ವಿಶ್ವವಿದ್ಯಾಲಯ ನೇಮಕಾತಿಗೆ ಹೊಸ ನೀತಿ: ಕುಸಿಯಲಿದೆ ಮೀಸಲಾತಿ ಪ್ರಮಾಣ

ರಾಷ್ಟ್ರದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕ ವರ್ಗ ನೇಮಕಾತಿಯ ಮೀಸಲು ನಿರ್ಣಯಕ್ಕೆ ಯುಜಿಸಿ ಹೊಸ ಸೂತ್ರ ರೂಪಿಸಿದ್ದು, ಈ ನಿಯಮಕ್ಕೆ ಅನುಮೋದನೆ ದೊರೆತರೆ ಬೋಧಕ ಹುದ್ದೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವರ್ಗದವರ ಮೀಸಲು ಪ್ರಮಾಣ ಕುಸಿಯಲಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಯು ವಿಶ್ವವಿದ್ಯಾಲಯಗಳ ಬೋಧಕ ಹುದ್ದೆಗಳ ನೇಮಕಾತಿಗೆ ಹೊಸ ನಿಯಮ ರೂಪಿಸಲು ಮುಂದಾಗಿದೆ.

ರಾಷ್ಟ್ರದ ಎಲ್ಲ ವಿಶ್ವವಿದ್ಯಾಲಯಗಳ ಬೋಧಕ ವರ್ಗ ನೇಮಕಾತಿಯ ಮೀಸಲು ನಿರ್ಣಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊಸ ಸೂತ್ರ ರೂಪಿಸಿದ್ದು, ಈ ನಿಯಮಕ್ಕೆ ಅನುಮೋದನೆ ದೊರೆತರೆ ಬೋಧಕ ಹುದ್ದೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವರ್ಗದವರ ಮೀಸಲು ಪ್ರಮಾಣ ಕುಸಿಯಲಿದೆ.

ಇದನ್ನು ಗಮನಿಸಿ: ಶೇ.34 ರಷ್ಟು ಮಹಿಳೆಯರು ಮಾತ್ರ ಭಾರತದ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

ವಿಶ್ವವಿದ್ಯಾಲಯ ನೇಮಕಾತಿಗೆ ಯುಜಿಸಿ ಹೊಸ ನೀತಿ

ಅಲಹಾಬಾದ್ ಹೈಕೋರ್ಟ್ ತೀರ್ಪು ಸೇರಿ 10 ಕೋರ್ಟ್ ತೀರ್ಪಗಳ ಆಧಾರದಲ್ಲಿ ರೂಪಿತವಾಗಿದೆ ಈ ಸೂತ್ರ. ಸದ್ಯ ಇದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಪರಿಶೀಲನೆ ಯಲ್ಲಿದೆ.

ರಾಷ್ಟ್ರಾದ್ಯಂತ ಯುಜಿಸಿ ಅನುದಾನಿತ 41 ಕೇಂದ್ರೀಯ ವಿವಿಗಳಿವೆ. ಅವುಗಳಲ್ಲಿ ಒಟ್ಟು 17,106 ಬೋಧಕ ಹುದ್ದೆಗಳಿದ್ದು, ಒಟ್ಟು 5,997 ಹುದ್ದೆಗಳು ಖಾಲಿ ಇವೆ. 2,457 ಅಸಿಸ್ಟೆಂಟ್ ಪ್ರೊಫೆಸರ್, 2,217 ಅಸೋಸಿಯೇಟ್ ಪ್ರೊಫೆಸರ್ ಮತ್ತು 1,098 ಪ್ರೊಫೆಸರ್ ಹುದ್ದೆಗಳು ಇದರಲ್ಲಿ ಸೇರಿವೆ. ಹೊಸ ಸೂತ್ರದನ್ವಯ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿದರೆ, ಒಬಿಸಿ ಅಭ್ಯರ್ಥಿಗಳಿಗೆ ಬೆರಳೆಣಿಕೆಯಷ್ಟು ಹುದ್ದೆಗಳು ಮಾತ್ರ ಲಭಿಸುತ್ತವೆ ಎಂದು ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಪಿ.ಎಸ್. ಕೃಷ್ಣನ್ ಆತಂಕ ವ್ಯಕ್ತಪಡಿಸಿದ್ದಾರೆ.

ಹೊಸ ನಿಯಮಕ್ಕೆ ಕಾರಣ

ಬನಾರಸ್ ಹಿಂದು ವಿಶ್ವವಿದ್ಯಾಲಯದ ಬೋಧಕರ ನೇಮಕಾತಿ ಪ್ರಕ್ರಿಯೆ ಕುರಿತು ಅಲಹಾಬಾದ್ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ವಿವಿಯನ್ನು ಒಂದು ಘಟಕವಾಗಿ, ಒಟ್ಟು ಬೋಧಕ ಹುದ್ದೆಗಳನ್ನು ಪರಿಗಣಿಸಿ ಒಬಿಸಿಗಳಿಗೆ ಮೀಸಲಾತಿ ನಿರ್ಧರಿಸುವುದರಿಂದ, ಯಾವುದಾದರೂ ಒಂದು ವಿಭಾಗದಲ್ಲಿ ಕೇವಲ ಒಬಿಸಿ ಅಭ್ಯರ್ಥಿಗಳು ಮತ್ತೊಂದು ವಿಭಾಗದಲ್ಲಿ ಕೇವಲ ಸಾಮಾನ್ಯ ವರ್ಗದ ಬೋಧಕರು ಇರುವಂತೆ ಆಗುತ್ತದೆ. ಸಮಾನ ಅವಕಾಶ ಕಲ್ಪಿಸುವ ಭಾರತೀಯ ಸಂವಿಧಾನದ ವಿಧಿ 14 ಮತ್ತು 16 ನೇರ ಉಲ್ಲಂಘನೆಯಾಗುತ್ತದೆ. ಆದ್ದರಿಂದ, ವಿವಿಯ ಒಟ್ಟಾರೆ ಹುದ್ದೆಗಳ ಬದಲು ವಿಭಾಗವಾರು ಹುದ್ದೆಗಳನ್ನು ಆಧರಿಸಿ ಬೋಧಕರ ನೇಮಕಾತಿಗೆ ಮೀಸಲಾತಿ ನಿರ್ಧರಿಸುವುದು ಸೂಕ್ತ ಎಂದು ನ್ಯಾಯಪೀಠ ಹೇಳಿತ್ತು.

For Quick Alerts
ALLOW NOTIFICATIONS  
For Daily Alerts

English summary
The University Grants Commission (UGC) has reportedly yet again made a controversial decision on faculty reservations that could reduce the number of SC, ST and OBC teaching positions.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X