ಇಂದು ವಿಟಿಯು ಏಳನೇ ಸೆಮಿಸ್ಟರ್ ರಿಸಲ್ಟ್ ಪ್ರಕಟಗೊಳ್ಳುವ ಸಾಧ್ಯತೆ

Posted By:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 7ನೇ ಸೆಮಿಸ್ಟರ್ ಫಲಿತಾಂಶ ಗುರುವಾರ ವೆಬ್ಸೈಟ್ ನಲ್ಲಿ ಪ್ರಕಟವಾಗಲಿದೆ ಎಂದು ಮೌಲ್ಯಮಾಪನ ಕುಲಸಚಿವರಾದ ಡಾ.ಸತೀಶ್ ಅಣ್ಣಿಗೇರಿ ಹೇಳಿದ್ದಾರೆ.

ಮುಂದಿನ ಒಂದು ವಾರದೊಳಗೆ ಬಾಕಿ ಇರುವ 5,3,2 ಮತ್ತು 1ನೇ ಸೆಮಿಸ್ಟರ್ ಫಲಿತಾಂಶವನ್ನೂ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.[ವಿ ಟಿ ಯು ಐದು ಮತ್ತ ಆರನೇ ಸೆಮಿಸ್ಟರ್ ಫಲಿತಾಂಶ ಪ್ರಕಟ]

ಹಿಂದಿನ ಸೆಮಿಸ್ಟರ್ಗಳಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ಕ್ರ್ಯಾಶ್ ಕೋರ್ಸ್ ನಡೆಸಲಾಗಿತ್ತು. ಅದರ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಮರು ಮೌಲ್ಯಮಾಪನ ಪ್ರಾರಂಭವಾಗಿದೆ ಎಂದು ಅವರು ಹೇಳಿದ್ದಾರೆ.

ವಿಟಿಯು ಫಲಿತಾಂಶ

ಏಪ್ರಿಲ್ 15 ರೊಳಗೆ ಎಲ್ಲಾ ಫಲಿತಾಂಶವನ್ನು ಪ್ರಕಟ ಮಾಡುವುದಾಗಿ ಹೇಳಿದ್ದ ವಿಟಿಯು ಏಪ್ರಿಲ್ 12 ರಂದು ಅಂತಿಮ ವರ್ಷದ ವಿದ್ಯಾರ್ಥಿಗಳ ಮತ್ತು ಕ್ರ್ಯಾಶ್ ಕೋರ್ಸ್ ಪರೀಕ್ಷೆಗಳ ಫಲಿತಾಂಶಗಳನ್ನಷ್ಟೇ ಪ್ರಕಟಿಸಿತ್ತು. ಇದರ ಜೊತೆಯಲ್ಲೇ ದಿನಾಂಕ 17-04-2017 ಮರುಮೌಲ್ಯಮಾಪನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ vtu.ac.in ಗಮನಿಸಿ

ಪ್ರಕಟವಾಗಿರುವ ಫಲಿತಾಂಶಗಳು

  • ಕ್ರ್ಯಾಶ್ ಕೋರ್ಸ್ ಸೇರಿದಂತೆ ನಾಲ್ಕು, ಆರು ಮತ್ತು ಎಂಟನೇ ಸೆಮಿಸ್ಟರ್ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
  • ಎಂ.ಟೆಕ್ ಪ್ರಾಜೆಕ್ಟ್ ರಿಸಲ್ಟ್ ಪ್ರಕಟವಾಗಿದೆ.

ಪ್ರಕಟವಾಗಬೇಕಿರುವ ಫಲಿತಾಂಶ

ಒಂದು ಎರಡು ಮತ್ತು ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶಗಳು ಪ್ರಕಟಗೊಳ್ಳಬೇಕಿವೆ.

ಡಿಸೆಂಬರ್ 2016ರಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ನ ವಿವಿಧ ಸೆಮಿಸ್ಟರ್‌ಗಳ ಪರೀಕ್ಷೆಯು ನಡೆದಿತ್ತು. ಪರೀಕ್ಷೆ ಮುಗಿದು ನಾಲಕ್ಕು ತಿಂಗಳುಗಳು ಕಳೆದರು ಫಲಿತಾಂಶ ಪ್ರಕಟವಾಗದ ಕಾರಣ ಅನೇಕ ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತ ಪಡಿಸಿದ್ದರು.

ವಿಳಂಬಕ್ಕೆ ಕಾರಣ

ಕಳೆದ 7ರಿಂದ 8 ವರ್ಷಗಳ ಕಾಲ ಚೆನ್ನೈ ಮೂಲದ ಮೈಂಡ್ ಲಾಜಿಕ್ಸ್ ಎಂಬ ಸಾಫ್ಟ್ ವೇರ್ ಸಂಸ್ಥೆ ಗೆ ಮೌಲ್ಯಮಾಪನದ ನಂತರ ಬಹುಮುಖ್ಯ ಹಾಗೂ ತ್ವರಿತ ಕೈಗೊಳ್ಳಬೇಕಾದ ಟ್ಯಾಬುಲೇಶನ್ ಹೊಣೆ ವಹಿಸಿತ್ತು. ಆ ಸಂಸ್ಥೆಯು ತ್ವರಿತ ಹಾಗೂ ಸರಿಯಾದ ರೀತಿಯಲ್ಲಿ ತನ್ನ ಹೊಣೆ ನಿಭಾಯಿಸುತ್ತಿದ್ದರಿಂದ ಪರೀಕ್ಷೆ ನಡೆದ 15 ದಿನಗಳಲ್ಲೇ ಫಲಿತಾಂಶ ದೊರೆಯುತ್ತಿತ್ತು. ಆದರೆ, ಕಳೆದ ಜೂನ್ ನಂತರ ಆ ಸಂಸ್ಥೆಯ ಬದಲಿಗೆ ರಾಜ್ಯ ಸರಕಾರವು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ)ಗೆ ಟ್ಯಾಬುಲೇಶನ್ ಹೊಣೆವಹಿಸಿತು. ಪೂರ್ವ ಸಿದ್ಧತೆಯಿಲ್ಲದೇ ಬದಲಾವಣೆ ಮಾಡಿದ್ದರಿಂದ ಕಳೆದೊಂದು ವರ್ಷದಿಂದ ಪರೀಕ್ಷೆ ಫಲಿತಾಂಶ ವಿಳಂಬವಾಗಿಯೇ ಪ್ರಕಟಗೊಳ್ಳುತ್ತಿದೆ.

ಈ ಹಿಂದೆಯೂ ವಿಳಂಬ

ಜೂನ್-ಜುಲೈನಲ್ಲಿ ವಿಟಿಯು ನಡೆಸಿದ ಪರೀಕ್ಷೆಯ ಫಲಿತಾಂಶ, ಅಕ್ಟೋಬರ್ ನಲ್ಲಿ ಪ್ರಕಟಿಸಲಾಗಿತ್ತು. ಇದೀಗ ಡಿಸೆಂಬರ್ ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಐದು ತಿಂಗಳುಗಳಾದರು ಪ್ರಕಟಗೊಂಡಿಲ್ಲ. ಫಲಿತಾಂಶ ಪ್ರಕಟಣೆಗೆ ಇನ್ನೂ ಒಂದು ವಾರ ಕಾಯಬೇಕಿದೆ.

English summary
Visvesvaraya Technological University (VTU) will declare 7th semester results today at it’s official page.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia