ಉನ್ನತ ಶಿಕ್ಷಣ ಸಮೀಕ್ಷೆ: ರಾಜ್ಯದಲ್ಲಿ ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು!

ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುವವರಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದ್ದರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಯುಜಿಸಿ ಎನ್ಇಟಿ 2017: ಫಲಿತಾಂಶ ಪ್ರಕಟ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆಗೊಂಡಿರುವ 'ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ-2016-17'ರ ವರದಿ ಇಂದ ಇದು ತಿಳಿದು ಬಂದಿದ್ದು, ಉನ್ನತ ಶಿಕ್ಷಣ ಹುಡುಗರಿಗಿಂತಲೂ ಹೆಚ್ಚಿನ ಸಂಖ್ಯೆಯ ಹುಡುಗಿಯರು ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.

ಭಾರತೀಯ ನೌಕಾಪಡೆ: ವಿವಿಧ ಹುದ್ದೆಗಳ ನೇಮಕಾತಿ

ಉನ್ನತ ಶಿಕ್ಷಣ: ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು

2016-17 ರಲ್ಲಿ ದೇಶದಲ್ಲಿ ಒಟ್ಟು ಉನ್ನತ ಶಿಕ್ಷಣಕ್ಕೆ ಸೇರಿದವರ ಸಂಖ್ಯೆ 3.57 ಕೋಟಿ. ಅದರಲ್ಲಿ 1.90 ಕೋಟಿ ಗಂಡು ಮಕ್ಕಳು ಮತ್ತು 1.67 ಕೋಟಿ ಹೆಣ್ಣು ಮಕ್ಕಳು. ರಾಷ್ಟ್ರಿಯ ಮಟ್ಟದಲ್ಲಿ ಉನ್ನತ ಮಟ್ಟದಲ್ಲಿ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳ ಪ್ರಮಾಣ ಶೇ.46.8 ರಷ್ಟಿದೆ.

ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಂಖ್ಯೆ ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿದೆ. 2015-16 ರಲ್ಲಿ ಶೇ.26.1 ರಷ್ಟಿದ್ದು 2016-17 ರಲ್ಲಿ 26.5 ಕ್ಕೆ ಏರಿಕೆಯಾಗಿದೆ.

ಉನ್ನತ ಶಿಕ್ಷಣ: ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು

ದೇಶದಲ್ಲಿ ಒಟ್ಟು 864 ವಿಶ್ವವಿದ್ಯಾಲಯಗಳಿದ್ದು, 40026 ಕಾಲೇಜುಗಳಿವೆ. 11669 ಡಿಪ್ಲೋಮ ಮತ್ತು ಇತರೆ ಪ್ರಮಾಣಪತ್ರ ನೀಡುವ ಸಂಸ್ಥೆಗಳು, 313 ಖಾಸಗಿ ವಿವಿಗಳು, 338 ಗ್ರಾಮೀಣ ಭಾಗದಲ್ಲಿರುವ ವಿವಿಗಳು, 15 ಮಹಿಳೆಯರಿಗಾಗಿ ಮೀಸಲಾಗಿರುವ ವಿವಿಗಳು.

ಇಡೀ ದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಕಾಲೇಜುಗಳಿದ್ದು, 1025 ಕಾಲೇಜುಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ಜೈಪುರ 635 ಕಾಲೇಜುಗಳನ್ನು ಹೊಂದಿದೆ.

ಈ ವರದಿಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಲಿಂಗ ಸಮಾನತೆ ಅನುಪಾತ 100:94ರಷ್ಟಿದೆ. ರಾಜ್ಯದ ಉನ್ನತ ಶಿಕ್ಷಣದಲ್ಲಿ ಲಿಂಗ ಸಮಾನತೆ ಸೂಚ್ಯಂಕ 100:101 ಇದೆ. ಅಂದರೆ, 100 ಗಂಡು ಮಕ್ಕಳು ಉನ್ನತ ಶಿಕ್ಷಣಕ್ಕ ಪ್ರವೇಶ ಪಡೆದರೆ, 101 ಹೆಣ್ಣು ಮಕ್ಕಳು ದಾಖಲಾಗಿದ್ದಾರೆ. ಕಳೆದ ವರ್ಷ ಈ ಸೂಚ್ಯಂಕ 100:99 ಇತ್ತು.

For Quick Alerts
ALLOW NOTIFICATIONS  
For Daily Alerts

    English summary
    The number of girls who want to pursue higher education is increasing day by day. Many girls are getting access to different courses than boys.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more