ಆರ್‌ಆರ್‌ಬಿ ಎಎಲ್ ಪಿ 2ನೇ ಸ್ಟೇಜ್ ಸಿಬಿಟಿ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

By Nishmitha Bekal

ಆರ್‌ಆರ್‌ಬಿ ಎಎಲ್ ಪಿ 2018 ಫಲಿತಾಂಶ ಪ್ರಕಟಗೊಂಡ ಬಳಿಕ ಇದೀಗ ರೈಲ್ವೇ ರಿಕ್ರ್ಯುಟ್ ಮೆಂಟ್ ಬೋರ್ಡ್ ಆರ್‌ಆರ್‌ಬಿ ಎಎಲ್ ಪಿ 2ನೇ ಸ್ಟೇಜ್ ಸಿಬಿಟಿ ಪರೀಕ್ಷೆಯ ಪ್ರವೇಶ ಪತ್ರವನ್ನ ಸದ್ಯದಲ್ಲೇ ರಿಲೀಸ್ ಮಾಡಲಿದೆ. ಎರಡನೇ ಸ್ಟೇಜ್ ಶಾರ್ಟ್ ಲಿಸ್ಟ್ ನಲ್ಲಿ ಯಾರೆಲ್ಲಾ ಅಭ್ಯರ್ಥಿಗಳ ಹೆಸರಿದೆಯೋ ಅವರೆಲ್ಲಾ ಆಫೀಶೀಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

 
ಆರ್‌ಆರ್‌ಬಿ ಎಎಲ್ ಪಿ 2ನೇ ಸ್ಟೇಜ್ ಸಿಬಿಟಿ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಆರ್‌ಆರ್‌ಬಿ ಎಎಲ್ ಪಿ 2ನೇ ಸ್ಟೇಜ್ ಸಿಬಿಟಿ ಪರೀಕ್ಷೆಯು ಡಿಸಂಬರ್ 12ರಿಂದ 14, 2018 ರ ಮಧ್ಯೆ ನಡೆಯಲಿದೆ. ಪರೀಕ್ಷೆ ದಿನಾಂಕದ ಸುಮಾರು ೧೦ ದಿನದ ಮುನ್ನ ಅಡ್ಮಿಟ್ ಕಾರ್ಡ್ ರಿಲೀಸ್ ಮಾಡಲಾಗುವುದು ಎಂದು ಪ್ರಕಟಣೆಯಿಂದ ತಿಳಿದುಬಂದಿದೆ. ಶಾರ್ಟ್ ಲಿಸ್ಟ್ ನಲ್ಲಿ ಹೆಸರಿರುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳತಕ್ಕದಾಗಿದೆ. ಪ್ರವೇಶ ಪತ್ರವನ್ನ ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ

<strong>More Read: OHPCL ನಲ್ಲಿ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ</strong>More Read: OHPCL ನಲ್ಲಿ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು:

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

  • ಸ್ಟೆಪ್ 1: ಆರ್ ಆರ್ ಬಿ ರೀಜಿನಲ್ ಬೋರ್ಡ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಆರ್‌ಆರ್‌ಬಿ ಎಎಲ್ ಪಿ 2ನೇ ಸ್ಟೇಜ್ ಪ್ರವೇಶ ಪತ್ರ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಹೊಸ ಪೇಜ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 4: ರೋಲ್ ನಂಬರ್ ಹಾಗೂ ಪಾಸ್‌ವರ್ಡ್ ನಮೂದಿಸಿ
  • ಸ್ಟೆಪ್ 5: ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

More Read: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಎಕ್ಸ್‌ಕ್ಯುಟೀವ್ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಟೆಕ್ನಿಶಿಯನ್ಸ್ ಮತ್ತು ಅಸಿಸ್ಟೆಂಟ್ ಲೋಕೋ ಪೈಲಟ್ಸ್ ಹುದ್ದೆಗೆ ಆರ್‌ಆರ್‌ಬಿ ಎಎಲ್ ಪಿ ೨ನೇ ಸ್ಟೇಜ್ ಸಿಬಿಟಿ ಪರೀಕ್ಷೆ ನಡೆಯಲಿದ್ದು, ಒಟ್ಟು 64,371 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸಿಬಿಟಿ ಫಸ್ಟ್ ಸ್ಟೇಜ್ ಪರೀಕ್ಷೆಯು ಆಗಸ್ಟ್ ಮತ್ತು ಸೆಪ್ಟಂಬಂರ್ ತಿಂಗಳಲ್ಲಿ ನಡೆದಿತ್ತು. ಮೊದಲ ಸ್ಟೇಜ್ ಪರೀಕ್ಷೆಯಲ್ಲಿ ಸುಮಾರು 36 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸುಮಾರು 5.8 ಲಕ್ಷ ವಿದ್ಯಾರ್ಥಿಗಳು ಆರ್‌ಆರ್‌ಬಿ ಎಎಲ್ ಪಿ 2ನೇ ಸ್ಟೇಜ್ ಸಿಬಿಟಿ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
After releasing the RRB ALP result 2018 on November 2, the Railway Recruitment Board (RRB) is all set to release the admit card for the RRB ALP 2nd stage CBT exam. Candidates who are shortlisted for the second stage of CBT can visit the official website of the regional websites to download their admit cards.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X