ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಒಟ್ಟು 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 998 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಪರೀಕ್ಷೆ ಮೊದಲ ದಿನವಾದ ಇಂದು ಜೀವಶಾಸ್ತ್ರ ಮತ್ತು ಇತಿಹಾಸ ಪರೀಕ್ಷೆಗಳು ನಡೆಯಲಿವೆ.

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿಯ ಪರೀಕ್ಷೆಗಳು ಇಂದಿನಿಂದ ರಾಜ್ಯಾದ್ಯಂತ ಪ್ರಾರಂಭವಾಗಿವೆ.

ಒಟ್ಟು 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 998 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಪರೀಕ್ಷೆ ಮೊದಲ ದಿನವಾದ ಇಂದು ಜೀವಶಾಸ್ತ್ರ ಮತ್ತು ಇತಿಹಾಸ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10:15 ಕ್ಕೆ ಪರೀಕ್ಷೆ ಶುರುವಾಗಲಿದ್ದು ಮಧ್ಯಾಹ್ನ 1:30 ರವರೆಗೂ ನಡೆಯಲಿದೆ.

ಬಿಗಿ ಭದ್ರತೆ ನಡುವೆ ಪಿಯು ಪರೀಕ್ಷೆ

ಈ ಬಾರಿ ಪರೀಕ್ಷೆಗಳನ್ನು ಭಾರಿ ಬಿಗಿ ನಡುವೆ ನಡೆಸಲಾಗುತ್ತಿದೆ. ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿತ್ತು. ಪ್ರಶ್ನೆ ಪತ್ರಿಕೆಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ, ಪ್ರತಿ ಜಿಲ್ಲಾ ಖಜಾನೆಗಳಲ್ಲಿ ಮಾತ್ರ ಪ್ರಶ್ನೆಪತ್ರಿಕೆಗಳನ್ನು ಇಡಲು ನಿರ್ಧರಿಸಲಾಗಿದ್ದು, ಈಗಾಗಲೇ ಪ್ರಶ್ನೆಪತ್ರಿಕೆಗಳು ಖಜಾನೆಯಲ್ಲಿ ಭದ್ರವಾಗಿವೆ. ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ, ಬಾರ್‌ಕೋಡಿಂಗ್‌, ಬಯೊಮೆಟ್ರಿಕ್‌ ಪ್ರವೇಶ ಸೇರಿದಂತೆ ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದ್ವಿತೀಯ ಪಿಯುಸಿ  ಪರೀಕ್ಷೆ

ಪರೀಕ್ಷೆ ಬರೆಯುವ ಅಭ್ಯರ್ಥಿಗಳು

ಬಾಲಕರು -3,48,562
ಬಾಲಕಿಯರು - 3,35,909
ತೃತೀಯ ಲಿಂಗಿಗಳು - 19

ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ವಿವರ

ಹೊಸಬರು -5,48,933
ಹಳಬರು- 1,05,299
ಖಾಸಗಿ ಅಭ್ಯರ್ಥಿಗಳು -30,258
ಒಟ್ಟು- 6,84,247

ಪರೀಕ್ಷಾ ಕೇಂದ್ರಗಳು
ಸಾಮಾನ್ಯ - 857
ಸೂಕ್ಷ್ಮ - 103
ಅತೀ ಸೂಕ್ಷ್ಮ -38
ಒಟ್ಟು - 998 ಪರೀಕ್ಷಾ ಕೇಂದ್ರಗಳು

ವಿಶೇಷ ಕ್ರಮಗಳು

  • ಪರೀಕ್ಷಾ ಸಮಯದಲ್ಲಿ ನಕಲು ಮಾಡಿದರೆ 3 ವರ್ಷ ಪರೀಕ್ಷೆ ಬ್ಯಾನ್.
  • ಪರೀಕ್ಷಾ ಅಕ್ರಮಗಳಿಗೆ ಪ್ರೋತ್ಸಾಹ ನೀಡುವಂತಹ ಖಾಸಗಿ ಕಾಲೇಜುಗಳ ಮಾನ್ಯತೆಯನ್ನು ಮೂರು ವರ್ಷ ಹಿಂದಕ್ಕೆ ಪಡೆಯಲಾಗುತ್ತದೆ.
  • ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ದಂಡ ಇತ್ಯಾದಿ ಅಂಶಗಳು ಸರ್ಕಾರದ ಚಿಂತನೆಯಲ್ಲಿವೆ.
  • ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ, ಪರೀಕ್ಷಾ ಅವಧಿ ವರೆಗೆ ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿಯಲ್ಲಿರುವ ಜೆರಾಕ್ಸ್‌ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಿದೆ.

ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಆತಂಕ ಬೇಡ !

2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ

For Quick Alerts
ALLOW NOTIFICATIONS  
For Daily Alerts

English summary
The exams for students of class 12 will begin from March 9, 2017 and carry on till March 27, 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X