ದ್ವಿತೀಯ ಪಿಯುಸಿ ಸಂಸ್ಕೃತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಒಟ್ಟು ನೂರು ಅಂಕಗಳ ಸಂಸ್ಕೃತ ಪ್ರಶ್ನೆಪತ್ರಿಕೆಯು ಒಟ್ಟು 56 ಪ್ರಶ್ನೆಗಳನ್ನು ಒಳಗೊಂಡಿದೆ. ಈ ಪತ್ರಿಕೆಯನ್ನು 9 ಭಾಗಗಳನ್ನಾಗಿ ವಿಂಗಡಿಸಿದ್ದು ಬರೆಯಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂದು ನಾಲಕ್ಕು ಭಾಷೆಯ ಪರೀಕ್ಷೆಗಳು ನಡೆದಿವೆ. ಸಂಸ್ಕೃತ , ಮರಾಠಿ, ಫ್ರೆಂಚ್ ಮತ್ತು ಉರ್ದು ಭಾಷೆಯ ಪರೀಕ್ಷೆಗಳು ನಡೆದಿವೆ.

ಜಯನಗರದ ವಿಜಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 183 ಮಂದಿ ಸಂಸ್ಕೃತ , 25 ಫ್ರೆಂಚ್ ಮತ್ತು ಒಬ್ಬ ವಿದ್ಯಾರ್ಥಿ ಉರ್ದು ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷಾ ಕೆಂದ್ರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಸಿಬ್ಬಂದಿ ವರ್ಗ ನಿರಾಯಾಸವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇಂದಿನ ಪರೀಕ್ಷೆ ಕುರಿತು ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ "ಪತ್ರಿಕೆತಯು ತುಂಬಾ ಸರಳವಾಗಿದ್ದು, ಎಲ್ಲಾ ವಿಭಾಗವು ಕೂಡ ಸುಲಭವಾಗಿ ಉತ್ತರಿಸುವಂತಿತ್ತು. ನಿಗದಿತ ಸಮಯಕ್ಕಿಂತ ಮುಂಚೆಯೇ ಬರೆದು ಮುಗಿಸಿದ್ದೆವು, ನಮ್ಮ ಊಹೆಗೆ ತಕ್ಕಂತೆ ಪತ್ರಿಕೆಯು ಇದ್ದಿದ್ದು ನಮಗೆ ಸಂತೂಷವಾಗಿದೆ. ಈ ಪತ್ರಿಕೆ ಓದಲು ಸಾಕಷ್ಟು ಸಮಯಾವಕಾಶ ಕೂಡ ಸಿಕ್ಕಿತ್ತು, ಆದ್ದರಿಂದ ನಮಗೆ ಯಾವುದೇ ಒತ್ತಡವಿಲ್ಲದೆ ಚೆನ್ನಾಗಿ ಬರೆದಿದ್ದೆವೆ" ಎನ್ನುವ ಉತ್ತರಗಳು ಕೇಳಿ ಬಂದವು.

ಸಂಸ್ಕೃತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಸಂಸ್ಕೃತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಒಟ್ಟು ನೂರು ಅಂಕಗಳ ಸಂಸ್ಕೃತ ಪ್ರಶ್ನೆಪತ್ರಿಕೆಯು ಒಟ್ಟು 56 ಪ್ರಶ್ನೆಗಳನ್ನು ಒಳಗೊಂಡಿದೆ. ಈ ಪತ್ರಿಕೆಯನ್ನು 9 ಭಾಗಗಳನ್ನಾಗಿ ವಿಂಗಡಿಸಿದ್ದು ಬರೆಯಲು ಮೂರು ಗಂಟೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ.

ಪ್ರಶ್ನೆಪತ್ರಿಕೆಯ ಮೊದಲ ಭಾಗವು 10 ಅಂಕಗಳನ್ನು ಹೊಂದಿದ್ದು ಹತ್ತು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಯಾವುದೇ ಹೆಚ್ಚುವರಿ ಪ್ರಶ್ನೆಗಳು ಇರುವುದಿಲ್ಲ. ವಿದ್ಯಾರ್ಥಿಯು ಎಲ್ಲಾ ಹತ್ತು ಪ್ರಶ್ನೆಗಳಿಗೂ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಬೇಕಾಗಿದ್ದು ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಎರಡನೇ ವಿಭಾಗ 10 ಅಂಕಗಳದಾಗಿದ್ದು ಏಳು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಸಂಸ್ಕೃತ, ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಉತ್ತರಿಸತಕ್ಕದ್ದು. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಮೂರನೇ ವಿಭಾಗದಲ್ಲಿ ಶ್ಲೋಕವನ್ನು ಕೊಟ್ಟಿದ್ದು ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವುದರ ಜೊತೆಗೆ ಸಂದರ್ಭ ಸಹಿತ ಉತ್ತರಿಸಬೇಕಾಗುತ್ತದೆ. ಒಟ್ಟು ಐದು ಶ್ಲೋಕಗಳನ್ನು ಕೇಳಲಾಗಿದ್ದು ಯಾವುದಾದರು ಮೂರು ಶ್ಲೋಕಗಳಿಗೆ ಉತ್ತರಿಸಬೇಕು, ಪ್ರತಿಯೊಂದು ಶ್ಲೋಕದ ವಿವರಣೆಗೆ ಮೂರು ಅಂಕಗಳನ್ನು ನೀಡಲಾಗುತ್ತದೆ.

ನಾಲ್ಕನೇ ವಿಭಾಗದಲ್ಲಿ ಆರು ಪ್ರಶ್ನೆಗಳನ್ನು ಕೇಳಲಾಗಿದ್ದು ವಿದ್ಯಾರ್ಥಿಯು ಯಾವುದಾದರು ನಾಲ್ಕು ಪ್ರಶ್ನೆಗಳಿಗೆ ಸಂಸ್ಕೃತದಲ್ಲಿ1 ಉತ್ತರಿಸಬೇಕು. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಐದನೇ ವಿಭಾಗದಲ್ಲಿ ಎಂಟು ಪ್ರಶ್ನೆಗಳನ್ನು ಕೇಳಲಾಗಿದ್ದು ವಿದ್ಯಾರ್ಥಿಯು ಯಾವುದಾದರು ಐದು ಪ್ರಶ್ನೆಗಳಿಗೆ ಹತ್ತು ವಾಕ್ಯಗಳಲ್ಲಿ ಸಂಸ್ಕೃತ, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಬೇಕು. ಪ್ರತಿ ಪ್ರಶ್ನೆಗೆ ಐದು ಅಂಕಗಳಿರುತ್ತವೆ.

ಆರನೇ ವಿಭಾಗವು ಬಿಟ್ಟ ಸ್ಥಳ ತುಂಬುವ ಪ್ರಶ್ನಗಳನ್ನು ಹೊಂದಿದೆ. ಇದರಲ್ಲಿ ಒಟ್ಟು ನಾಲ್ಕು ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ ಒಂದು ಅಂಕಗಳನ್ನು ನೀಡಲಾಗಿರುತ್ತದೆ.

ಏಳನೇ ವಿಭಾಗವು ಹೊಂದಿಸಿ ಬರೆಯಿರಿ ವಿಭಾಗ. ಇದು ಒಟ್ಟು ನಾಲ್ಕು ಅಂಕಗಳನ್ನು ಹೊಂದಿದೆ.

ಎಂಟನೇ ವಿಭಾಗವು ಐದು ಪ್ರಶ್ನೆಗಳನ್ನು ಯಾವುದಾದರು ಮೂರಕ್ಕೆ ಉತ್ತರಿಸಬೇಕು. ಇಲ್ಲಿ ಕೇಳಲಾಗಿರುವ ವಾಕ್ಯಗಳಿಗೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ರೂಪಿಸಬೇಕು. ಪ್ರತಿ ಉತ್ತರಕ್ಕೂ ಒಂದು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ಒಂಬತ್ತನೇ ವಿಭಾಗವು ವ್ಯಾಕರಣಗಳಿಂದ ಕೂಡಿದ್ದು ಪ್ರತಿ ಪ್ರಶ್ನೆಗೆ ಕೇಳಿರುವ ಸೂಚನೆಯಂತೆ ವಿದ್ಯಾರ್ಥಿಗಳು ಉತ್ತರಿಸಬೇಕು. ಈ ವಿಭಾಗದಲ್ಲಿ ಅನುವಾದ, ವಾಕ್ಯ ರಚನೆ, ಸಂಧಿ, ಅಲಂಕಾರ ಗದ್ಯ ಓದಿ ಉತ್ತರ ಬರೆಯುವುದನ್ನು ಕೇಳಲಾಗಿರುತ್ತದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

For Quick Alerts
ALLOW NOTIFICATIONS  
For Daily Alerts

English summary
Following the list of language exams, today was the last day and it concluded with Karnataka II PUC Sanskrit exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X