ನೇಪಾಳಿ ಭಾಷೆ ಸೇರಲಿರುವ ಕನ್ನಡದ 50 ಕವನಗಳು

Posted By:

ಕನ್ನಡದ ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರ ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ನಿರ್ಧರಿಸಿದೆ. ನೇಪಾಳದ ಸಾಂಸ್ಕೃತಿಕ ಸಂಘದ ಮನವಿಯಂತೆ ಕನ್ನಡದ 50 ಕವನಗಳನ್ನು ಭಾಷಾಂತರ ಮಾಡುವುದಾಗಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದ್ದಾರೆ.

ಜರ್ಮನ್ ಬಿ-ಸ್ಕೂಲ್ ಜೊತೆ ಕೈಜೋಡಿಸಿದ ಬೆಂಗಳೂರು ಐಐಎಂ

ದ.ರಾ. ಬೇಂದ್ರೆ, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗರು ಸೇರಿದಂತೆ ಕನ್ನಡದ 50 ಮಂದಿ ಸಾಹಿತಿಗಳ ಕವನಗಳನ್ನು ನೇಪಾಳಿ ಭಾಷೆಗೆ ಭಾಷಾಂತರಿಸಲಾಗುವುದು.

ನೇಪಾಳಿ ಭಾಷೆಗೆ ಕನ್ನಡದ ಕವನಗಳು

ನೇಪಾಳಿ ಸಾಂಸ್ಕೃತಿಕ ಸಂಘವು ಈ ಅನುವಾದ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಇಂಗ್ಲಿಷ್‌ಗೆ ಭಾಷಾಂತರ ಆಗಿರುವ ಕವನಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇಂಗ್ಲಿಷ್‌ನಿಂದ ನೇಪಾಳಿ ಭಾಷೆಗೆ ಕವನಗಳು ಭಾಷಾಂತರವಾಗಲಿವೆ. ಅದೇ ಮಾದರಿಯಲ್ಲಿ ನೇಪಾಳಿ ಸಾಹಿತಿಗಳ 50 ಕವನಗಳನ್ನು ಇಂಗ್ಲಿಷ್ ಮೂಲಕ ಕನ್ನಡಕ್ಕೆ ಅನುವಾದಿಸಲಾಗುವುದು.

ಮೊದಲ ಹಂತದಲ್ಲಿ ಕವನಗಳನ್ನು ಭಾಷಾಂತರಿಸಲಾಗುತ್ತಿದ್ದು ಮುಂದಿನ ಹಂತದಲ್ಲಿ ಕತೆಗಳನ್ನು ನೇಪಾಳಿ ಭಾಷೆಗೆ ಅನುವಾದ ಮಾಡುವ ಕಾರ್ಯ ನಡೆಯಲಿದೆ. ಮುಂದಿನ ಮಾರ್ಚ್‌ ವೇಳೆಗೆ ಈ ಅನುವಾದ ಕಾರ್ಯ ಮುಕ್ತಾಯವಾಗಲಿದೆ' ಎಂದು ಅವರು ಹೇಳಿದರು

ಇತರ ದೇಶದ ಭಾಷೆಗಳ ಸಂಘಟನೆಗಳು ಮುಂದಾದಲ್ಲಿ ಕನ್ನಡದ ಸಾಹಿತ್ಯವನ್ನು ಇತರ ಭಾಷೆಗೆ ಪರಿಚಯಿಸಲು ಕನ್ನಡ ಸಾಹಿತ್ಯ ಪರಿಷತ್‌ ಉತ್ಸುಕವಾಗಿದೆ ಎಂದು ಅವರು ವಿವರಿಸಿದರು.

English summary
Kannada poetry, including Bendre, Ananthamurthy and Gopalakrishna Adiga will be translated into Nepali language, said Kannada Sahitya Parishat president Manu Baligaar.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia