ದ್ವಿತೀಯ ಪಿಯುಸಿ: ಇಂಗ್ಲಿಷ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

Posted By:

ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ದಿನವಾದ ಇಂದು ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಪರೀಕ್ಷೆ ಬರೆದಿದ್ದಾರೆ. ಇಂದು ಇಂಗ್ಲಿಷ್ ಪರೀಕ್ಷೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದೆ.

ಇಂಗ್ಲಿಷ್ ಭಾಷೆ ಎಲ್ಲಾ ವಿಭಾಗದವರಿಗೂ ಅನ್ವಯಿಸುವುದರಿಂದ ಇಂದು ಎಲ್ಲಾ ಪರೀಕ್ಷಾ ಕೇಂದ್ರಗಳು ತುಂಬಿ ಹೋಗಿದ್ದವು. ಜಯನಗರದ ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ 1164 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಎಲ್ಲರಿಂದಲೂ ಸುಲಭವಾಗಿತ್ತು ಅನ್ನೋ ಉತ್ತರ ಸಾಮಾನ್ಯವಾಗಿತ್ತು. ಕಾಮರ್ಸ್ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಗಿಸಿದ ಖುಷಿಯಲ್ಲಿದ್ದರೆ, ವಿಜ್ಞಾನದ ವಿದ್ಯಾರ್ಥಿಗಳು ಮುಂಬರುವ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆಗೆ ತಯಾರುಗುವ ಯೋಚನೆಯಲ್ಲಿದ್ದರು.

ಜೈನ್ ಕಾಲೇಜಿನ ವಿದ್ಯಾರ್ಥಿನಿ ಮಹೇಶ್ವರಿ ಮಾತನಾಡಿ "ನಾಲ್ಕು ಅಂಕಗಳ ಪ್ರಶ್ನೆಗಳು ಸ್ವಲ್ಪ ಕಷ್ಟ ಎನಿಸಿತಾದರು ಆಯ್ಕೆಗಳು ಇದ್ದ ಕಾರಣ ಅಷ್ಟು ಕಷ್ಟ ಎನಿಸಲಿಲ್ಲ, ಅಲ್ಲದೇ ಓದಲು ಮೂರು ದಿನ ಕಾಲಾವಕಾಶ ಇದ್ದ ಕಾರಣ ಒತ್ತಡವಿಲ್ಲದೆ ಪರೀಕ್ಷೆ ಬರೆದು ಮುಗಿಸಿದ್ದೇವೆ" ಎಂದು ಹೇಳಿದರು.

ಇಂಗ್ಲಿಷ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಜೈನ್ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿ ನಿಶಾಂತ್ ಮಾತನಾಡಿ " ನಾವು ಅಂದಕೊಂಡಿದ್ದಕ್ಕಿಂತಲು ಪರೀಕ್ಷೆ ಸುಲಭವಾಗಿತ್ತು. ಎಲ್ಲರು ಚೆನ್ನಾಗಿ ಉತ್ತರಿಸಿದ್ದೇವೆ. ನಮಗೆ ಈ ಪರೀಕ್ಷೆಗಳಿಗಿಂತಲು ಮುಂಬರುವ ಸಿ ಇ ಟಿ ಪರೀಕ್ಷೆಯೇ ಮುಖ್ಯ ಗುರಿ. ಪಿಯುಸಿ ಪರೀಕ್ಷೆ ಮುಗಿದಿದೆ ಎಂದು ಎಲ್ಲರು ಸಂಭ್ರಮದಲ್ಲಿದ್ದಾರೆ. ಆದರೆ ನಾವು ಸಿಇಟಿ ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.

ಪೋಷಕರ ನುಡಿ

ಮಕ್ಕಳೊಂದಿಗೆ ದಿನವು ಪರೀಕ್ಷಾ ಕೇಂದ್ರದ ಬಳಿ ಬರುತ್ತಿದ್ದ ಪೋಷಕರ ಸಂಖ್ಯೆ ಕೊನೆಯ ದಿನ ಕಡಿಮೆ ಇತ್ತಾದರು ಕೆಲವು ಪೋಷಕರು ಪರೀಕ್ಷಾ ಕೇಂದ್ರದ ಬಳಿ ಹಾಜರಿದ್ದರು. ವಿದ್ಯಾರ್ಥಿಯೊಬ್ಬರ ಪೋಷಕರು ಮಾತನಾಡಿ " ಇಷ್ಟು ದಿನ ಎಲ್ಲಾ ಪರೀಕ್ಷೆಗಳು ಚೆನ್ನಾಗಿ ನಡೆದಿವೆ. ಯಾವ ಪರೀಕ್ಷೆಯನ್ನು ಕೇಳಿದರು ಚೆನ್ನಾಗಿ ಬರೆದಿದ್ದೇನೆ ಎಂದೇ ಎಲ್ಲಾ ವಿದ್ಯಾರ್ಥಿಗಳು ಹೇಳುವುದು. ರಿಸಲ್ಟ್ ಬಂದ ಮೇಲಷ್ಟೆ ಇವರ ಹಣೆಬರಹ ತಿಳಿಯುವುದು" ಎಂದು ಹೇಳಿದರು.

ಇಂಗ್ಲಿಷ್ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ನೂರು ಅಂಕಗಳ ಇಂಗ್ಲಿಷ್ ಪ್ರಶ್ನೆಪತ್ರಿಕೆಯು ಒಟ್ಟು 35 ಪ್ರಶ್ನೆಗಳನ್ನು ಒಳಗೊಂಡಿದ್ದು ಏಳು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಉತ್ತರಿಸಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

  • ಮೊದಲ ವಿಭಾಗದಲ್ಲಿ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸುವ 12 ಪ್ರಶ್ನೆಗಳನ್ನು ಕೇಳಲಾಗಿದ್ದು ವಿದ್ಯಾರ್ಥಿಯು ಎಲ್ಲಾ ಹನ್ನೆರುಡು ಪ್ರಶ್ನೆಗಳಿಗೂ ಉತ್ತರಿಸಬೇಕು. ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.
  • ಎರಡನೇ ವಿಭಾಗದಲ್ಲಿ ಹತ್ತು ಪ್ರಶ್ನೆಗಳನ್ನು ಕೇಳಲಾಗಿದ್ದು ವಿದ್ಯಾರ್ಥಿಯು ಯಾವುದಾದರು ಎಂಟು ಪ್ರಶ್ನೆಗಳಿಗೆ 80 ರಿಂದ 100 ಪದಗಳಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೂ ನಾಲ್ಕು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
  • ಮೂರನೇ ವಿಭಾಗಲ್ಲಿ ಆರು ಅಂಕಗಳ ಮೂರು ಪ್ರಶ್ನೆಗಳನ್ನು ಕೇಳಲಾಗಿದ್ದು ವಿದ್ಯಾರ್ಥಿಯು ಯಾವುದಾದರು ಒಂದಕ್ಕೆ ಸುಮಾರು 200 ಪದಗಳಲ್ಲಿ ಉತ್ತರಿಸಬೇಕು.
  • ನಾಲ್ಕನೇ ವಿಭಾಗವು ಗದ್ಯ ಓದಿ ಉತ್ತರಿಸುವ ವಿಭಾಗವಾಗಿದ್ದು ಇದು ಹತ್ತು ಅಂಕಗಳನ್ನು ಒಳಗೊಂಡಿರುತ್ತದೆ.
  • ಐದು, ಆರು ಮತ್ತು ಏಳನೇ ವಿಭಾಗವು ವ್ಯಾಕರಣಕ್ಕೆ ಸಂಬಂಧ ಪಟ್ಟದಾಗಿದ್ದು ಇಲ್ಲಿ ಸೂಚನೆಗೆ ತಕ್ಕ ಹಾಗೆ ವಿದ್ಯಾರ್ಥಿಗಳು ಉತ್ತರಿಸಬೇಕು. ಇದರ ಜೊತೆಯಲ್ಲಿ ಪತ್ರ ಬರೆಯುವುದು, ವರದಿ ಬರೆಯುವುದು ಕೂಡ ಸೇರಿದೆ.

ಗ್ರೇಸ್ ಮಾರ್ಕ್ಸ್

ಏಳನೇ ವಿಭಾಗದ ಕೊನೆಯ ಪ್ರಶ್ನೆಯು ತಪ್ಪಾಗಿ ಮುದ್ರಿತವಾಗಿದ್ದು ಒಂದು ಕೃಪಾಂಕ ಸಿಗಲಿದೆ ಎಂದು ವಿದ್ಯಾರ್ಥಿಗಳು ಖುಷಿಯಲ್ಲಿದ್ದದ್ದು ಎಲ್ಲೆಡೆ ಕಂಡು ಬಂತು.

ಇದನ್ನು ಗಮನಿಸಿ: ಸಿಇಟಿ ವೇಳಾಪಟ್ಟಿ

English summary
On the last day of second puc examination language paper English was fairy easy

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia