ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಬದಲು

ಶಿಕ್ಷಕರ ಹುದ್ದೆಗೆ ಒಟ್ಟು 4 ಪ್ರಶ್ನೆ ಪತ್ರಿಕೆಗಳಿಗೆ ಇದೇ ನವೆಂಬರ್ 4ರಿಂದ ನಡೆಯಬೇಕಿದ್ದ ಪರೀಕ್ಷೆಗಳು ನವೆಂಬರ್ 11ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬದಲಾವಣೆಯಾಗಿದೆ.

ಶಿಕ್ಷಕರ ಹುದ್ದೆಗೆ ಒಟ್ಟು 4 ಪ್ರಶ್ನೆ ಪತ್ರಿಕೆಗಳಿಗೆ ಇದೇ ನವೆಂಬರ್ 4ರಿಂದ ನಡೆಯಬೇಕಿದ್ದ ಪರೀಕ್ಷೆಗಳು ನವೆಂಬರ್ 11ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಬದಲು

ಈಗಾಗಲೇ ನಿಗದಿ ಪಡಿಸಿರುವ ಆಯಾ ಜಿಲ್ಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ದಿನಾಂಕ ಈ ಕೆಳಗಿನಂತಿದೆ.

ಪರಿಷ್ಕೃತ ವೇಳಾಪಟ್ಟಿ

  • ನವೆಂಬರ್ 11 ಮತ್ತು 12ರಂದು ಮೊದಲ ಪತ್ರಿಕೆ.
  • ನವೆಂಬರ್ 18 ಮತ್ತು 19ರಂದು 2ನೇ ಪತ್ರಿಕೆ.
  • ನವೆಂಬರ್ 25 ಮತ್ತು 26ರಂದು 3ನೇ ಪತ್ರಿಕೆ.
  • ಡಿಸೆಂಬರ್ 9 ಮತ್ತು 10ರಂದು 4ನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಬದಲು

ರಾಜ್ಯದ 25 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುವುದು.(ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಿಂದಲೂ ಸಹ ಅಭ್ಯರ್ಥಿಗಳು ಭಾಗವಹಿಸಬಹುದು).

ಎಲ್ಲ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಅಂದರೆ, ಭಾಷೆ-ಆಂಗ್ಲ ವಿಷಯದ ಹುದ್ದೆಗೆ ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ವಿಷಯಗಳ ಹುದ್ದೆಗಳಿಗೆ ಪೇಪರ್-1, ಪೇಪರ್-2 ಮತ್ತು ಪೇಪರ್-3 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ವೇಳಾ ಪಟ್ಟಿ ಬದಲಾವಣೆಯಾದ ಬಗ್ಗೆ ಇಲಾಖೆಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಇದನ್ನು ಗಮನಿಸಿ: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪ್ರಶ್ನೆಪ್ರತ್ರಿಕೆ ಮತ್ತು ಅಂಕಗಳ ವಿವರ

For Quick Alerts
ALLOW NOTIFICATIONS  
For Daily Alerts

English summary
Karnataka public education department as postponed ten thousand teachers posts examination date. The Exam will start from November 11th,2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X