ಎಸ್ ಎಸ್ ಎಲ್ ಸಿ ಪರೀಕ್ಷೆ: ಗಣಿತದಲ್ಲಿ 3 ಅಂಕ ಕಡಿತ

Posted By:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಪ್ಪಿನಿಂದ ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು ಅಂಕ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಗಣಿತ ಪ್ರಶ್ನೆಪತ್ರಿಕೆಯ ಪ್ರಶ್ನೆಸಂಖ್ಯೆ 36 ತಪ್ಪಾಗಿದ್ದು, ವಿದ್ಯಾರ್ಥಿಗಳು 3 ಅಂಕಗಳನ್ನು ಕಳೆದುಕೊಳ್ಳಲಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಭರದಿಂದ ಸಾಗಿದ್ದು, ಮೌಲ್ಯಮಾಪಕರು ತಪ್ಪು ಪ್ರಶ್ನೆಯನ್ನು ಪತ್ತೆ ಮಾಡಿದ್ದಾರೆ. 36 ನೇ ಪ್ರಶ್ನೆಗೆ ಉತ್ತರಿಸಲು ಪ್ರಯತ್ನ ಪಟ್ಟ ವಿದ್ಯಾರ್ಥಿಗಳಿಗೆ 3 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಆದರೆ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸದ ವಿದ್ಯಾರ್ಥಿಗಳು 3 ಅಂಕದಿಂದ ವಂಚಿತರಾಗಲಿದ್ದಾರೆ.

ಗಣಿತ ಪರೀಕ್ಷೆ

ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆಯು ದಿನಾಂಕ 03-04-2017 ರಂದು ನಡೆದಿತ್ತು. 80 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ 40 ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಶ್ನೆಪತ್ರಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಎಸ್ಸೆಸ್ಸೆಲ್ಸಿ ಗಣಿತದಲ್ಲಿ 3 ಅಂಕ ಕಡಿತ

ಗಣಿತದ 36 ನೇ ಪ್ರಶ್ನೆ

3 ಅಂಕಗಳ 36 ನೇ ಪ್ರಶ್ನೆಯು ಎರಡು ಪ್ರಶ್ನೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಯು ಯಾವುದಾದರು ಒಂದಕ್ಕೆ ಉತ್ತರ ಬರೆಯಬೇಕಿತ್ತು.
ಒಂದು ಶಂಕುವನ್ನು ಒಂದು ಅರ್ಧಗೋಳಾಕೃತಿಯ ಮೇಲೆ ಜೋಡಿಸಿ ಚಿತ್ರದಲ್ಲಿ ತೋರಿಸಿದಂತೆ ಒಂದು ಆಟಿಕೆಯನ್ನು ಮಾಡಲಾಗಿದೆ. ಪ್ರತಿ ಘನದ ತ್ರಿಜ್ಯವು 7/2 ಸೆಂ.ಮೀ. ಮತ್ತು ಶಂಕುವಿನ ಎತ್ತರವು 5 ಸೆಂ.ಮೀ. ಆದರೆ, ಆಟಿಕೆಯ ಘನಫಲವನ್ನು ಕಂಡುಹಿಡಿಯಿರಿ. ಎಂಬುದಾಗಿತ್ತು.
ಅಥವಾ
ಸಿಲಿಂಡರಿನ ಒಂದು ಬದಿ ಶಂಕು ಮತ್ತು ಮತ್ತೊಂದು ಬದಿಯಲ್ಲಿ ಅರ್ಧಗೋಳವನ್ನು ಜೋಡಿಸಿ, ಚಿತ್ರದಲ್ಲಿ ತೋರಿಸಿದಂತೆ ಒಂದು ಘನವನ್ನು ನಿರ್ಮಿಸಲಾಗಿದೆ. ಎಲ್ಲಾ ಘನಗಳ ಸಮನಾದ ತ್ರಿಜ್ಯ 7 ಸೆಂ.ಮೀ ಆಗಿದ್ದು, ಸಿಲಿಂಡರ್ ನ ಎತ್ತರವು ಶಂಕುವಿನ ಓರೆ ಎತ್ತರಕ್ಕೆ ಸಮವಾಗಿದೆ. ಶಂಕುವಿನ ಓರೆ ಎತ್ತರವು 4 ಸೆಂ.ಮೀ. ಆದರೆ, ಅದರ ಪೂರ್ಣ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ. ಎಂಬುದಾಗಿತ್ತು.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಪರೀಕ್ಷೆ: ಗಣಿತ ಪ್ರಶ್ನೆಪತ್ರಿಕೆ ವಿಶ್ಲೇಷಣೆ

ಪ್ರೌಢ ಶಿಕ್ಷಣ ಮಂಡಳಿಗೆ ವಿಚಾರ ತಿಳಿದಿಲ್ಲ

ಗಣಿತ ಪ್ರಶ್ನೆಪತ್ರಿಕೆಯಲ್ಲಿ ತಪ್ಪು ಪ್ರಶ್ನೆ ಮುದ್ರಣವಾಗಿರುವುದು ಪ್ರೌಢ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡುವ ಕುರಿತು ಮಂಡಳಿಯು ಯಾವುದೇ ಆದೇಶವನ್ನು ಈವರೆಗು ಹೊರಡಿಸಿಲ್ಲ.

English summary
SSLC examination Evaluators found question number 36 wrong in mathematics paper. students who tried to answer got 3 grace marks.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia