ಬಜೆಟ್ 2018: 50 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ

ಕೇಂದ್ರ ಆಯವ್ಯಯದಲ್ಲಿ ಹೆದ್ದಾರಿ ನಿರ್ಮಾಣ, ಶೌಚಾಲಯ, ಗ್ರಾಮೀಣ ವಸತಿ, ಗ್ರಾಮೀಣ ರಸ್ತೆ, ಮೆಗಾ ಫುಡ್‌ ಪಾರ್ಕ್‌ ಇತ್ಯಾದಿ ಹಲವು ಯೋಜನೆಗಳಿದ್ದು, ಇವುಗಳಿಗೆ ಸಂಬಂಧಿಸಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಕೇಂದ್ರ ಸರಕಾರ ಮಂಡಿಸಿದ 2018-19 ಸಾಲಿನ ಬಜೆಟ್ ನಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಭಾರತೀಯ ರೈಲ್ವೆ: 26502 ಹುದ್ದೆಗಳ ನೇಮಕಾತಿಭಾರತೀಯ ರೈಲ್ವೆ: 26502 ಹುದ್ದೆಗಳ ನೇಮಕಾತಿ

ಸರಕಾರದ ಮೂಲ ಸೌಕರ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಹಲವು ಯೋಜನೆಗಳಲ್ಲಿ ವರ್ಷಕ್ಕೆ ಅಂದಾಜು 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 407 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ

ಬಜೆಟ್ 2018

ಫೆ.1ರಂದು ಮಂಡಿಸಿರುವ ಬಜೆಟ್‌ನಲ್ಲಿ ಇದೇ ಮೊದಲ ಬಾರಿಗೆ ನಾನಾ ಯೋಜನೆಗಳ ಜಾರಿಗೆ ಬೇಕಾಗುವ ಉದ್ಯೋಗಿಗಳು ಹಾಗೂ ಮಾನವ ದಿನಗಳ ಸಂಖ್ಯೆಯನ್ನು ತಿಳಿಸಲಾಗಿದೆ.
ಬಜೆಟ್ 2018: ಡಿಜಿಟಲ್ ಶಿಕ್ಷಣದತ್ತ ಕೇಂದ್ರದ ಚಿತ್ತ

ಕೇಂದ್ರ ಆಯವ್ಯಯದಲ್ಲಿ ಹೆದ್ದಾರಿ ನಿರ್ಮಾಣ, ಶೌಚಾಲಯ, ಗ್ರಾಮೀಣ ವಸತಿ, ಗ್ರಾಮೀಣ ರಸ್ತೆ, ಮೆಗಾ ಫುಡ್‌ ಪಾರ್ಕ್‌ ಇತ್ಯಾದಿ ಹಲವು ಯೋಜನೆಗಳಿದ್ದು, ಇವುಗಳಿಗೆ ಸಂಬಂಧಿಸಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಸ್ವಚ್ಛ ಭಾರತ ಯೋಜನೆಯಡಿಯಲ್ಲಿ 2 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣವಾಗಲಿದ್ದು, ಇದಕ್ಕೆ 16.92 ಕೋಟಿ ಮಾನವ ದಿನಗಳ ಅಗತ್ಯ ಇದೆ. 51 ಲಕ್ಷ ಗ್ರಾಮೀಣ ಮನೆಗಳ ನಿರ್ಮಾಣಕ್ಕೆ 46.55 ಕೋಟಿ ಮಾನವ ದಿನಗಳ ಅಗತ್ಯ ಇದೆ. ಗ್ರಾಮೀಣ ರಸ್ತೆ ಯೋಜನೆ ಜಾರಿಗೆ 28.35 ಕೋಟಿ ಮಾನವ ದಿನಗಳ ಅನಿವಾರ್ಯತೆ ಇದೆ.

ಇದರ ಜೊತೆಯಲ್ಲಿ ನರೇಗಾ ಯೋಜನೆ ಮತ್ತು ಮೆಗಾಫುಡ್‌ಪಾರ್ಕ್ ಯೋಜನೆಗಳು ಸಹ ಸುಮಾರು ಒಂದು ಲಕ್ಷ ಉದ್ಯೋಗವನ್ನು ಸೃಷ್ಟಿಸಲಿವೆ.ಸರಣಿ ಶೀಥಲೀಕರಣ ನಿರ್ಮಾಣ, ವಿಸ್ತೃತ ಪ್ರಧಾನಮಂತ್ರಿ ರೋಜ್‌ಗಾರ್‌ ಮತ್ತಿತರ ಯೋಜನೆಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ.

ಸರಕಾರ ಪ್ರತಿ ವಬರ್ಷ ಕೊನೆಯಲ್ಲಿ ತನ್ನ ನಾನಾ ಯೋಜನೆಗಳಡಿಯಲ್ಲಿ ಎಷ್ಟು ಜನರಿಗೆ ಉದ್ಯೋಗ ಲಭಿಸಿತು ಎಂಬುದನ್ನು ಬಹಿರಂಗಪಡಿಸಲಿದೆ. ಇದರಿಂದ ಉದ್ಯೋಗ ಸೃಷ್ಟಿಯಲ್ಲಿ ಸರಕಾರ ವಹಿಸಿರುವ ಪಾತ್ರದ ಬಗ್ಗೆ ಜನ ಜಾಗೃತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ತೃತ ಪ್ರಧಾನಮಂತ್ರಿ ರೋಜ್‌ಗಾರ್‌ ಯೋಜನೆಯಡಿಯಲ್ಲಿ ವಾರ್ಷಿಕ ಸುಮಾರು 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಎಲ್ಲವನ್ನೂ ಸೇರಿಸಿದರೆ ಒಟ್ಟು 50 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿ ತಿಳಿಸಿದೆ.

For Quick Alerts
ALLOW NOTIFICATIONS  
For Daily Alerts

English summary
The budget presented by the central government will provide the largest gift to the people of the country. Budget Data Analysis has shown that at least 50 lakh jobs per year can be created with public infrastructure projects and social welfare schemes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X