ದ್ವಿತೀಯ ಪಿಯುಸಿ ಪರೀಕ್ಷೆ: ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ನಿರೀಕ್ಷಿಸಿದ ಪ್ರಶ್ನೆಗಳೇ ಪ್ರಶ್ನೆಪತ್ರಿಕೆಯಲ್ಲಿ ಇದ್ದಿದ್ದರಿಂದ ಈ ಬಾರಿಯ ರಸಾಯನಶಾಸ್ತ್ರದ ಪತ್ರಿಕೆಯನ್ನು ನಿರಾಯಾಸವಾಗಿ ಬರೆದಿದ್ದಾರೆ ವಿದ್ಯಾರ್ಥಿಗಳು.  

ಗಣಿತ ಮತ್ತು ಭೌತಶಾಸ್ತ್ರದ ಪತ್ರಿಕೆಗಳ ನಂತರ ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಈ ಪತ್ರಿಕೆಯು ವಿದ್ಯಾರ್ಥಿಗಳ ಮುಖದಲ್ಲಿ ನಗುಮೂಡುವಂತೆ ಮಾಡಿದೆ.  ಜಯನಗರದ ವಿಜಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 639 ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದರು.

ಪರೀಕ್ಷಾ ಕೇಂದ್ರದಿಂದ ಹೊರ ಬರುತ್ತಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮ ಹೆಚ್ಚಿತ್ತು. ಇದರೊಂದಿಗೆ ವಿಷಯವಾರು ಪರೀಕ್ಷೆಗಳನ್ನು ಮುಗಿಸಿದ ಖುಷಿಯಲ್ಲಿ ಇದ್ದರು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು. 

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿದ್ಯಾರ್ಥಿಗಳು ಹೇಳುವಂತೆ

ವಿಜಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಹೇಳುವಂತೆ ಇಂದಿನ ಪತ್ರಿಕೆ ಸುಲಭವಾಗಿತ್ತಾದರು ಮೊದಲ ಭಾಗ  ಹೆಚ್ಚು ತಲೆಕೆಡಿಸಿಕೊಳ್ಳುವಂತೆ ಮಾಡಿತ್ತು. ಬಹುಪಾಲು ವಿದ್ಯಾರ್ಥಿಗಳಿಗೆ ಒಂದು ಅಂಕದ ಎ ವಿಭಾಗ ಕಷ್ಟವಾಗಿತ್ತಾದರೂ ಉಳಿದ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಖುಷಿ ಪಟ್ಟಿದ್ದಾರೆ.

ವಿದ್ಯಾರ್ಥಿ ರಾಕೇಶ್ ಮಾತನಾಡಿ "ಮೊದಲ ವಿಭಾಗ ಸ್ವಲ್ಪ ಕಷ್ಟ ಎನಿಸಿತು ಆದರೆ ಮಿಕ್ಕ ಮೂರು ವಿಭಾಗಗಳಲ್ಲಿ ಹೆಚ್ಚಿನ ಅಂಕಗಳಿಸುವ ವಿಶ್ವಾಸವಿದೆ. ಇಂದು ಸಬ್ಜೆಕ್ಟ್ ಪೇಪರ್ ಕೊನೆಯಾದ್ದರಿಂದ ಇನ್ನು ಸ್ವಲ್ಪ ಹೆಚ್ಚಿನ ಖುಷಿಯಾಗುತ್ತಿದೆ, ಅಲ್ಲದೇ ಅರ್ಧ ಭಾರ ಕಡಿಮೆಯಾದಂತಾಗಿದೆ. ಇನ್ನೇನಿದ್ದರು ಕನ್ನಡ ಮತ್ತು ಇಂಗ್ಲಿಷ್ ಪೇಪರ್ ಉಳಿದಿದ್ದು ಅವುಗಳನ್ನು ಕೂಡ ಉತ್ತಮವಾಗಿ ಉತ್ತರಿಸುವ ವಿಶ್ವಾಸವಿದೆ. ಭಾಷೆಯ ವಿಷಯಗಳು ಎಂದು ಉದಾಸೀನ ಮಾಡುವ ಹಾಗೂ ಇಲ್ಲ, ಅವುಗಳಲ್ಲಿ ಹೆಚ್ಚು ಅಂಕಗಳಿಸಿದರೆ ಉತ್ತಮ ಪರ್ಸೆಂಟೇಜ್ ಸಿಗುತ್ತದೆ." ಎಂದು ಹೇಳಿದರು.

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಎಪತ್ತು ಅಂಕಗಳ ರಸಾಯನಶಾಸ್ತ್ರದ ಪತ್ರಿಕೆಯು 37 ಪ್ರಶ್ನೆಗಳನ್ನು ಒಳಗೊಂಡಿದೆ. ನಾಲ್ಕು ವಿಭಾಗಗಳನ್ನಾಗಿ ಪ್ರಶ್ನೆಪತ್ರಿಕೆಯನ್ನು ವಿಂಗಡಿಸಿದ್ದು ಉತ್ತರಿಸಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

ಭಾಗ-ಎ

ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಅಥವಾ ಒಂದು ಪದದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.

ಭಾಗ-ಬಿ

10 ಅಂಕಗಳ ಈ ಭಾಗವು ಒಟ್ಟು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿಲಾಗಿರುತ್ತದೆ.

ಭಾಗ-ಸಿ

15 ಅಂಕಗಳ ಸಿ ಭಾಗವು ಎಂಟು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ಯಾವುದಾದರು ಐದು ಪ್ರಶ್ನೆಗಳಿಗೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಮೂರು ಅಂಕಗಳನ್ನು ನಿಗದಿಪಡಿಸಿಲಾಗಿರುತ್ತದೆ.

ಭಾಗ-ಡಿ

ಡಿ ಭಾಗವನ್ನು ಎರಡು ವಿಭಾಗಗಳನ್ನಾಗಿ ವಿಂಡಿಸಿದ್ದು ಮೊದಲ ವಿಭಾದಲ್ಲಿ ಐದು ಮತ್ತು ಎರಡನೇ ವಿಭಾಗದಲ್ಲಿ ಆರು ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಮೊದಲ ವಿಭಾಗದಲ್ಲಿ ವಿದ್ಯಾರ್ಥಿಯು ಯಾವುದಾದರು ಮೂರು ಪ್ರಶ್ನಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿಪ್ರಶ್ನೆಗೆ ಐದು ಅಂಕಗಳಿರುತ್ತದೆ. ಎರಡನೇ ವಿಭಾಗದಲ್ಲಿ ಆರು ಪ್ರಶ್ನೆಗಳಿದ್ದು ಇಲ್ಲಿ ವಿದ್ಯಾರ್ಥಿಯು ಯಾವುದಾದರು ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿ ಪ್ರಶ್ನೆಯು ಎರಡು ಅಥವಾ ಮೂರು ಪ್ರಶ್ನೆಗಳನ್ನು ಹೊಂದಿದ್ದು ಪ್ರತಿ ಪ್ರಶ್ನೆಗೆ ಐದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಡಿ ವಿಭಾಗ ಒಟ್ಟು 35 ಅಂಕಗಳನ್ನು ಒಳಗೊಂಡಿರುತ್ತದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

English summary
second puc students came out with a smile after finishing their chemistry paper

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia