ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

ಸ್ಟ್ರೆಂಥ್ ಹಾಗೂ ವೀಕ್‌ನೆಸ್ - ನೀವು ಯಾವತ್ತಾದ್ರೂ ಇಂಟರ್ವ್ಯೂ ಎಂಬ ಹಾಟ್‌ ಸೀಟ್‌ನಲ್ಲಿ ಕುಳಿತಿರುತ್ತೀರಿ ಅಷ್ಟೇ ಅಲ್ಲ ಈಗಲೂ ಕೂಡಾ ಕುಳಿತುಕೊಳ್ಳುತ್ತಾ ಇರುತ್ತೀರಿ.

ಸ್ಟ್ರೆಂಥ್ ಹಾಗೂ ವೀಕ್‌ನೆಸ್ ... ಇಂಟರ್ವ್ಯೂನಲ್ಲಿ ಕೇಳುವ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ರೆ ಕೆಲಸ ಗ್ಯಾರಂಟಿ ಗೊತ್ತಾ

 

ನಿಮ್ಮನ್ನ ಇಂಟರ್ವ್ಯೂ ಮಾಡುವ ಮ್ಯಾನೇಜರಿಗೆ ನೀವು ನಿಮ್ಮ ಬಗ್ಗೆ ಹೇಳುತ್ತೀರಿ. ನಿಮ್ಮ ಈ ಮೊದಲಿನ ಕೆಲಸದ ಅನುಭವ, ಈ ಹಿಂದೆ ಕೆಲಸ ಮಾಡಿದ ಕಂಪನಿ, ಹಾಗೂ ಅಲ್ಲಿನ ನಿಮ್ಮ ಕೆಲಸದ ಜವಬ್ದಾರಿ ನಿಮ್ಮ ಸ್ಥಾನದ ಬಗ್ಗೆ ತಿಳಿಸಿರುತ್ತೀರಿ. ಆದ್ರೆ ನಿಮ್ಮ ಸ್ಟ್ರೆಂಥ್ ಹಾಗೂ ವೀಕ್‌ನೆಸ್ ಏನು ಎಂದು ಸಂದರ್ಶನಕಾರನು ಪ್ರಶ್ನಿಸಿದ್ರೆ ಮಾತ್ರ ಒಂದು ಕ್ಷಣ ಗಡಿಬಿಡಿಯಾಗುತ್ತೀರಿ.

ಸ್ಟ್ರೆಂಥ್ ಬಗ್ಗೆ ಕೂಲ್ ಆಗಿ ನೀವು ಉತ್ತರಿಸಿದ್ರೂ ವೀಕ್‌ನೆಸ್ ಬಗ್ಗೆ ಉತ್ತರಿಸುವಾಗ ಯಾಕೋ ತೊದಲುತ್ತೀರಿ. ಆದ್ರೆ ಹಾಗೆ ಮಾಡುವುದರಿಂದ ನೀವು ಕೆಲಸ ಪಡೆದುಕೊಳ್ಳುವುದರಲ್ಲಿ ವಿಫಲರಾಗುವ ಸಂಭವವಿರುತ್ತದೆ. ನೋಡಿ ಪ್ರತಿಯೊಬ್ಬರಿಗೂ ವೀಕ್‌ನೆಸ್ ಎಂಬುವುದು ಇರುತ್ತದೆ. ಆದ್ರೆ ಸಂದರ್ಶನ ವೇಳೆ ಸಂದರ್ಶನಕಾರರಿಗೆ ನಿಮ್ಮ ವೀಕ್‌ನೆಸ್ ನ್ನು ನೀವು ಹೇಗೆ ಕಾಂಫಿಡೆನ್ಸ್ ನಿಂದ ಹೇಳುತ್ತೀರಿ ಎಂಬುವುದು ಇಂಪೋರ್ಟೆಂಟ್ ಆಗಿರುತ್ತದೆ. ಹಾಗಾಗಿ ಸಂದರ್ಶನ ವೇಳೆ ಕೇಳುವ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬ ಮಾಹಿತಿ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

ALSO READ: ಎಸ್‍ಎಸ್‍ಸಿ ಕಾಂಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಯಾವುದು ಬೆಸ್ಟ್ ಬುಕ್ಸ್ ಗೊತ್ತಾ?

ಸ್ಟ್ರೆಂಥ್ ಬಗ್ಗೆ ವಿವರಿಸುವಾಗ:

ನಿಮ್ಮ ಸ್ಕಿಲ್ ಬಗ್ಗೆ ಯೋಚಿಸಿ ಹಾಗೂ ಯಾವುದರಲ್ಲಿ ನೀವು ಗುಡ್ ಎಂಬುವುದು ತಿಳಿದುಕೊಳ್ಳಿ. ಯಾವುದೇ ಇಂಟರ್ವ್ಯೂಗೆ ಹೋಗುವ ಮುನ್ನ ಈ ಬಗ್ಗೆ ತಿಳಿದುಕೊಂಡು ತಯಾರಾಗಿ ಹೋಗುವುದು ಉತ್ತಮ. ಮೊದಲಿಗೆ ನಿಮ್ಮ ಸ್ಕಿಲ್ ಬಗ್ಗೆ ಒಂದು ಲಿಸ್ಟ್ ಮಾಡಿ. ಆಮೇಲೆ ಅದನ್ನ ಪರ್ಸನಲ್ ಸ್ಕಿಲ್ ಹಾಗೂ ಪ್ರೊಫೆಶನಲ್ ಸ್ಕಿಲ್ ಎಂದು ಎರಡು ವಿಭಾಗಗಳನ್ನಾಗಿ ವಿಂಗಡಿಸಿ. ಆದಷ್ಟು ಬೇಗ ಲಿಸ್ಟ್ ಮಾಡಿಕೊಂಡು, ಅದರಲ್ಲಿ ಮುಖ್ಯವಾಗಿರುವ ಸ್ಕಿಲ್ ಬಗ್ಗೆ ಸಂದರ್ಶನಕಾರರಿಗೆ ತಿಳಿಸಿ.

 

ಇನ್ನು ಸ್ಟ್ರೆಂಥ್ ಬಗ್ಗೆ ವಿವರಿಸುವಾಗ ಅಗತ್ಯವಿಲ್ಲದ ಸ್ಕಿಲ್ ಬಗ್ಗೆ ಹೇಳುತ್ತಾ ಹೋಗಬೇಡಿ. ನೀವು ಯಾವ ಹುದ್ದೆಗೆ ಸಂದರ್ಶನಕ್ಕಾಗಿ ಬಂದಿದ್ದೀರೋ ಆ ಹುದ್ದೆಗೆ ಹೋಲುವಂತಹ ಸ್ಕಿಲ್ ನಿಮ್ಮಲ್ಲಿ ಇದ್ದರೆ ಅದನ್ನ ಸಂದರ್ಶನಕಾರರ ಮುಂದೆ ತಿಳಿಸಿ ವಿನಾಃ ಹುದ್ದೆಗೆ ಸಂಬಂಧವಿಲ್ಲದ ಸ್ಕಿಲ್ ಪಟ್ಟಿ ಅವರ ಮುಂದೆ ಹೇಳುತ್ತಾ ಹೋದರೆ ಪ್ರಯೋಜನವಿಲ್ಲದಂತಾಗಬಹುದು ಎಚ್ಚರ.

ALSO READ: ಎಕ್ಸ್‍ಪೀರಿಯೆನ್ಸ್ ಇಲ್ಲದೆನೇ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ವೀಕ್‌ನೆಸ್ ಬಗ್ಗೆ ವಿವರಿಸುವಾಗ:

ಅದೆಷ್ಟೋ ವಿಚಾರದಲ್ಲಿ ನೀವು ಹಿಂದೆ ಬಿದ್ದಿರಬಹುದು. ಒಂದು ವೇಳೆ ಈ ಪ್ರಶ್ನೆ ಕೇಳುವಾಗ ನಿಮಗೆ ಹೇಗೆ ಉತ್ತರಿಸುವುದು ಎಂಬುವುದು ತಿಳಿಯದೇ ಹೋದರೆ, ನಿಮಗೆ ನೀವೇ ಪರ್ಸನಾಲಿಟಿ ಕ್ವಿಜ್ ಮಾಡಿಕೊಳ್ಳಿ. ಇದರಿಂದ ನೀವು ಯಾವ ವಿಷಯದಲ್ಲಿ ಹಿಂದೆ ಬಿದ್ದಿದ್ದೀರಾ ಎಂಬುವುದು ತಿಳಿಯುತ್ತದೆ. ಇದೆಲ್ಲಾ ತಯಾರಿಗಳನ್ನು ಸಂದರ್ಶನಕ್ಕೆ ಹಾಜರಾಗುವ ಮುನ್ನ ಮಾಡಿಕೊಳ್ಳತಕ್ಕದ್ದು.

ಸಂದರ್ಶನವೇಳೆ ನಿಮ್ಮ ಸ್ಟ್ರೆಂಥ್ ಬಗ್ಗೆ ನೀವು ಸರಾಗವಾಗಿ ಮಾತನಾಡಿ, ವೀಕ್‌ನೆಸ್ ಬಗ್ಗೆ ತೊದಲಿದ್ರೆ, ಇದರರ್ಥ ನೀವು ನಿಮ್ಮ ಒಳ್ಳೆತನದ ಬಗ್ಗೆ ಮಾತ್ರ ಮಾತನಾಡಬಲ್ಲಿರೀ ಎಂದು ಸಂದರ್ಶನಕಾರರಿಗೆ ತಿಳಿಯುವುದು. ಯಾವತ್ತೂ ಕೂಡಾ ನಿಮ್ಮ ಗ್ರೇಟೆಸ್ಟ್ ಸ್ಟ್ರೆಂಥ್ ಹಾಗೂ ಗ್ರೇಟೆಸ್ಟ್ ವೀಕ್‌ನೆಸ್ ಬಗ್ಗೆ ಮಾತನಾಡಬೇಡಿ.

ಸಂದರ್ಶನಕಾರರು ನಿಮ್ಮ ಬಳಿ ವೀಕ್‌ನೆಸ್ ಬಗ್ಗೆ ಪ್ರಶ್ನಿಸಿದಾಗ, ನೀವು ನಿಮ್ಮ ತಪ್ಪುಗಳನ್ನ ಹೆಗೆ ಒಪ್ಪಿಕೊಳ್ಳುತ್ತೀರಾ , ಮುಂದೆ ಕಂಪನಿಯಲ್ಲಿ ನಿಮ್ಮಿಂತ ಏನಾದ್ರೂ ತಪ್ಪಾದಾಗ ಅದನ್ನ ನೀವು ಹೇಗೆ ಒಪ್ಪಿಕೊಂಡು, ಮ್ಯಾನೇಜ್ ಮಾಡಬಲ್ಲಿರೀ ಎಂದು ಪರೀಕ್ಷಿಸಲು ನಿಮ್ಮ ಬಳಿ ಈ ಪ್ರಶ್ನೆಗಳನ್ನ ಕೇಳುತ್ತಾರೆ. ಹಾಗಾಗಿ ಈ ಪ್ರಶ್ನೆ ಕೇಳಿದಾಗ ಸಾಧ್ಯವಾದಷ್ಟು ಪರ್ಸನಲ್ ಡ್ರಾಮಾ ಮಾಡುವುದು ತಪ್ಪಿಸಿ, ಹಾಗೂ ನಿಮ್ಮ ವಿಕ್‌ನೆಸ್ ಹೇಳುವಾಗ ಕಾಂಫಿಡೆನ್ಸ್ ಆಗಿರಿ ಜತೆಗೆ ಅದಕ್ಕೆ ಪ್ರತ್ಯೇಕವಾದ ಸಬೂಬು ಬೇಡ.

ALSO READ: ಯಶಸ್ಸು... ಕೈ ಹಿಡಿಯಬೇಕಾದ್ರೆ ನೀವೇನು ಮಾಡಬೇಕು ಗೊತ್ತಾ?

ಹಾಗಾಗಿ ಈ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿ. ನನ್ನಲ್ಲಿ ಮ್ಯಾನೇಜಿರಿಯಲ್ ಸ್ಕಿಲ್ ಸ್ವಲ್ಪ ಕಡಿಮೆ ಇದೆ. ಹಾಗಂತ ನನಗೆ ಟೀಂ ಲೀಡ್ ಮಾಡುವ ಸಾಮರ್ಥ್ಯ ಇಲ್ಲ ಎಂದಲ್ಲ. ನೆಗಟೀವ್ ಟೀಂನ್ನ ಸರ್ಪೋಟೀವ್ ಟೀಂ ಆಗಿಸಲು ಸ್ವಲ್ಪ ಸಮಯ ನಂಗೆ ಬೇಕಾಗಬಹುದು . ಈಗಾಗಲೇ ನಾನು ನನ್ನ ಈ ಸ್ಕಿಲನ್ನ ಇಂಪ್ರೂವ್ ಮಾಡಿಕೊಂಡಿದ್ದೇನೆ ಹಾಗೂ ಈಗಲೂ ಸಹ ಬೆಸ್ಟ್ ಆಗಿ ವರ್ಕ್ ಮಾಡಲು ಟ್ರೈ ಮಾಡುತ್ತಾ ಇದ್ದೇನೆ ಎಂದು ಉತ್ತರಿಸಿ.

For Quick Alerts
ALLOW NOTIFICATIONS  
For Daily Alerts

English summary
In Interview time You tell to the Interviwer a number of things about yourself, highlight your experience and talk about your previous work profile and responsibilities. Just when you think that things could be better, you’re expected to answer a question you dreaded the most- Tell me about your biggest strength and weakness.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X