ಕನ್ನಡದಲ್ಲಿ ತಾಂತ್ರಿಕ ಶಬ್ದಕೋಶ ತರಲು ವಿಟಿಯು ಯೋಜನೆ

Posted By:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕನ್ನಡದಲ್ಲಿ ತಾಂತ್ರಿಕ ಶಬ್ದಕೋಶ ತರುವ ಪ್ರಯತ್ನಕ್ಕೆ ಮುಂದಾಗಿದ್ದು ಈಗಾಗಲೇ ಅದಕ್ಕಾಗಿ ಯೋಜನೆಯೊಂದನ್ನು ರೂಪಿಸಿದೆ.

ಇಂಗ್ಲಿಷ್‌ನಲ್ಲಿರುವ ತಾಂತ್ರಿಕ ಶಬ್ದಗಳನ್ನು ಹಾಗೂ ನುಡಿಗಟ್ಟುಗಳನ್ನು ಕನ್ನಡಕ್ಕೆ ಅನುವಾದಿಸಿ 'ತಾಂತ್ರಿಕ ಶಬ್ದಕೋಶ' ಹೊರ ತರುವುದು ವಿಟಿಯು ಉದ್ದೇಶವಾಗಿದೆ.

ಪಠ್ಯಪುಸ್ತಕ ಮರುಬಳಕೆ: ಎಲ್ಲಾ ಶಾಲೆಗಳಲ್ಲೂ '‍‍‍‍ಪುಸ್ತಕ ಬ್ಯಾಂಕ್' ಪ್ರಾರಂಭಿಸಲು ಸೂಚನೆ

ಗ್ರಾಮೀಣ ಭಾಗದಿಂದ ಇಂಜಿನಿಯರಿಂಗ್ ಸೇರುವ ವಿದ್ಯಾಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಮೊದಲ ಸೆಮಿಸ್ಟರ್‌ನಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡುವುದನ್ನು ಪ್ರಸಕ್ತ ಸಾಲಿನಿಂದ ಕಡ್ಡಾಯಗೊಳಿಸಲಾಗಿರುವುದರಿಂದ ಹೊರಗಿನವರು ಕೂಡ ಇದರ ಪ್ರಯೋಜನ ಪಡೆಯಬಹುದಾಗಿದೆ.

ವಿಟಿಯುಯಿಂದ ಕನ್ನಡದಲ್ಲಿ ತಾಂತ್ರಿಕ ಶಬ್ದಕೋಶ

ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ 'ಎಂಜಿನಿಯರಿಂಗ್‌ನ ವಿವಿಧ ಕೋರ್ಸುಗಳಿಗೆ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಪ್ರತಿ ವರ್ಷ ಸೇರುತ್ತಾರೆ. ಅವರಿಗೆ ಇಂಗ್ಲಿಷ್‌ನಲ್ಲಿ ಗೊತ್ತಿರುವ ಅನೇಕ ಪದಗಳಿಗೆ ಕನ್ನಡದಲ್ಲಿನ ಸರಿಯಾದ ಅರ್ಥ ಗೊತ್ತಿರುವುದಿಲ್ಲ. ಇದರಿಂದ ಅವರ ಕಲಿಕೆಗೆ ಹಾಗೂ ವಿಷಯದ ಗ್ರಹಿಕೆಗೆ ತೊಂದರೆ ಆಗುತ್ತಿರುವುದನ್ನು ಗಮನಿಸಲಾಗಿದೆ. ಗ್ರಹಿಸುವುದು ಒಂದಾದರೆ,‌ ವಾಸ್ತವವಾದ ಅರ್ಥ ಬೇರೆಯದೇ ಆಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ತಾಂತ್ರಿಕ ಶಬ್ದಕೋಶವನ್ನು ಕನ್ನಡದಲ್ಲಿ ತರಲಾಗುತ್ತಿದೆ' ಎಂದು ಹೇಳಿದರು.

ಅಡುಗೆ ಅನಿಲ ಸಿಲಿಂಡರ್‌, ದೂರವಾಣಿ, ಮೊಬೈಲ್‌ ಫೋನ್‌ ತಂತ್ರಜ್ಞಾನ ಸೇರಿದಂತೆ 90ಕ್ಕೂ ಹೆಚ್ಚು ವಿಷಯಗಳಿಗೆ ಸಂಬಂಧಿಸಿದಂತೆ ಹೊತ್ತಿಗೆಗಳನ್ನು ಸರಳವಾದ ಕನ್ನಡದಲ್ಲಿ ಪ್ರಕಟಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಶಬ್ದಕೋಶ ಯೋಜನೆ ರೂಪಿಸಲಾಗಿದೆ. ಸರಳವಾಗಿ ಅರ್ಥವಾಗುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಅಲ್ಲದೆ ತಾಂತ್ರಿಕ ಶಿಕ್ಷಣ ಸಾಮಾನ್ಯರಿಗೂ ಅರ್ಥವಾಗಲಿ ಎನ್ನುವ ಉದ್ದೇಶದಿಂದ ಆರಂಭಿಸಿರುವ ಪುಸ್ತಕಗಳ ಮಾಲಿಕೆಯಲ್ಲಿ ಹಲವು ಪುಸ್ತಕಗಳನ್ನು ಹೊರತರಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ನುರಿತ ಅನುವಾದಕರು, ತಜ್ಞರನ್ನು ಬಳಸಿಕೊಂಡು ಶಬ್ದಕೋಶ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.ಶಬ್ದಕೋಶವನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ 220 ಕಾಲೇಜುಗಳಿಗೂ ನೀಡಲಾಗುವುದು. ಗ್ರಂಥಾಲಯಗಳಲ್ಲಿ ಅವುಗಳನ್ನು ಇಡಲಾಗುವುದು. ಇದನ್ನು ವಿದ್ಯಾರ್ಥಿಗಳು ನೋಡಬಹುದು. ಪ್ರಸಾರಾಂಗದ ಮೂಲಕ ಖರೀದಿಸಲೂಬಹುದು. ಯೋಜನೆಯ ಹೊಣೆಯನ್ನು ಪ್ರಸಾರಾಂಗದ ನಿರ್ದೇಶಕ ಪುಟ್ಟಬಸಯ್ಯ ಅವರಿಗೆ ವಹಿಸಲಾಗಿದ್ದು, ವರ್ಷದೊಳಗೆ ಮುದ್ರಿಸುವ ಗುರಿ ಇದೆ' ಎಂದು ಅವರು ಮಾಹಿತಿ ನೀಡಿದರು.

ಶಬ್ದಕೋಶದ ಆ್ಯಪ್

ಪುಸ್ತಕ ರೂಪದಲ್ಲಿ ಮಾತ್ರವಲ್ಲದೆ ಇದಕ್ಕಾಗಿ ಪ್ರತ್ಯೇಕ ಆ್ಯಪ್ ಕೂಡ ಅಭ್ಭಿವೃದ್ದಿ ಪಡಿಸುವ ಯೋಜನೆಯನ್ನು ವಿಟಿಯು ಹೊಂದಿದೆ.
'ಇಂದಿನ ವಿದ್ಯಾರ್ಥಿಗಳು ಎಲ್ಲವನ್ನೂ ಮೊಬೈಲ್‌ನಲ್ಲಿಯೇ ಬಯಸುತ್ತಿದ್ದಾರೆ. ಪಠ್ಯವನ್ನು ಆನ್‌ಲೈನ್‌ನಲ್ಲಿ ಓದುತ್ತಾರೆ. ಹೀಗಾಗಿ ಶಬ್ದಕೋಶವನ್ನೂ ಆ್ಯಪ್ (ಅಪ್ಲಿಕೇಶನ್‌) ಮೂಲಕ ದೊರೆಯುವಂತೆ ಮಾಡುವುದಕ್ಕೆ ಸಾಧ್ಯವಿದೆಯೇ ಎಂದು ಯೋಚಿಸುತ್ತಿದ್ದೇವೆ. ಇಂಗ್ಲಿಷ್‌ ಪದ ಟೈಪ್‌ ಮಾಡಿದರೆ ಅದಕ್ಕೆ ಕನ್ನಡದ ಅರ್ಥಗಳು ತೆರೆದುಕೊಳ್ಳುವಂತೆ ಆ್ಯಪ್‌ ಅಭಿವೃದ್ಧಿಪಡಿಸುವ ಉದ್ದೇಶ ಇದೆ' ಎಂದು ಕುಲಪತಿಗಳು ಹೇಳಿದರು.

English summary
Visvesvaraya Technological University (VTU) has initiated a project that has already come up with an attempt to bring technical vocabulary in Kannada.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia