ಕುವೆಂಪು ಡೂಡಲ್ ಹಿಂದಿದೆ ಕೊಲ್ಕತ್ತ ಕಲಾವಿದನ ಕೈಚಳಕ

Posted By:

ಇಂದು ರಾಷ್ಟ್ರಕವಿ ಕುವೆಂಪು 113ನೇ ಜನ್ಮದಿನವನ್ನು ವಿಶ್ವವೇ ಆಚರಿಸುತ್ತಿದೆ. ಕನ್ನಡದ ಮನೆ ಮನಗಳಲ್ಲಿ ಸಾಹಿತ್ಯದ ಮೂಲಕ ನೆಲೆಸಿರುವ ಕುವೆಂಪು ಅವರನ್ನು ಗೂಗಲ್ ಸ್ಮರಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆ. ಈ ಹಿಂದೆ ಡಾ. ರಾಜಕುಮಾರ್ ಅವರನ್ನು ಡೂಡಲ್ ನಲ್ಲಿ ಕಂಡು ಖುಷಿ ಪಟ್ಟಿದ್ದ ಕನ್ನಡಿಗರು ಈಗ ರಸಋಷಿಯನ್ನು ಕಂಡು ನಮಿಸಿದ್ದರೆ.

ಕುವೆಂಪು ಎಂದರೆ ಗೂಗಲ್ ಕೂಡ ತಲೆಬಾಗುತ್ತದೆ

ಗೂಗಲ್ ಡೂಡಲ್ ಅಂಗಳದಲ್ಲಿ ಕುವೆಂಪು ಜೊತೆಗೆ ಕನ್ನಡದ ಕಂಪು ಹರಡಲು ಕಾರಣ ಕೊಲ್ಕತ್ತದ ಕಲಾವಿದ ಉಪಮಾನ್ಯು ಭಟ್ಟಾಚಾರ್ಯ. ಇದರ ಬಗ್ಗೆ ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕುವೆಂಪು ಡೂಡಲ್

ಡೂಡಲ್ ವಿಶೇಷ

ಮಲೆನಾಡಿನ ಹಚ್ಚಹಸಿರು ತಾಣ, ಕವಿಶೈಲ ಬಂಡೆಯ ಮೇಲೆ ಕುಳಿತಿರುವ ಕುವೆಂಪು ಅವರು ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಚಿತ್ರದ ಹಿಂಬದಿ ಕನ್ನಡದಲ್ಲಿ ಗೂಗಲ್‌ ಎಂದು ಬರೆಯಲಾಗಿದೆ.

ಗೂಗಲ್ ಸಂಸ್ಥೆಯು ಕೊಲ್ಕತ್ತದ ಉಪಮಾನ್ಯು ಅವರಿಗೆ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಡೂಡಲ್ ರಚಿಸುವಂತೆ ಮನವಿ ಮಾಡಿತ್ತು.

ಕೊಲ್ಕತ್ತದ ಕಲಾವಿದ ಉಪಮಾನ್ಯು ಭಟ್ಟಾಚಾರ್ಯ ಅವರು ರಾಷ್ಟ್ರಕವಿ ಕುವೆಂಪು ಅವರ ಗೂಗಲ್ ಡೂಡಲ್ ನ್ನು ರಚಿಸಿದ್ದಾರೆ. ಇನ್ನು ಹಿಂಬದಿಯ ಕನ್ನಡ ಅಕ್ಷರಗಳನ್ನು ರಚಿಸಿರುವುದು ಸ್ವಾತಿ ಶೇಲಾರ್.

ಕುವೆಂಪು ಡೂಡಲ್

ಕುವೆಂಪು ಸಾಹಿತ್ಯದಲ್ಲಿ ಮಲೆನಾಡಿನ ಚಿತ್ರಣ ಹೆಚ್ಚು ಕಂಡುಬರುವುದರಿಂದ ಅದನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಕನ್ನಡ ಅಕ್ಷರಗಳಂತೆ ಕಂಡರೂ ಅಲ್ಲಿ ಇಂಗ್ಲಿಷ್ ಇದೆ. ಸೂಕ್ಷ್ಮವಾಗಿ ನೋಡಿದರೆ 'ಗೂಗಲ್ ಮತ್ತು google' ಒಂದೇ ಪದದಲ್ಲಿ ಗೋಚರಿಸುತ್ತದೆ.

ಡೂಡಲ್ ಹಿನ್ನೆಲೆ

ಗೂಗಲ್ ಡೂಡಲ್ ರಜಾದಿನಗಳು, ಘಟನೆಗಳು, ಸಾಧನೆಗಳು ಮತ್ತು ಜನರನ್ನು ಆಚರಿಸಲು ಉದ್ದೇಶಿಸಿರುವ ಗೂಗಲ್ ನ ಮುಖಪುಟದಲ್ಲಿ ಲೋಗೋದ ವಿಶೇಷ, ತಾತ್ಕಾಲಿಕ ಬದಲಾವಣೆಯಾಗಿದೆ.ಸರ್ವರ್ಗಳು ಕುಸಿದಲ್ಲಿ ಅವರ ಅನುಪಸ್ಥಿತಿಯಲ್ಲಿ ಬಳಕೆದಾರರಿಗೆ ತಿಳಿಸಲು ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ವಿನ್ಯಾಸಗೊಳಿಸಿದರು.1998 ರಲ್ಲಿ ಬರ್ನಿಂಗ್ ಮ್ಯಾನ್ ಫೆಸ್ಟಿವಲ್ನ ಗೌರವಾರ್ಥವಾಗಿ ಮೊದಲ ಗೂಗಲ್ ಡೂಡಲ್ ರಚಿಸಲಾಯಿತು.

ಡೂಡಲ್ ತಂಡ

'ಡೂಡ್ಲರ್ಸ್' ಎಂದು ಕರೆಯಲ್ಪಡುವ ನೌಕರರ ತಂಡವು ಡೂಡಲ್ಗಳನ್ನು ಸಂಘಟಿಸಿ ಪ್ರಕಟಿಸುತ್ತದೆ. ಈ ತಂಡವು ಮುಂಚಿತವಾಗಿಯೇ ಯಾವ ಯಾವ ವಿಶೇಷ ದಿನಗಳಿವೆ ಎಂಬ ಮಾಹಿತಿಯನ್ನು ಕಲೆ ಹಾಕಿ ಅದಕ್ಕೆ ತಕ್ಕ ಡೂಡಲ್ ಅನ್ನು ವಿನ್ಯಾಸಕರಿಂದ ಸಿದ್ಧಪಡಿಸುತ್ತದೆ.

ಡೂಡಲ್ ಆಯ್ಕೆ ಹೇಗೆ?

ಸಾಮಾನ್ಯವಾಗಿ ಗೂಗಲ್ ಮೂಲಕ ಆಯಾ ತಿಂಗಳಿನಲ್ಲಿ ಏನೇನು ವಿಶೇಷತೆ ಇದೆ ಹುಡುಕಲಾಗುತ್ತದೆ. ಅತೀ ಹೆಚ್ಚು ಹುಡುಕಲ್ಪಟ್ಟ ವ್ಯಕಿಗಳು, ವಿಷಯಗಳು ಮತ್ತು ಅಪರೂಪದ ಮಾಹಿತಿಗಳ ಬಗ್ಗೆ ಗಮನ ಹರಿಸಿ ಅಂತಹುದನ್ನು ಡೂಡಲ್ ನಲ್ಲಿ ಪ್ರಕಟಿಸಲಾಗುತ್ತದೆ.

English summary
Kuvempu's writings reflected the wonders of the natural world, which is why, when illustrator Upamanyu Bhattacharyya and letterer Swati Shelar were working on the doodle, they chose to portray him surrounded by nature

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia