ಕ್ಯೂಎಸ್ ರ್ಯಾಂಕಿಂಗ್ ಪಟ್ಟಿ: 152 ನೇ ಸ್ಥಾನದಲ್ಲಿ ಬೆಂಗಳೂರಿನ ಐಐಎಸ್‌ಸಿ

ಐಐಎಸ್‌ಸಿ ಬೆಂಗಳೂರು ಹಾಗೂ ಐಐಟಿ ದೆಹಲಿ ಅಲ್ಲದೇ ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಕಾನ್ಪುರ್, ಐಐಟಿ ಖರಗ್ಪುರ, ಐಐಟಿ ರೂರ್ಕಿ ಹಾಗೂ ಐಐಟಿ ಗುವಾಹಟಿ ಟಾಪ್ 500ರಲ್ಲಿ ಸ್ಥಾನ ಪಡೆದಿವೆ.

ಇತ್ತೀಚೆಗೆ ಬಿಡುಗಡೆ ಮಾಡಲಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕ 2017ರ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು , ಐಐಟಿ ಮುಂಬೈ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಸ್ಥಾನ ಪಡೆದಿವೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು 152ನೇ ಸ್ಥಾನ ಪಡೆದರೆ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮುಂಬೈ 179, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ 185ನೇ ಸ್ಥಾನ ಪಡೆದಿದೆ. ದೆಹಲಿ ವಿಶ್ವವಿದ್ಯಾಲಯ 481 ನೇ ಸ್ಥಾನ ಪಡೆದಿದೆ.

ಇದನ್ನು ಗಮನಿಸಿ:ವಿಶ್ವದ ಎಂಟನೇ ಸ್ಥಾನದಲ್ಲಿ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್

ಮೆಸ್ಯಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಂಐಟಿ), ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಹಾರ್ವಾರ್ಡ್ ವಿಶ್ವವಿದ್ಯಾಲಯ, ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ ಹಾಗೂ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ವಿಶ್ವವಿದ್ಯಾಲಯ (ಕಾಲ್ಟೆಕ್) ಮೊದಲ 5 ಸ್ಥಾನಗಳನ್ನು ಪಡೆದಿವೆ.

152 ನೇ ಸ್ಥಾನದಲ್ಲಿ ಬೆಂಗಳೂರಿನ ಐಐಎಸ್‌ಸಿ

ಐಐಎಸ್‌ಸಿ ಬೆಂಗಳೂರು ಹಾಗೂ ಐಐಟಿ ದೆಹಲಿ ಅಲ್ಲದೇ ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಕಾನ್ಪುರ್, ಐಐಟಿ ಖರಗ್ಪುರ, ಐಐಟಿ ರೂರ್ಕಿ ಹಾಗೂ ಐಐಟಿ ಗುವಾಹಟಿ ಟಾಪ್ 500ರಲ್ಲಿ ಸ್ಥಾನ ಪಡೆದಿವೆ.

ಕ್ಯೂಎಸ್ ಜಾಗತಿಕ ರ್‍ಯಾಂಕಿಂಗ್ ವಿಷಯಗಳ ಆಧಾರದಲ್ಲಿ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್ ನೀಡುತ್ತಿದ್ದು, 2017ರ 46 ವಿಷಯಗಳ ಪ್ರತ್ಯೇಕ ವಿಷಯಗಳ ಗಣನೆಗೆ ತೆಗೆದುಕೊಂಡಿದೆ.

ಇದು ವಿದ್ಯಾರ್ಥಿಗಳು ತಮ್ಮ ನಿರೀಕ್ಷಿತ ವಿಷಯಗಳನ್ನು ಹೋಲಿಕೆ ಮಾಡಿ ವಿಷಯಗಳ ವಿಸ್ತರಣೆ ಆಧಾರದಲ್ಲಿ ಆಯ್ದ ಮುಂಚೂಣಿ ಕಾಲೇಜುಗಳನ್ನು ಗುರುತಿಸಲು ಸಹಾಯ ಮಾಡಲಿದೆ.

ಕ್ಯೂಎಸ್ ವಿಶ್ವ ವಿಶ್ವವಿದ್ಯಾನಿಲಯ ರ್ಯಾಂಕಿಂಗ್

ಕ್ಯೂಎಸ್ ವಿಶ್ವ ವಿಶ್ವವಿದ್ಯಾನಿಲಯ ರ್ಯಾಂಕಿಂಗ್ ವಾರ್ಷಿಕ ಪ್ರಕಟಣೆಯಾಗಿದ್ದು, ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್‍ ಗಳನ್ನು ಸೂಚಿಸುತ್ತದೆ. ಇದನ್ನು ಕ್ವೆಕೆರೆಲ್ಲಿ ಸೈಮಂಡ್ಸ್ ಸಂಸ್ಥೆ ಬಿಡುಗಡೆ ಮಾಡುತ್ತದೆ. ಈ ಮೊದಲು ಇದನ್ನು ದ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ಸ್ ಎಂದು ಕರೆಯಲಾಗುತ್ತಿತ್ತು. ಈ ಪಟ್ಟಿ ಬಿಡುಗಡೆ ಮಾಡುವ ಸಂಸ್ಥೆಯು ಟೈಮ್ಸ್ ಹೈಯರ್ ಎಜ್ಯುಕೇಶನ್ ಮ್ಯಾಗಝಿನ್ ಜತೆ ಸೇರಿ, 2004-2009ರ ಅವಧಿಯಲ್ಲಿ, ಈ ಪಟ್ಟಿಯನ್ನು ಜಂಟಿಯಾಗಿ ಬಿಡುಗಡೆ ಮಾಡುತ್ತಿದ್ದವು. ಆ ಬಳಿಕ ಎರಡೂ ಸಂಸ್ಥೆಗಳೂ ಪ್ರತ್ಯೇಕವಾಗಿ ಪಟ್ಟಿ ಬಿಡುಗಡೆ ಮಾಡುತ್ತವೆ.

ಇದನ್ನು ವಿಶ್ವಾದ್ಯಂತ ಹೆಚ್ಚು ಸ್ವೀಕಾರಾರ್ಹ ವಿಶ್ವವಿದ್ಯಾನಿಲಯಗಳ ಪಟ್ಟಿ ಎಂದು ಪರಿಗಣಿಸಲಾಗುತ್ತದೆ. ಇದರ ಜತೆಗೆ ಅಕಾಡೆಮಿಕ್ ರ್ಯಾಂಕಿಂಗ್ ಆಫ್ ವಲ್ರ್ಡ್ ಯುನಿವರ್ಸಿಟೀಸ್ ಹಾಗೂ ಟೈಮ್ಸ್ ಹೈಯರ್ ಎಜ್ಯುಕೇಶನ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ಸ್ ಕೂಡಾ ಪ್ರತ್ಯೇಕ ಪಟ್ಟಿ ಬಿಡುಗಡೆ ಮಾಡುತ್ತವೆ.

For Quick Alerts
ALLOW NOTIFICATIONS  
For Daily Alerts

English summary
The Indian Institute of Technology (IIT)-Bombay, IIT-Delhi, Indian Institute of Science (IISc), Bengaluru and Delhi University have been ranked in the top ten best universities in the country according to a popular world ranking body. This is for the academic year 2017 to 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X