ಎಸ್ ಎಸ್ ಎಲ್ ಸಿ ಪರೀಕ್ಷೆ: ಸಮಾಜ ವಿಜ್ಙಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿಜಯ ಪರೀಕ್ಷಾ ಕೇಂದ್ರದಲ್ಲಿ ನಾನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ಪರೀಕ್ಷೆಯು ಸುಲಭವಾಗಿತ್ತು ಎನ್ನುವ ಉತ್ತರ ನೀಡಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂತಿಮ ದಿನವಾದು ಇಂದು ಸಮಾಜ ವಿಜ್ಞಾನದ ಪರೀಕ್ಷೆ ನಡೆಯಿತು. ಪರೀಕ್ಷೆಯ ಅಂತಿಮ ದಿನವಾದ್ದರಿಂದ ವಿದ್ಯಾರ್ಥಿಗಳ ಮೊಗದಲ್ಲಿ ಸಂಭ್ರಮ ಮನೆಮಾಡಿತ್ತು, ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳು ಖುಷಿಯಿಂದ ಸಂಭ್ರಮಿಸುತ್ತಿದ್ದು ಎಲ್ಲೆಡೆ ಸಾಮಾನ್ಯವಾಗಿ ಕಂಡುಬಂತು.

ಜಯನಗರದ ವಿಜಯ ಪರೀಕ್ಷಾ ಕೇಂದ್ರದಲ್ಲಿ ನಾನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಬಹುತೇಕ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ಪರೀಕ್ಷೆಯು ಸುಲಭವಾಗಿತ್ತು ಎನ್ನುವ ಉತ್ತರ ನೀಡಿದ್ದಾರೆ.

ಪರೀಕ್ಷೆ ಕುರಿತು ವಿದ್ಯಾರ್ಥಿ ಹರ್ಷ ಮಾತನಾಡಿ " ಇವತ್ತು ಪರೀಕ್ಷೆಯ ಕೊನೆಯ ದಿನ, ಮೊದಲೇ ನಾವು ಪರೀಕ್ಷೆ ಮುಗಿಸುವ ಖುಷಿಯಲ್ಲಿದ್ದೆವು, ನಮ್ಮ ಖುಷಿಗೆ ಸಹಕಾರಿಯಾಗುವಂತೆ ಇಂದಿನ ಪ್ರಶ್ನೆಪತ್ರಿಕೆ ಇರುವುದು ಮತ್ತಷ್ಟು ಖುಷಿ ನೀಡಿದೆ. ಇಂದಿನ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ವಿಶ್ವಾಸವಿದೆ" ಎಂದು ಹೇಳಿದರು.

ಸಮಾಜ ವಿಜ್ಙಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ವಿದ್ಯಾರ್ಥಿನಿ ಆಶಾ ಹೇಳುವಂತೆ " ನಾವು ಏನನ್ನು ನಿರೀಕ್ಷೆಸಿದ್ದೆವೂ ಅದೇ ರೀತಿಯ ಪ್ರಶ್ನೆಗಳು ಬಂದಿವೆ, ಹಾಗಾಗಿ ಪರೀಕ್ಷೆಯನ್ನು ಉತ್ತಮವಾಗಿ ಬರೆದಿದ್ದೇವೆ. ಯಾವುದೇ ಪ್ರಶ್ನೆಯು ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡುವ ರೀತಿ ಇರಲಿಲ್ಲ."

ಸಂಭ್ರಮದ ಜೊತೆ ಬೇಸರ

ಹಲವು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿದ ಸಂಭ್ರಮದಲ್ಲಿದ್ದರೆ ಇನ್ನು ಕೆಲವರು ಶಾಲಾ ದಿನಗಳು ಮುಗಿದವು ಎನ್ನೋ ಬೇಸರದಲ್ಲಿದ್ದರು. ಶಾಲೆ ಮುಗಿಯುತ್ತಿದ್ದಂತೆ ನೆಚ್ಚಿನ ಗೆಳೆಯ ಗೆಳತಿಯರನ್ನು ದೂರ ಮಾಡಿಕೊಳ್ಳುವೆವು ಎಂಬ ಭಾವನೆಯನ್ನು ಕೆಲವರು ವ್ಯಕ್ತ ಪಡಿಸಿದರು.

ಸಮಾಜ ವಿಜ್ಙಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಈ ಪ್ರಶ್ನೆಪತ್ರಿಕೆಯು 47 ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಸೂಚನೆಗಳನ್ನು ನೀಡಿದ್ದು ಉತ್ತರಿಸಲು ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ.

  • ಮೊದಲ ಭಾಗದಲ್ಲಿ ಬಹುಆಯ್ಕೆಯ ಪ್ರಶ್ನೆಗಳಿದ್ದು 10 ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರತಿ ಪ್ರಶ್ನೆಗೆ ಒಂದು ಅಂಕವನ್ನು ನಿಗದಿಪಡಿಸಿರಲಾಗಿರುತ್ತದೆ.
  • ಪ್ರಶ್ನೆಪತ್ರಿಕೆಯ ಎರಡನೇ ವಿಭಾಗದಲ್ಲಿ ಒಂದು ಅಂಕದ ವಾಕ್ಯ ರೂಪದಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಕೇಳಲಾಗಿದ್ದು 14 ಪ್ರಶ್ನೆಗಳಿಗೆ ವಿದ್ಯಾರ್ಥಿಯು ಉತ್ತರಿಸಬೇಕಾಗಿದೆ.
  • ಮೂರನೇ ವಿಭಾಗದಲ್ಲಿ ಎರಡರಿಂದ ಮೂರು ವಾಕ್ಯಗಳಲ್ಲಿ ಉತ್ತರಿಸುವ 15 ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರತಿ ಪ್ರಶ್ನೆಗೆ 2 ಅಂಕಗಳನ್ನು ನಿಗದಿಪಡಿಸಲಾಗಿದೆ.
  • ನಾಲ್ಕನೇ ವಿಭಾಗವು 3 ಅಂಕದ ಪ್ರಶ್ನೆಗಳನ್ನು ಹೊಂದಿದ್ದು ಇಲ್ಲಿ ಆರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರತಿ ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತರಿಸಬೇಕಾಗಿದೆ.
  • ಐದನೇ ವಿಭಾಗದಲ್ಲಿ ನಾಲ್ಕು ಆಂಕದ ಪ್ರಶ್ನೆ ಕೇಳಲಾಗಿದ್ದು ಈ ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಬೇಕಾಗಿದೆ.
  • ಪ್ರಶ್ನೆಪತ್ರಿಕೆಯ ಕೊನೆಯ ಭಾಗದಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗಾಗಿ ನಕ್ಷೆ ಬರೆದು ಕೇಳಲಾಗಿರುವ ಜಾಗವನ್ನು ಗುರುತಿಸಲು ಸೂಚಿಸಲಾಗಿದೆ ಮತ್ತು ಅಂಧ ವಿದ್ಯಾರ್ಥಿಗಳಿಗಾಗಿ ವಾಕ್ಯ ರೂಪದ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಯು ನಾಲ್ಕು ಅಂಕಗಳನ್ನು ಒಳಗೊಂಡಿದೆ.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಪರೀಕ್ಷೆ: ವಿಜ್ಙಾನ ಪ್ರಶ್ನೆಪತ್ರಿಕೆ ವಿಶ್ಲೇಷಣೆ

For Quick Alerts
ALLOW NOTIFICATIONS  
For Daily Alerts

English summary
With the completion of SSLC Social science exam paper, there has been enough discussion and anticipation about the question paper and its marking among the students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X