವಾಗುತ್ತದೆ ಎಂದು ಇರುವವರಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದು ಎಂದು ಸಿಬಿಎಸ್ಇ ತಿಳಿಸಿದೆ.

ಸಭೆಯ ಇನ್ನಿತರ ನಿರ್ಧಾರಗಳು

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಸಭೆಯಲ್ಲಿ ಗ್ರೇಸ್ ಮಾರ್ಕ್ಸ್ ಹೊರತು ಪಡಿಸಿ ಮತ್ತಷ್ಟು ವಿಚಾರಗಳ ಬಗ್ಗೆಯು ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಪುಸ್ತಕ ಬೆಲೆ

ಸಿಬಿಎಸ್ಇ ಪುಸ್ತಕ ಬೆಲೆಗೆ ಸಂಬಂಧಪಟ್ಟಂತೆ ಸಾಕಷ್ಟು ದೂರುಗಳು ಬಂದಿದ್ದವು, ಖಾಸಗಿ ಪ್ರಕಾಶಕರ ಸಿಬಿಎಸ್ಇ ಪುಸ್ತಕಗಳಿಗೆ ಅಧಿಕ ಬೆಲೆಯಿದೆ ಎಂದು ಪೋಷಕರಿಂದ ದೂರುಗಳು ಬಂದಿದ್ದು,  ಎನ್ ಸಿಇಆರ್ ಟಿ ಪುಸ್ತಕಗಳನ್ನು ಪರಾಮರ್ಶಿಸಿ ಅದನ್ನು ಕಡ್ಡಾಯ ಮಾಡಲಾಗುವುದು ಎಂದು ಹೇಳಿದ್ದಾರೆ. 

ಏಕರೂಪದ ಪ್ರಶ್ನೆಪತ್ರಿಕೆ

ಕೇಂದ್ರ ಸರ್ಕಾರದ ಶಾಲೆಗಳು ಸೇರಿದಂತೆ ಸಿಬಿಎಸ್​ಇ ಅನುಮೋದಿತ ಶಾಲೆಗಳಿಗೂ ಒಂದೇ ರೀತಿಯ ಪ್ರಶ್ನೆ ಪತ್ರಿಕೆ ನೀಡಲು ಸಹ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದನ್ನು ಗಮನಿಸಿ: ಸಿಬಿಎಸ್ಇ ಬದಲಾದ ಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ

English summary
The CBSE cancelled its policy of granting grace marks to students in examinations for difficult questions. The moderation policy allowed the board to give students 15 per cent extra marks on papers that were deemed difficult.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia