ಶಾದಿ ಶಗುನ್: ಮುಸ್ಲಿಂ ಮಹಿಳಾ ಪದವೀಧರರಿಗೆ 51000 ರೂ. ನಗದು ಬಹುಮಾನ

Posted By:

ತ್ರಿವಳಿ ತಲಾಕ್ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ಭಾರಿ ಕೊಡುಗೆ ನೀಡಿದ್ದ ಕೇಂದ್ರ ಸರ್ಕಾರ ಈಗ ಮುಸ್ಲಿಂ ಮಹಿಳೆಯರಿಗೆ ಮತ್ತೊಂದು ಕೊಡುಗೆ ನೀಡಿದೆ.

ಇದನ್ನು ಗಮನಿಸಿ: ದೇಶದ 20 ವಿಶ್ವವಿದ್ಯಾಲಯಗಳಿಗೆ 10 ಸಾವಿರ ಕೋಟಿ ಅನುದಾನ

ಅಲ್ಪಸಂಖ್ಯಾತರನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿವಾಹಕ್ಕೆ ಮುನ್ನ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸುವ ಮುಸ್ಲಿಂ ಯುವತಿಯರಿಗೆ 51,000 ರೂ. ನಗದು ಬಹುಮಾನ ನೀಡಲು ಮುಂದಾಗಿದೆ.

ಮುಸ್ಲಿಂ ಯುವತಿಯರಿಗೆ 51,000 ರೂ. ನಗದು ಬಹುಮಾನ

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಧೀನ ಸಂಸ್ಥೆ ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್ ಶೈಕ್ಷ ಣಿಕ ಅನುಕೂಲಕ್ಕಾಗಿ 'ಶಾದಿ ಶಗುನ್' ಯೋಜನೆ ಜಾರಿಗೆ ಮುಂದಾಗಿದೆ. ಮುಸ್ಲಿಂ ಯುವತಿಯರ ವಿಶ್ವವಿದ್ಯಾಲಯ ಹಂತದ ಉನ್ನತ ವಿದ್ಯಾಭ್ಯಾಸ ಪೂರ್ಣಗೊಳಿಸಲು ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇದನ್ನು ಗಮನಿಸಿ: ಒಂದರಿಂದ ಹತ್ತನೇ ತರಗತಿವರೆಗೂ ಕಡ್ಡಾಯ ಕನ್ನಡ

ಮೌಲಾನಾ ಆಜಾದ್‌ ಶಿಕ್ಷಣ ಪ್ರತಿಷ್ಠಾನವು ಇಂಥದ್ದೊಂದು ಪ್ರಸ್ತಾವವನ್ನು ಕಳೆದ ಜುಲೈನಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರ ಮುಂದಿರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಪಸಂಖ್ಯಾತ ಸಚಿವಾಲಯ ಈ ಯೋಜನೆಗೆ ಅನುಮೋದನೆ ನೀಡಿದೆ.

'ಶಾದಿ ಶಗುನ್‌' ಹೆಸರಿನ ಯೋಜನೆ ಮೂಲಕ ವಿವಾಹಕ್ಕೆ ಮುನ್ನ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸುವ ಮುಸ್ಲಿಂ ಯುವತಿಯರು ಕೇಂದ್ರ ಸರಕಾರದಿಂದ 51,000 ರೂ. ನಗದು ಬಹುಮಾನ ಪಡೆಯಲಿದ್ದಾರೆ. ಅಲ್ಲದೆ ಮೌಲಾನಾ ಆಜಾದ್‌ ಪ್ರತಿಷ್ಠಾನ ನೀಡುವ ಬೇಗಮ್‌ ಹಜ್ರತ್‌ ಮಹಲ್‌ ವಿದ್ಯಾರ್ಥಿವೇತನ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿನಿಯರೂ ಈ ನೂತನ ಯೋಜನೆಗೆ ಅರ್ಹರಾಗಿರುತ್ತಾರೆ.

ಈ ಯೋಜನೆಯ ಅರ್ಹತೆಯ ಮಾನದಂಡಗಳನ್ನು ತಿಳಿಸುವ ವೆಬ್‌ ತಾಣವನ್ನೂ ಪ್ರತಿಷ್ಠಾನವು ಸಿದ್ಧಪಡಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಸಾರ್ವಜನಿಕರು ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.

English summary
Meritorious Muslim girls who complete their graduation before marriage would get Rs 51,000 from the ruling Bharatiya Janata Party (BJP) at Centre under the Shaadi Shagun scheme.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia