ದ್ವಿತೀಯ ಪಿಯುಸಿ ಪರೀಕ್ಷೆ : ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

ಕಲಾ ವಿಭಾಗದ ವಿಷಯವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಎಂದಿಗಿಂತ ಸ್ವಲ್ಪ ಕಡಿಮೆ ಇದದ್ದು ವಿಶೇಷ. ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಕೇವಲ ಎರಡಂಕಿಯ ಹಾಜರಾತಿ ಇದ್ದದ್ದು ಪರೀಕ್ಷೆಯ ವಾತಾವರಣವೇ ಇಲ್ಲದಂತೆ ಗೋಚರಿಸುತ್ತಿತ್ತು.

ಇಂದು ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಯು ನಡೆದಿದೆ. ಜಯನಗರದ ಕಮ್ಯುನಿಟಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇಂದು 60 ಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹಾಜರಿದ್ದು ನಿರಾಯಾಸವಾಗಿ ಪರೀಕ್ಷೆ ಬರೆದಿದ್ದಾರೆ.

ಕಲಾ ವಿಭಾಗದ ವಿಷಯವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಎಂದಿಗಿಂತ ಸ್ವಲ್ಪ ಕಡಿಮೆ ಇದದ್ದು ವಿಶೇಷ. ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಕೇವಲ ಎರಡಂಕಿಯ ಹಾಜರಾತಿ ಇದ್ದದ್ದು ಪರೀಕ್ಷೆಯ ವಾತಾವರಣವೇ ಇಲ್ಲದಂತೆ ಗೋಚರಿಸುತ್ತಿತ್ತು.

ಪ್ರಶ್ನೆಪತ್ರಿಕೆಗಳನ್ನು ಹಿಡಿದು ಹೊರಬಂದ ವಿದ್ಯಾರ್ಥಿಗಳ ಮುಖದಲ್ಲಿಯೂ ಪರೀಕ್ಷೆಯ ಛಾಯೆ ಇದ್ದಂತ್ತಿರಲಿಲ್ಲ. ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಪರೀಕ್ಷೆಯ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

ಜೆಎಸ್ ಎಸ್ ಕಾಲೇಜಿನ ವಿದ್ಯಾರ್ಥಿ ಬಸವರಾಜು ಮಾತನಾಡಿ " ಇಂದಿನ ಪರೀಕ್ಷೆ ನಾವು ನಿರೀಕ್ಷಿಸಿದಂತೆ ಇತ್ತು, ಅನೇಕ ವಿದ್ಯಾರ್ಥಿಗಳು ನಿರಾಯಾಸವಾಗಿ ಪರೀಕ್ಷೆಯನ್ನು ಬರೆದಿದ್ದಾರೆ. ಹೆಚ್ಚಿನ ವಾಕ್ಯಗಳಲ್ಲಿ ಬರೆಯಬೇಕಿದ್ದರಿಂದ ಬರೆಯಲು ಸ್ವಲ್ಪ ಕಷ್ಟವಾಯಿತು ಅನ್ನುವುದು ಬಿಟ್ಟರೆ ನಾವು ನಿರೀಕ್ಷಿಸಿದ್ದ ರೀತಿಯಲ್ಲೇ ಪ್ರಶ್ನೆಪತ್ರಿಕೆ ಮೂಡಿಬಂದಿದ್ದು ಖುಷಿ ಎನಿಸಿದೆ." ಎಂದು ಹೇಳಿದರು.

ಮತ್ತೊರ್ವ ವಿದ್ಯಾರ್ಥಿ ಮಾತನಾಡಿ "ಕಾಲೇಜಿನಲ್ಲಿ ಹಲವು ಪ್ರಶ್ನೆಪತ್ರಿಕೆಗಳನ್ನು ನಾವು ಅಭ್ಯಸಿಸಿದ್ದೆವು ಹಾಗಾಗಿ ಈ ಪತ್ರಿಕೆ ನಮಗೆ ಅಷ್ಟಾಗಿ ಕಷ್ಟ ಎನಿಸಲಿಲ್ಲ. ಕನ್ನಡ ಮಾಧ್ಯಮದವರಾದ್ದರಿಂದ ಉತ್ತರಿಸುವುದು ಕಷ್ಟವಾಗಲಿಲ್ಲ. ಎಂದು ಹೇಳಿದರು."

ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

ನೂರು ಅಂಕಗಳ ರಾಜ್ಯಶಾಸ್ತ್ರದ ಪ್ರಶ್ನೆಪತ್ರಿಕೆಯು ನಲವತ್ತು ಪ್ರಶ್ನೆಗಳನ್ನು ಒಳಗೊಂಡಿದ್ದು ಉತ್ತರಿಸಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿರುತ್ತದೆ.

ಮೊದಲನೆ ವಿಭಾಗದಲ್ಲಿ ಒಟ್ಟು ಹತ್ತು ಪ್ರಶ್ನೆಗಳನ್ನೊಳಗೊಂಡಿದ್ದು, ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಕ್ಕೆ ಒಂದು ಅಂಕ ನಿಗದಿಪಡಿಸಲಾಗಿರುತ್ತದೆ.

ಎರಡನೆ ವಿಭಾಗದಲ್ಲಿ 20 ಅಂಕಗಳಿದ್ದು ಒಟ್ಟು ಹನ್ನೆರಡು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಹತ್ತು ಪ್ರಶ್ನೆಗಳಿಗೆ 2 ರಿಂದ 3 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಎರಡು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.

ಮೂರನೇ ವಿಭಾಗ 40 ಅಂಕಗಳನ್ನು ಹೊಂದಿದ್ದು ಇಲ್ಲಿ ಹನ್ನೆರೆಡು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಗಳು ಯಾವುದಾದರು ಎಂಟು ಪ್ರಶ್ನೆಗಳಿಗೆ 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಯ ಸರಿಯಾದ ಉತ್ತರಗಳಿಗೆ ಐದು ಅಂಕಗಳನ್ನು ನಿಗದಿಪಡಿಸಿರಲಾಗಿರುತ್ತದೆ.

ಪತ್ರಿಕೆಯ ನಾಲ್ಕೆನೇ ವಿಭಾಗದಲ್ಲಿ ನಾಲಕ್ಕು ಪ್ರಶ್ನೆಗಳನ್ನು ಕೇಳಲಾಗಿದ್ದು ಇದರಲ್ಲಿ ಯಾವುದಾದರು ಎರಡು ಪ್ರಶ್ನೆಗಳಿಗೆ 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಬೇಕಾಗಿರುತ್ತದೆ. ಪ್ರತಿ ಪ್ರಶ್ನೆಗೆ 10 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ವಿಭಾಗದಿಂದ ಒಟ್ಟು ಇಪತ್ತು ಅಂಕಗಳನ್ನು ಪಡೆಯಬಹುದಾಗಿದೆ.

ಕೊನೆಯ ವಿಭಾಗವು ಎರಡು ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರತಿ ಪ್ರಶ್ನೆಗಳಲ್ಲೂ ಒಂದೊಂದು ಹೆಚ್ಚುವರಿ ಪ್ರಶ್ನೆ ಕೇಳಲಾಗಿದ್ದು ವಿದ್ಯಾರ್ಥಿಯು ಎರಡೂ ಪ್ರಶ್ನೆಗಳಲ್ಲಿ ಒಂದೊಂದು ಪ್ರಶ್ನೆ ಆಯ್ಕೆ ಮಾಡಿ ಉತ್ತರಿಸಬೇಕಾಗುತ್ತದೆ, ಪ್ರತಿ ಪ್ರಶ್ನೆಗೆ ಐದು ಅಂಕಗಳನ್ನು ನಿಗದಿಪಡಿಸಿರಲಾಗುತ್ತದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
The Karnataka ii puc political science exam for arts students ended today with an easy paper that contained expected questions, as told by the students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X