ದ್ವಿತೀಯ ಪಿಯುಸಿ ಪರೀಕ್ಷೆ: ಹಿಂದಿ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

ಮುಖ್ಯ ವಿಷಯಗಳ ಪರೀಕ್ಷೆಗಳು ಮುಗಿದ ಬೆನ್ನಲ್ಲೆ ಭಾಷಾ ಪರೀಕ್ಷೆಗಳು ಶುರುವಾಗಿವೆ. ವಿದ್ಯಾರ್ಥಿಗಳು ನಿರಾತಂಕವಾಗಿ ಭಾಷಾ ಪರೀಕ್ಷೆಗಳನ್ನು ಬರೆದಿದ್ದಾರೆ.

ಮುಖ್ಯ ವಿಷಯಗಳ ಪರೀಕ್ಷೆಗಳು ಮುಗಿದ ಬೆನ್ನಲ್ಲೆ ಭಾಷಾ ಪರೀಕ್ಷೆಗಳು ಶುರುವಾಗಿವೆ. ವಿದ್ಯಾರ್ಥಿಗಳು ನಿರಾತಂಕವಾಗಿ ಭಾಷಾ ಪರೀಕ್ಷೆಗಳನ್ನು ಬರೆದಿರುವುದು ಇಂದು ಕಂಡು ಬಂತು.

ಇಂದು ಹಿಂದಿ ಮತ್ತು ತೆಲುಗು ಭಾಷೆಯ ಪರೀಕ್ಷೆಗಳು ನಡೆದಿದ್ದು ಜಯನಗರದ ವಿಜಯ ಕಾಲೇಜಿನಲ್ಲಿ 302 ವಿದ್ಯಾರ್ಥಿಗಳು ಹಿಂದಿ ಪರೀಕ್ಷೆ ತೆಗೆದುಕೊಂಡಿದ್ದರೆ ಕೇವಲ ಒಬ್ಬ ವಿದ್ಯಾರ್ಥಿ ತೆಲುಗು ಭಾಷೆ ತೆಗೆದುಕೊಂಡಿದ್ದರು.

ನಿರಾಯಾಸವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಪಾಲಿಗೆ ಭಾಷಾ ಪತ್ರಿಕೆಗಳು ಅತಿ ಸುಲಭವಾಗಿ ಪರಿಣಮಿಸಿವೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಖುಷಿಯಿಂದ ಹೊರಬಂದದ್ದು ಹಿಂದಿ ಭಾಷೆ ಪತ್ರಿಕೆ ಸುಲಭವಾಗಿತ್ತು ಎನ್ನುವುದನ್ನು ತೋರಿಸುತಿತ್ತು.

ಹಿಂದಿ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

ವಿದ್ಯಾರ್ಥಿಗಳನ್ನು ಈ ಕುರಿತು ಮಾತನಾಡಿಸಿದಾಗ " ಹಿಂದಿ ಭಾಷೆಗೆ ಕೇವಲ ಒಂದು ದಿನ ಮಾತ್ರ ಸಮಯಾವಕಾಶವಿತ್ತು ಆದರೂ ಕೂಡ ಅಷ್ಟರಲ್ಲೇ ನಾವು ಉತ್ತಮವಾಗಿ ಓದಿ ಚೆನ್ನಾಗಿ ಬರೆದಿದ್ದೇವೆ.ಇನ್ನು ಒಂದೆರೆಡು ದಿನ ಅವಕಾಶ ಸಿಕ್ಕಿದ್ದರೆ ಇನ್ನೂ ಉತ್ತಮವಾಗಿ ಬರೆಯಬಹುದಿತ್ತು. ಭಾಷಾ ಪರೀಕ್ಷೆಗಳನ್ನು ಕಡೆಗಣಿಸುವಂತಿಲ್ಲ ಅವುಗಳಿಂದಲೇ ನಮ್ಮ ಪರ್ಸೆಂಟೇಜ್ ಹೆಚ್ಚುವುದು. ಇನ್ನಿರುವುದು ಇಂಗ್ಲೀಷ್ ಒಂದೆ ಅದಕ್ಕೆ ಸಾಕಷ್ಟು ಸಮಯಾವಕಾಶವಿದೆ. ಇಷ್ಟು ದಿನ ಸುಮ್ಮನೆ ಓದಿ ಓದಿ ಬೇಜಾರಾಗಿತ್ತು ಇವತ್ತು ಸ್ವಲ್ಪ ರಿಲ್ಯಾಕ್ಸ್ ಎನಿಸುತ್ತಿದೆ." ಎಂಬ ಉತ್ತರಗಳು ಕೇಳಿ ಬಂದವು.

ಹಿಂದಿ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ನೂರು ಅಂಕಗಳ ಹಿಂದಿ ಪ್ರಶ್ನೆಪತ್ರಿಕೆಯು ಒಟ್ಟು 49 ಪ್ರಶ್ನೆಗಳನ್ನು ಒಳಗೊಂಡಿದೆ. ಈ ಪತ್ರಿಕೆಯನ್ನು ಆರು ಭಾಗಗಳನ್ನಾಗಿ ವಿಂಗಡಿಸಿದ್ದು ಬರೆಯಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

ಪ್ರಶ್ನೆಪತ್ರಿಕೆಯ ಮೊದಲ ಭಾಗವು ಹದಿನೈದು ಅಂಕಗಳನ್ನು ಹೊಂದಿದ್ದು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.ಮೊದಲ ವಿಭಾಗದಲ್ಲಿ ಒಂದು ಅಂಕದ ಆರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಯು ಆರು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದ್ದು ಯಾವುದೇ ಆಯ್ಕೆಗಳಿರುವುದಿಲ್ಲ.ಎರಡನೇ ವಿಭಾಗದಲ್ಲಿ ಐದು ಪ್ರಶ್ನೆಗಳನ್ನು ಕೇಳಲಾಗಿದ್ದು ಇಲ್ಲಿ ವಿದ್ಯಾರ್ಥಿಯು ಯಾವುದಾದರು ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗಿದೆ. ಪ್ರತಿ ಪ್ರಶ್ನೆಗೆ ಮೂರು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಎರಡನೇ ಭಾಗ ಕೂಡ ಮೊದಲಿನಂತೆ ಎರಡು ವಿಭಾಗಗಳನ್ನು ಹೊಂದಿದೆ. ಒಟ್ಟು ಹತ್ತು ಅಂಕಗಳನ್ನು ಒಳಗೊಂಡಿದ್ದು ಮೊದಲ ವಿಭಾಗದಲ್ಲಿ ಒಂದು ಅಂಕದ ನಾಲಕ್ಕು ಪ್ರಶ್ನೆಗಳು ಮತ್ತು ಎರಡನೇ ವಿಭಾಗದಲ್ಲಿ ಎರಡು ಅಂಕದ ನಾಲಕ್ಕು ಪ್ರಶ್ನೆಗಳಿರುತ್ತವೆ. ಎರಡನೇ ವಿಭಾಗದಲ್ಲಿ ಒಂದು ಪ್ರಶ್ನೆಯನ್ನು ಹೆಚ್ಚುವರಿಯಾಗಿ ಕೇಳಲಾಗಿದ್ದು ವಿದ್ಯಾರ್ಥಿಯು ಯಾವುದಾದರು ಮೂರಕ್ಕೆ ಉತ್ತರಿಸಬೇಕಾಗಿದೆ.

ಪತ್ರಿಕೆಯ ಮೂರನೆ ಭಾಗವು ಮೂರು ವಿಭಾಗಳನ್ನು ಹೊಂದಿದ್ದು ಒಂದು, ಮೂರು ಮತ್ತು ನಾಲ್ಕು ಅಂಕದ ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲೆರೆಡು ವಿಭಾಗದಲ್ಲಿ ಸಾಮಾನ್ಯ ರೀತಿಯ ಪ್ರಶ್ನೆಗಳಿದ್ದರೆ ಮೂರನೇ ವಿಭಾಗದಲ್ಲಿ ಸಂದರ್ಭ ಸಹಿತ ವಿವರಿಸುವ ಪ್ರಶ್ನೆಗಳನ್ನು ಕೇಳಲಾಗಿದೆ.

ಪತ್ರಿಕೆಯ ನಾಲ್ಕನೇ ವಿಭಾಗವು ಎರಡು ವಿಭಾಗಗಳನ್ನು ಹೊಂದಿದ್ದು ಒಂದು ಮತ್ತು ಐದು ಅಂಕಗಳ ಪ್ರಶ್ನೆಗಳನ್ನು ಹೊಂದಿದೆ.

ಪತ್ರಿಕೆಯ ಐದನೇ ಭಾಗವು ಎಂಟು ವಿವಿಧ ರೀತಿಯ ಒಂದು ಅಂಕದ ಪ್ರಶ್ನೆಗಳನ್ನು ಹೊಂದಿದ್ದು ಇದರಲ್ಲಿ ಹೊಂದಿಸಿ ಬರೆಯಿರಿ, ಬಿಟ್ಟ ಸ್ಥಳ ತುಂಬಿರಿ, ವಾಕ್ಯ ಸರಿ ಪಡಿಸಿ, ಸೂಚನೆಗೆ ತಕ್ಕಂತೆ ವಾಕ್ಯ ಬದಲಿಸಿ, ಸಮಾನಾರ್ಥಕ ಪದ ಬರೆಯಿರಿ, ಬಡಿಸಿ ಬರೆಯಿರಿ ಎಂಬಂಥ ವ್ಯಾಕರಣಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಪ್ರಶ್ನೆಪತ್ರಿಕೆಯ ಕೊನೆಯ ಭಾಗದಲ್ಲಿ ಪ್ರಬಂಧ, ಅನುವಾದ ಮತ್ತು ಗದ್ಯ ಓದಿ ಉತ್ತರಿಸುವ ಪ್ರಶ್ನೆಗಳನ್ನು ಕೇಳಲಾಗಿದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
After all the major papers have got over, today's Karnataka II PUC Hindi exam paper was an icing to the exams cake as students found it easy to write.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X